ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಳಸ ಎಂದರೆ ಅದು ಲಕ್ಷ್ಮಿಯ ಸ್ವರೂಪ ಅಂತಹ ಕಳಸವನ್ನು ಇಡುವಾಗ ತುಂಬಾ ಎಚ್ಚರವಾಗಿರಿ ಕಳಸಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಲೇಬಾರದು ಎಚ್ಚರ ಕಳಸಕ್ಕೆ ಬೆಳ್ಳಿ, ಇತ್ತಾಳೆ, ತಾಮ್ರದ ಚೆಂಬುಗಳು ಬಹಳ ಶ್ರೇಷ್ಠ ನಿಮ್ಮ ಶಕ್ತಿಗನುಸಾರವಾಗಿ ಇಟ್ಟು ಪೂಜಿಸಿ
ನಿಮ್ಮ ಪೂರ್ವಜರು ಯಾವ ರೀತಿ ಕಳಸ ಸ್ಥಾಪನೆ ಮಾಡಿ ಪೂಜಿಸುತ್ತಿದ್ದರು ಅದೇ ರೀತಿ ನೀವು ಪಾಲಿಸುವುದು ಉತ್ತಮ ಕೆಲವರು ಲಕ್ಷ್ಮಿ ಕಳಸ ಇಡುತ್ತಾರೆ ಇನ್ನು ಕೆಲವರು ಮನೆದೇವರ ಕಳಸ ಇಡುತ್ತಾರೆ ಯಾವುದೇ ಆದರೂ ನಿಯಮ ಪಾಲಿಸುವುದು ಉತ್ತಮ ಒಂದು ವೇಳೆ ನೀವು ಲಕ್ಷ್ಮಿ ಕಳಸ ಇಡುವುದಾದರೆ ಕಳಸಕ್ಕೆ ಮಾಂಗಲ್ಯ ಹಾಕಲೇಬೇಕು .
ಮಾಂಗಲ್ಯ ಇಲ್ಲದಿದ್ದರೆ ಅರಿಶಿಣದ ಕೊಂಬನ್ನಾದರು ಕಟ್ಟಬೇಕು ನೆನಪಿರಲಿ ಕಳಸವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಗೆ ಮೂರು ಅಳತೆ ಇಡಿ ಅಥವಾ ಐದು ಅಳತೆ ಇಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಉಂಗುರದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು.
ಕಳಸಕ್ಕೆ ಶುದ್ಧವಾದ ಚೊಂಬನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಅರಿಶಿನ ಕುಂಕುಮ ಗಂಧ ಹಚ್ಚಿ ಶುದ್ಧವಾದ ನೀರು ಹಾಕಿ ನಂತರ ನಂತರ ಅರಿಶಿಣ ಕುಂಕುಮ ಹಾಕಿ ಸ್ವಲ್ಪ ಹೂವು ಹಾಗೂ ಒಂದು ನಾಣ್ಯ ಯಾವುದಾದರೂ ಸರಿ ಮರಿಯದೆ ಹಾಕಿ ಇದು ಸಂತೋಷ ಮತ್ತು ನೆಮ್ಮದಿಯ ಪ್ರತಿಕ ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಕುವಂತಿರಬೇಕು ಆದರೆ ಚೊಂಬಿನಿಂದ ಚೆಲ್ಲುವಂತಿರಬಾರದು
ತೆಂಗಿನಕಾಯಿ ವಿಷಯಕ್ಕೆ ಬಂದರೆ ಒಳ್ಳೆಯ ತೆಂಗಿನಕಾಯಿ ಆರಿಸಿ ಜೊತೆಗೆ ಜುಟ್ಟು ಇರುವ ತೆಂಗಿನಕಾಯಿ ಇಡಬೇಕು ಕಣ್ಣು ಕಾಣಿಸುವ ತೆಂಗಿನಕಾಯಿ ಇಡುವುದು ಬಹಳ ಮುಖ್ಯ ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ ದಿನ ಕಳಸ ಕದಲಿಸಬಾರದು ಕಳಸ ಕದಲಿಸಿದ ನಂತರ ನೀರನ್ನು ತುಳಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಿ ಯಾರು ತಿಳಿಯಬಾರದು ಎನ್ನುವುದು ನೆನಪಿನಲ್ಲಿರಲಿ.