ಗುರುವಾರ ದಿನವನ್ನು ಭಗವಾನ್ ವಿಷ್ಣುವಿನ ದಿನವೆಂದು ಕರೆಯಲಾಗುತ್ತದೆ. ಗುರುವಾರ ದಿನ ವಿಷ್ಣುವನ್ನು ಪೂಜಿಸಿದರೆ ನಮ್ಮ ಜೀವನದಲ್ಲಿ ಸುಖ, ಶಾಂತಿ, ಸಂಪತ್ತು ಜಾಸ್ತಿ ಆಗುತ್ತದೆ. ಹಾಗೆ ಗುರುವಾರ ದಿನ ಗುರು ಬೃಹಸ್ಪತಿಯನ್ನು ಸಹ ಪೂಜಿಸಲಾಗುತ್ತದೆ. ಯಾರ ಜಾತಕದಲ್ಲಿ ಗುರು ದೋಷ ಇರುತ್ತದೆಯೋ ಮತ್ತು ಯಾವ ವ್ಯಕ್ತಿ ಪ್ರತಿಯೊಂದು ಕಾರ್ಯಗಳಲ್ಲಿ ಸೋಲನ್ನು ಅನುಭವಿಸುತ್ತಾನೆ .
ಹಾಗೂ ಯಾರ ಜಾತಕದಲ್ಲಿ ಗುರು ದುರ್ಬಲನಾಗಿ ಇರುತ್ತಾನೆ ಅಂತ ಅವರು ಗುರುವಾರ ದಿನ ಈ ಕೆಲಸ ಮಾಡಿದರೆ ಖಂಡಿತ ಅವರ ಜೀವನದಲ್ಲಿ ಗುರು ಪ್ರಬಲನಾಗುತ್ತಾನೆ.ಪ್ರತಿಯೊಬ್ಬರು ಗುರುವಾರ ದಿನದಂದು ಭಗವಾನ್ ವಿಷ್ಣು ಮತ್ತು ಗುರು ಬೃಹಸ್ಪತಿಯನ್ನು ನಿಷ್ಠೆಯಿಂದ ಪೂಜಿಸಿದರೆ ಅಂತವರ ಜೀವನದಲ್ಲಿ ಸುಖ, ಸಂಪತ್ತು ಸಂತೋಷ ಜಾಸ್ತಿ ಆಗುತ್ತದೆ.
ಕುಬೇರನ ಪೂಜೆ ಪ್ರತಿಯೊಬ್ಬ ವ್ಯಕ್ತಿಗೂ ಶ್ರೀಮಂತನಾಗಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ನಾವು ಸಂಪತ್ತಿಗೆ ಒಡೆಯನಾದ ಕುಬೇರನನ್ನು ಪೂಜಿಸಬೇಕು. ನಮ್ಮ ಹಿಂದೂ ಧರ್ಮದ ಪ್ರಕಾರ ಕುಬೇರನನ್ನು ಸಂಪತ್ತಿನ ದೇವರೆಂದು ಕರೆಯಲಾಗುತ್ತದೆ. ಕುಬೇರನನ್ನು ನಾವು ಸರಿಯಾದ ವಿಧಾನಗಳ ಮೂಲಕ ಪೂಜಿಸಬೇಕು. ಹಾಗೆ ಕುಬೇರ ಯಂತ್ರವನ್ನು ಮತ್ತು ಅರಿಶಿನ ಕುಂಕುಮವನ್ನು ನಮ್ಮ ಜೊತೆ ಸದಾ ಕಾಲ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.
ವಿಷ್ಣುವಿನ ಪೂಜೆ ಗುರುವಾರ ದಿನ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ.ಭಗವಾನ್ ವಿಷ್ಣುವಿನ ಪೂಜೆಯನ್ನು ನಿಯಮ ಪದ್ಧತಿಗಳ ಪ್ರಕಾರ ಮಾಡಬೇಕು. ವಿಷ್ಣುವಿನ ಪೂಜೆಯನ್ನು ಮಾಡುವಾಗ ಹಳದಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಮಾಡಬೇಕು ಹಾಗೂ ಉಪವಾಸ ಮಾಡಬೇಕು. ಗುರುವಾರ ಭಗವಾನ್ ವಿಷ್ಣುವಿನ ಹೆಸರಿನಲ್ಲಿ ಉಪವಾಸ ಮಾಡಿದರೆ ಕೇವಲ ಬಾಳೆಹಣ್ಣು ಮಾತ್ರ ಸೇವಿಸಬೇಕು.
ಆಗ ಮಾತ್ರ ಭಗವಾನ್ ವಿಷ್ಣು ನಮ್ಮ ಪೂಜೆಗೆ ಒಯ್ಯುತ್ತಾನೆ.ಗುರುವಾರ ದಿನ ಬಾಳೆ ಗಿಡದ ಪೂಜೆ ಗುರುವಾರ ದಿನ ಬಾಳೆ ಗಿಡವನ್ನು ಪೂಜೆ ಮಾಡುವುದರಿಂದ ಉತ್ತಮ ಫಲಗಳನ್ನು ಪಡೆಯುತ್ತೇವೆ. ಏಕೆಂದರೆ ಭಗವಾನ್ ವಿಷ್ಣು ಬಾಳೆ ಗಿಡದಲ್ಲಿ ವಾಸವಾಗಿದ್ದಾನೆ ಎಂದು ನಂಬಲಾಗಿದೆ. ಆದ್ದರಿಂದ ಗುರುವಾರ ಪೂಜಾ ಪದ್ಧತಿ ಪ್ರಕಾರ ಬಾಳೆ ಗಿಡದ ಪೂಜೆ ಮಾಡುವುದರಿಂದ ಭಗವಾನ್ ವಿಷ್ಣು ಸಂತೋಷಗೊಳ್ಳುತ್ತಾನೆ.
ಇದರಿಂದ ನಮ್ಮ ಜೀವನದಲ್ಲಿ ವಿಷ್ಣುವಿನ ಅನುಗ್ರಹ ಉಂಟಾಗುತ್ತದೆ.ಗುರು ಬೃಹಸ್ಪತಿಯ ಪೂಜೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ದುರ್ಬಲನಾಗಿದ್ದರೆ ಅಂತ ಅವರ ಪ್ರತಿಯೊಂದು ಕೆಲಸದಲ್ಲಿ ವಿವಾಹದಲ್ಲಿ ಸಂತಾನದಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಗುರುದೋಷದಿಂದ ಮುಕ್ತಿ ಹೊಂದಲು ಗುರುವಾರ ದಿನ ಗುರುವಿನ ಪೂಜೆ ಮಾಡಬೇಕು.