ಮಂಗಳವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತೆ
ನಮಸ್ಕಾರ ಸ್ನೇಹಿತರೆ, ಮಂಗಳವಾರ ಹುಟ್ಟಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ? ಅವರು ಏನು ಮಾಡಿದರೆ ಅದೃಷ್ಟ ಬರುತ್ತದೆ? ಅವರ ಅದೃಷ್ಟ ಸಂಖ್ಯೆ ಯಾವುದು? ಹಾಗೆ ಅವರ ಅದೃಷ್ಟದ ಬಣ್ಣ ಯಾವುದು? ಈ ರೀತಿಯಾದಂತಹ ಸಂಪೂರ್ಣವಾದಂತಹ ಮಾಹಿತಿಗಳನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ
ಸ್ನೇಹಿತರೆ ಮಂಗಳಗ್ರಹವೇ ಮಂಗಳವಾರದ ಅಧಿಪತಿ ಮಂಗಳ ಗ್ರಹದ ಗುಣಲಕ್ಷಣಗಳನ್ನು ಗಮನಿಸಿದರೆ ಈ ದಿನದಂದು ಹುಟ್ಟಿದವರ ಗುಣಸ್ವಭಾವಗಳನ್ನು ಕೂಡ ಅರ್ಥಮಾಡಿಕೊಳ್ಳಬಹುದು ಆದರೂ ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ ಅರಿತುಕೊಳ್ಳುವುದು ಮತ್ತು ಅವರ ನಡುವಳಿಕೆಗಳನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ ಯಾಕೆಂದರೆ ಮಂಗಳ ಗ್ರಹ ಆ ಮಟ್ಟಿಗೆ ನಿಗೂಢ ಅದನ್ನು ಕೆಂಪುಗ್ರಹವೆಂದೇ ಕರೆಯಲಾಗುತ್ತದೆ ಇಲ್ಲಿ ಸದಾ ಧೂಳಿನ ಸುಂಟರಗಾಳಿಗಳು ಹೋರಾಡುತ್ತಿರುತ್ತವೆ ಮಂಗಳವಾರದಂದು ಹುಟ್ಟಿದವರು ಕೂಡ ಹೋರಾಡುವ ಸ್ವಭಾವವನ್ನು ಹೊಂದಿರುತ್ತಾರೆ ಎಲ್ಲಾ ಕಷ್ಟಗಳನ್ನು ಸಂಕಷ್ಟಗಳನ್ನು ಹೋರಾಡಿ ಜೈಸುವ ಗುಣ ಈ ದಿನ ಹುಟ್ಟಿದವರಿಗೆ ಇರುತ್ತದೆ.
ಅವರ ದಾರಿಯಲ್ಲಿ ಬರುವ ಯಾವುದೇ ಸಂಕಷ್ಟಗಳು ಅವರನ್ನು ಹಿಮ್ಮೆಟ್ಟಿಸುವುದಿಲ್ಲ ಮತ್ತು ಅವರನ್ನು ಪ್ರೇರೇಪಿಸುತ್ತದೆ ಅವರ ಆಲೋಚನೆಗಳು, ಉದ್ದೇಶಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡುತ್ತಿರುತ್ತಾರೆ ಅವರಿಗೆ ಹೋರಾಟ ಮಾಡಲು ಆಯುಧಗಳು ಬೇಕಾಗಿಲ್ಲ ಕೇವಲ ಬುದ್ಧಿ ಶಕ್ತಿಯಿಂದಲೇ ಹೋರಾಡುತ್ತಾರೆ ಮಂಗಳವಾರ ಹುಟ್ಟಿದವರ ವೃತ್ತಿಜೀವನ ಸವಾಲುಗಳಿಂದ ಕೂಡಿರುತ್ತದೆ ಈ ದಿನ ಹುಟ್ಟಿದವರು ಹೆಚ್ಚು ಧೈರ್ಯವಂತರಾಗಿರುತ್ತಾರೆ ಮತ್ತು ನಿಜವಾದ ಹೋರಾಟಗಾರರಾಗಿರುತ್ತಾರೆ
ಬ್ಯಾಂಕಿಂಗ್ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅಕೌಂಟೆನ್ಸಿ ಮುಂತಾದ ಕೆಲಸಗಳಲ್ಲಿ ಅವರಿಗೆ ಸ್ಥಾನ ದೊರೆಯುತ್ತದೆ ಮತ್ತು ಇಂತಹ ವೃತ್ತಿ ಇವರಿಗೆ ಹೇಳಿಮಾಡಿಸಿದ ಆಗಿರುತ್ತದೆ, ಈ ದಿನ ಹುಟ್ಟಿದವರು ವೃತ್ತಿಜೀವನದಲ್ಲಿ ಚಾಲೆಂಜ್ ಆಗಿರುವ ಕಾರ್ಯಗಳನ್ನು ಮಾಡುವುದರಲ್ಲಿ ನಿಪುಣರಾಗಿರುತ್ತಾರೆ, ಬಾಸ್ ಗೆ ಸವಾಲನ್ನು ಎಸೆದು ಹೊಸ ಉದ್ಯಮ ಹೊಸ ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸುವಲ್ಲಿ ಇಂತಹವರೇ ಹೆಚ್ಚು ಹಾಗಾಗಿ ಮಂಗಳವಾರ ಹುಟ್ಟಿದವರು ಅತ್ಯಂತ ಧೈರ್ಯ ಶಾಲಿಗಳು ಆಗಿರುತ್ತಾರೆ ಮಂಗಳವಾರ ಹುಟ್ಟಿದವರ ಶುಭ ಬಣ್ಣ ಕೇಸರಿ ಬಣ್ಣ, ಹಾಗೂ ಶುಭ ಸಂಖ್ಯೆ 3