ಈ ಸಂಸಾರ ಎನ್ನುವ ಶಬ್ದದ ಮೇಲೆ ಹೇಸಿಗೆ ಹುಟ್ಟಿತ್ತು. ನನಗೆ ನನ್ನ ಪ್ರೀತಿಯಲ್ಲಿ ಏನು ಕೊರತೆ ಕಂಡಿತೋ ನಿಮಗೆ ಎಂಬುದು ಇಂದಿಗೂ ನನಗೆ ತಿಳಿಯದ ವಿಷಯ. ನಿಮ್ಮ ಆಫೀಸಿನಲ್ಲಿ ಹೊಸದಾಗಿ ಬಂದ ಹುಡುಗಿಯಲ್ಲಿ ಅದನ್ನು ಕಂಡಿರೋ ನನ್ನ ಅರಿವಿನ ಹರಿವಿಗೆ ಇಂದಿಗೂ ತಿಳಿಯದ ವಿಷಯ. ಎಂಟು ವರ್ಷಗಳ ಪ್ರೀತಿಯಲ್ಲಿ ಅದೇನು ಕೊರತೆ ಕಂಡಿತೋ ನಿಮಗೆ ಎಂದು ಉತ್ತರ ಸಿಗದ ಪ್ರಶ್ನೆಗಳು ನನಗೆ ನಾನೆ 100 ಬಾರಿ ಕೇಳಿಕೊಂಡಿದ್ದೇನೆ.
ಸಂಸಾರದ ಸರಿಗಮದಲ್ಲಿ ಒಂದು ಪುಟ್ಟ ಅಪಶ್ರುತಿ ಸ್ವರ ನನಗೆ ಎಲ್ಲೋ ಕೇಳಿಸಿತು.ಕನ್ನಡಿಯ ಮುಂದೆ ನಿಂತು ನೀವು ಗಂಟೆಗಟ್ಟಲೆ ತಯಾರಾಗುವಾಗ ರಾತ್ರಿ ಊಟವಾದ ಮೇಲೆ ಮತ್ತೆವಾಗುವ ನೆಪದಲ್ಲಿ ತಾಸುಗಟ್ಟಲೆ ಹೊರ ಹೋಗುವಾಗ ಅಲ್ಲಿಂದ ಬರುವಾಗ ಯಾವುದೋ ಲಹರಿಯಲ್ಲಿ ತೇಲಾಡುವಂತೆ ನಿಮ್ಮ ಮುಖದಲ್ಲಿ ಇಲ್ಲದ ಕಡೆ ಗೋಚರಿಸಿದಾಗ ಇತ್ತೀಚಿಗೆ ಆಫೀಸ್ನಲ್ಲಿ ಹೆಚ್ಚು ಕೆಲಸ ಎಂದು ಪದೇಪದೇ ತಡವಾಗಿ ಮನೆಗೆ ಬರಲಾರಂಭಿಸಿದಾಗ ನನ್ನ ಮೆತ್ತನೆಯ ಹೃದಯ ಯಾವುದು?
ಅವಘಡದ ಮುನ್ಸೂಚನೆ ಯ ಕರಾಳ ಛಾಯೆ ಕಂಡು ಘಾಸಿಗೊಳ್ಳಲಾರಂಭಿಸಿತು.ಆ ದಿನ ತೊಳೆಯಲೆಂದು ನಿಮ್ಮ ಬಟ್ಟೆಯನ್ನು ನೀರಿಗೆ ಹಾಕುವಾಗ ನನ್ನ ಮೂಗಿಗೆ ಬಡಿದ ಹೊಸ ಸೆಂಟಿನ ವಾಸನೆ ನಮ್ಮ ದಾಂಪತ್ಯ ಹಳಸಲಾಗುವ ಎಲ್ಲ ಸೂಚನೆ ಕೊಟ್ಟಿತ್ತು. ನಿಮ್ಮ ಅಂಗಿಯ ಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡ ಉದ್ದನೆಯ ಕೂದಲು ಹರಿತಗೊಂಡ ಚಾಕುವಿನಂತೆ ನಮ್ಮ ಸಂಬಂಧವನ್ನು ಕತ್ತರಿಸುವುದು ಖಚಿತವೆನಿಸಿತ್ತು. ಯಾಕೋ ನನ್ನ ಕಣ್ಣೀರನ್ನು ನಿಯಂತ್ರಿಸಲಾರದೇ ಐದು
ವರ್ಷದ ಪುಟ್ಟ ಕಂದನ ನೆನಪು ಸಹ ನಿಮ್ಮನ್ನು ಆ ಕ್ಷಣಿಕ ಆಕರ್ಷಣೆಯಿಂದ ದೂರ ಮಾಡಲಿಲ್ಲವೇ? ಯಾಕೋ ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲ. ನಿಮ್ಮೊಡನೆ ಜಗಳವಾಡಿ.ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವುದೇ ಇರಾದೆ ನನಗಿರಲಿಲ್ಲ. ಪ್ರೀತಿ ಒಂದೇ ಬಾರಿ ಹುಟ್ಟು ಒಂದೇ ಬಾರಿ ಸಾಯುವುದು ನೀವು ನನ್ನ ಪ್ರೀತಿಯನ್ನು ನಿಷ್ಕರುಣೆಯಿಂದ ಕತ್ತು ಹಿಸುಕಿ ಕೊಲೆ ಮಾಡಿ ಆಗಿತ್ತು.
ನೀವು ಆಗಲೇ ವಿಶ್ವಾಸವನ್ನು ಕಳೆದು ಕೊಂಡು ನಿಮಗಿಷ್ಟವಾದ ರಸ್ತೆಯಲ್ಲಿ ಎಷ್ಟು ದೂರ ನಡೆದಾಗಿತ್ತು? ನಿಮ್ಮನ್ನು ಮತ್ತೆ ಕರೆದು ಸಂಬಂಧವನ್ನು ಇರಿಸಿಕೊಳ್ಳಲು ಗೋಗರೆದು ತೋರಿಕೆಯ ಒಂದು ಜೀವನ ಸಾಗಿಸುವ ಮನಸ್ಥಿತಿ ಹಾಗು ಸ್ವಭಾವ ನನ್ನದಾಗಿರಲಿಲ್ಲ. ನಿಮ್ಮ ಅವ್ಯವಹಾರಗಳ ಕುರಿತು ನನಗೆ ಎಲ್ಲವೂ ಗೊತ್ತು ಎಂದು ಹೇಳಬೇಕಿತ್ತು ಅಷ್ಟೇ.
ಹಾಗಾಗಿ ನನಗೆ ನಿಮ್ಮ ಅಕ್ರಮ ಸಂಬಂಧದ ಕುರಿತಾದ ವಿಷಯಗಳ ಕುರಿತು ಏನೇನು ತೋರಿಸಿಕೊಳ್ಳದೆ ಮಗುವನ್ನು ಕರೆದುಕೊಂಡು ನಾಲ್ಕು ದಿನಗಳು ತವರು ಮನೆಗೆ ಹೋಗುವುದಾಗಿ ಹೇಳಿದೆ. ನೆಪಮಾತ್ರಕ್ಕೆ ಬೇಡವೆಂದ ನಿಮ್ಮ ಮುಖದಲ್ಲಿ ಒಂದು ಅವ್ಯಕ್ತ ಮಿಂಚು ಕಾಣಿಸಿತ್ತು. ಸಂಜೆ ಬೇಗ ಆಫೀಸಿನಿಂದ ಬಂದ ನೀವು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ