ಮನೆಯ ಮುಖ್ಯದ್ವಾರದ ಬಳಿ ಪ್ರತಿನಿತ್ಯ ರಂಗೋಲಿಯನ್ನು ಹಾಕಬೇಕು. ಇದರಿಂದ ಅಷ್ಟಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳುತ್ತಾರೆ.ಪ್ರತಿನಿತ್ಯ ಮನೆಯ ಹೊಸ್ತಿಲನ್ನು ಅರಿಶಿನದ ನೀರಿನಿಂದ ತೊಳೆದರೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದರ ಜೊತೆಗೆ ಮನೆಯ ಸಂಪತ್ತು ಕೂಡ ವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ.
ಪ್ರತಿದಿನ ಸಂಜೆ ೪ ಕರ್ಪೂರವನ್ನು ತೆಗೆದುಕೊಂಡು, ವೀಳ್ಯದೆಲೆಯ ಮೇಲೆ ಇರಿಸಿ ಮನೆಯ ನಾಲ್ಕು ದಿಕ್ಕಿನಲ್ಲೂ ಕರ್ಪೂರದ ಹೊಗೆಯನ್ನು ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತದೆ.ಯಾವಾಗಲಾದರೂ ಹೊರಗಡೆಯಿಂದ ಒಳಗೆ ಬರುವಾಗ ಮೊದಲು ಬಲಗಾಲನ್ನು ಇಟ್ಟು ಒಳಗೆ ಬರಬೇಕು .
ಹೀಗೆ ಮಾಡುವುದು ಶುಭ ಎಂದು ಹೇಳಲಾಗುತ್ತದೆ ಹಾಗೂ ಮನೆಗೂ ಕೂಡ ಒಳ್ಳೆಯದು.ಮನೆಯ ನೆಲವನ್ನು ಒರೆಸುವಾಗ ಅದಕ್ಕೆ ಕಲ್ಲುಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಒರೆಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ ಹಾಗೆ ಮನೆಯಲ್ಲಿ ಸಂಪತ್ತು ನೆಲೆಸುತ್ತದೆ ಎಂದು ಹೇಳುತ್ತಾರೆ.ಮನೆಯ ಮುಖ್ಯ ದ್ವಾರದ ಬಳಿ ಕಾರಂಜಿ ಅಥವಾ ನೀರಿನ ಹೊಂಡ ಹಾಗೂ ಕಸದ ಬುಟ್ಟಿಯನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ.
ಮನೆಯ ಮುಖ್ಯದ್ವಾರದ ಬಳಿ ಮುಳ್ಳಿನ ಗಿಡ ಇರದಂತೆ ನೋಡಿಕೊಳ್ಳಿ ಇದು ಮನೆಗೆ ಒಳ್ಳೆಯದಲ್ಲ.ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಆಕರ್ಷಿಸುತ್ತದೆ.ಮನೆಯ ಮಲಗುವ ಕೋಣೆಯಲ್ಲಿ, ಒಡೆದ ಪಾತ್ರೆಗಳು ದೇವರ ವಿಗ್ರಹಗಳು ಹಾಗೂ ಕರಿದ ಬಟ್ಟೆಗಳನ್ನು ಇಟ್ಟುಕೊಳ್ಳಬೇಡಿ ಇದು ಅತ್ಯಂತ ಕೆಟ್ಟದ್ದು ಎಂದು ಹೇಳುತ್ತಾರೆ.
ಮನೆಯಲ್ಲಿ ಹೆಣ್ಣು ಮಕ್ಕಳು ಯಾವಾಗಲೂ ಅಳುತ್ತ ಇರಬಾರದು. ಇದು ಮನೆಗೆ ಅಶುಭ ಎಂದು ಹೇಳುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಅತ್ತರೆ ಮನೆಗೆ ಒಳ್ಳೆಯದಲ್ಲ.ಸಂಜೆ ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿ ಮುಖ್ಯದ್ವಾರ ವನ್ನು ತೆಗೆದಿಡಬೇಕು. ಆ ಸಮಯದಲ್ಲಿ ಲಕ್ಷ್ಮೀದೇವಿ ಮನೆಗೆ ಆಗಮಿಸುತ್ತಾಳೆ ಎಂದು ಹೇಳುತ್ತಾರೆ. ಇದು ಮನೆಗೆ ಒಳ್ಳೆಯದು.