ಹವಳವನ್ನು ಯಾವ ರಾಶಿಯವರು ಧರಿಸಿದರೆ ಶುಭಫಲ, ಯಾರು ಧರಿಸಲೇಬಾರದು.

Featured Article

ಹವಳವು ಕುಜ ಅಥವಾ ಮಂಗಳ ಗ್ರಹಕ್ಕೆ ಸೇರಿದ ಅದೃಷ್ಟದ ಹರಳು ಅಥವಾ ರತ್ನ ವಾಗಿದೆ. ಸಾಮಾನ್ಯವಾಗಿ ಇದು ಕೆಂಪು ಬಣ್ಣ ದಿಂದ ಕೂಡಿರುತ್ತದೆ. ಈ ಹವಳವನ್ನು ಮಂಗಲ ಕಾರ್ಯ ಗಳಿಗಾಗಿ ಬಳಸುತ್ತಾರೆ. ಉದಾಹರಣೆಗೆ ಕರಿಮಣಿ ಸರದಲ್ಲಿ ಹವಳವನ್ನು ಜೋಡಿಸಲಾಗುತ್ತದೆ.

ಯಾವುದೇ ಜಾತಕದಲ್ಲಿ ಮಂಗಳನು ಶುಭ ಸ್ಥಾನದಲ್ಲಿದ್ದು ಅವರು ಹವಳವನ್ನು ಧರಿಸಿದ್ದೇ ಆದಲ್ಲಿ ಜೀವನದಲ್ಲಿ ಯಾವುದೇ ಕಷ್ಟ ನಷ್ಟಗಳು ಎದುರಾಗುವುದಿಲ್ಲ.ಹವಳವು ಸಮುದ್ರದಲ್ಲಿ ದೊರೆಯುವ ರತ್ನವಾಗಿದೆ. ಈ ರತ್ನವನ್ನು ಧರಿಸಿದರೆ ಭೂತ ಪ್ರೇತ ಪಿಶಾಚಿ ಗಳ ಬಾಧೆಯಿಂದ ಪಾರಾಗಬಹುದು. ಮೇಷ ಲಗ್ನದವರು ಹವಳವನ್ನು ಸದಾಕಾಲ ಅಂತ ಅನಿಸಬಹುದು.

ಇದರಿಂದಾಗಿ ಆಯುಷ್ಯವೃದ್ಧಿ ಉತ್ತಮ ಆರೋಗ್ಯ ಯಶಸ್ಸು, ಕೀರ್ತಿ ಗೌರವ ಗಳು ಲಭಿಸುತ್ತದೆ. ಕಟಕ ಲಗ್ನಕ್ಕೆ ಮಂಗಳನು ಯೋಗಕಾರಕನಾಗುತ್ತಾನೆ. ಆದ್ದರಿಂದ ಇವರು ಸದಾ ಕಾಲ ಅವಳ ವನ್ನು ಧರಿಸಬಹುದು. ಇದರಿಂದ ಸಂತಾನ ಲಾಭವಿರುತ್ತದೆ, ಸುಖ ಜೀವನ ನಡೆಸುತ್ತಾರೆ.ಅಲ್ಲದೇ ಮೇಲಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ.

ಪ್ರಮುಖವಾಗಿ ಸ್ತ್ರೀಯರಿಗೆ ವಿಶೇಷವಾದಂತಹ ಶುಭಫಲಗಳು ದೊರೆಯುತ್ತವೆ. ಸಿಂಹ ಲಗ್ನಕ್ಕೆ ಮಂಗಳನು ಯೋಗ ಕಾರಕನಾದ ಕಾರಣ ಸದಾ ಕಾಲವನ್ನು ಧರಿಸಬಹುದು. ಇದರಿಂದಾಗಿ ಮಾನಸಿಕ ನೆಮ್ಮದಿ, ಸ್ವಂತ ಭೂಮಿ ಅಥವಾ ಮನೆ ತಾಯಿಯ ಜೊತೆ ಒಳ್ಳೆಯ ಬಾಂಧವ್ಯ ಯಶಸ್ಸು ಲಭಿಸುತ್ತದೆ. ಕನ್ಯಾ ಮತ್ತು ತುಲಾ ಲಗ್ನದಲ್ಲಿ ಜನಿಸಿದವರಿಗೆ.

ಮಂಗಳನು ಅಶುಭ ಕಾರಕನಾಗುತ್ತಾನೆ. ಈ ಕಾರಣ ದಿಂದಾಗಿ ಹವಳವನ್ನು ಧರಿಸಲೇ ಬಾರದು. ತುಲಾ ಲಗ್ನದಲ್ಲಿ ಜನಿಸಿದವರು ಧರಿಸಿದಲ್ಲಿ ದಾಂಪತ್ಯ ದಲ್ಲಿ ಹೊಂದಾಣಿಕೆ ಇರುವುದಿಲ್ಲ. ಬಂಧು ಬಳಗದವರ ಜೊತೆ ಮತ್ತು ಸ್ನೇಹಿತರ ಜೊತೆ ಅನಾವಶ್ಯಕವಾದ ವಾದ ವಿವಾದಗಳು ಉಂಟಾಗುತ್ತದೆ. ವೃಶ್ಚಿಕ ಲಗ್ನದಲ್ಲಿ ಜನಿಸಿದವರು ಸದಾ ಕಾಲವನ್ನು ಧರಿಸಬಹುದು. ಅಪಮೃತ್ಯು ಪರಿಹಾರವಾಗುತ್ತದೆ.

ಸಮಾಜದಲ್ಲಿ ಯಶಸ್ಸು, ಕೀರ್ತಿ, ಗೌರವ ಗಳು ದೊರೆಯುತ್ತವೆ. ಧನುರ್ಲಗ್ನದಲ್ಲಿ ಜನಿಸಿದ ಅವರು ಮಂಗಳನ ದಶಾಭುಕ್ತಿ ಇದ್ದ ವೇಳೆ ಹವಳವನ್ನು ಧರಿಸಬಹುದು. ಇದರಿಂದ ಸಂತಾನ ಲಾಭವಿದೆ. ಬುದ್ಧಿ ಶಕ್ತಿಯೂ ಹೆಚ್ಚುತ್ತದೆ. ಸದಾ ಕಾಲ ಉತ್ಸಾಹದಿಂದ ಇರುತ್ತಾರೆ. ಯಶಸ್ಸು, ಕೀರ್ತಿ ಯು ಸದಾ ಕಾಲ ದೊರೆಯುತ್ತದೆ. ಸ್ವಂತ ವಾಹನ ಮತ್ತು ಭೂಮಿ ಅಥವಾ ಮನೆ ದೊರೆಯುತ್ತದೆ ತಾಯಿಯ ಜೊತೆಯಲ್ಲಿ ಉತ್ತಮ ಬಾಂದವ್ಯ ಉಂಟಾಗುತ್ತದೆ.

ಮಕರ ಲಗ್ನದಲ್ಲಿ ಜನಿಸಿದ ವರು ಕುಂಡಲಿಯಲ್ಲಿ ಕುಜನು ಶುಭ ಸ್ಥಾನದಲ್ಲಿ ಇದ್ದಲ್ಲಿ ಮಾತ್ರ ಕುಜನ ದಶಾ ಭಕ್ತಿಗಳಲ್ಲಿ ಹವಳವನ್ನು ಧರಿಸಬಹುದು. ಇದರಿಂದ ಮಾತ್ರ ಸೌಖ್ಯ ಸ್ವಂತ ಮನೆ ಅಥವಾ ಜಮೀನಿನ ಒಡೆತನ ದೊರೆಯುತ್ತದೆ. ವಾಹನ ಲಾಭ ಇರುತ್ತದೆ. ಹಣದ ತೊಂದರೆಬಾರದು. ಮೀನ ಲಗ್ನಕ್ಕೆ ಮಂಗಳನು ಅತ್ಯಂತ ಶುಭ ಕಾರಿ ಆಗುತ್ತಾನೆ. ಆದ್ದರಿಂದ ಇವರು ಅವಳ ವನ್ನು ಸದಾ ಕಾಲ ಧರಿಸಬಹುದು. ಇದರಿಂದ ವ್ಯವಸಾಯ ದಲ್ಲಿ ಉನ್ನತಿ ಇರುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಪ್ರತಿಷ್ಠೆಯು ದೊರೆಯುತ್ತದೆ.

Leave a Reply

Your email address will not be published. Required fields are marked *