ನಮ್ಮ ಮನೆಯ ಪೂಜಾ ಮಂದಿರದಲ್ಲಿ ಯಾವ ವಸ್ತು ಇರಬೇಕು ನಮಗೆ ಪರಿಪೂರ್ಣ ಲಕ್ಷ್ಮೀ ಅನುಗ್ರಹ ಸಿಗಲು, ಸುಖ ಶಾಂತಿ ನೆಮ್ಮದಿ ಸಿಗಲು ಎನ್ನುವುದನ್ನು ತಿಳಿಯೋಣ…ಮುಖ್ಯವಾಗಿ ಮನುಷ್ಯನ ಶರೀರಕ್ಕೆ ಗುಂಡಿಗೆ ಎಷ್ಟು ಮುಖ್ಯವೋ ಅಷ್ಟೇ ಮನೆಗೆ ದೇವರ ಕೋಣೆ ಕೂಡ ಬಹಳ ಮುಖ್ಯ ಅತೀ ಮುಖ್ಯವಾಗಿ ಇಡಬೇಕಾದ ವಸ್ತು ಭಗವದ್ಗೀತೆ ತಪ್ಪದೇ ಮುಖ್ಯವಾಗಿ ಇಡಬೇಕು..
ಬರಿ ಇಟ್ಟರೆ ಸಾಲದು ಕನಿಷ್ಠ ಪಕ್ಷ ದಿನಕ್ಕೆ ಒಂದು ಪುಟವಾದರೂ ಓದಬೇಕು… ಪೂಜೆ ಮಾಡಬೇಕು.ನವಿಲುಗರಿ ನರ ದೋಷ, ಅಶಾಂತಿ ತೊಲಗಿಸಲು ಮುಖ್ಯವಾಗಿ ನವಿಲುಗರಿ ಇಡಲೇಬೇಕು. ವೆಂಕಟೇಶ್ವರ ಸ್ವಾಮಿ, ಲಕ್ಷ್ಮೀ ದೇವಿ, ಸುಬ್ರಮಣ್ಯ ಸ್ವಾಮಿ, ಶ್ರೀ ಕೃಷ್ಣ ದೇವರಿಗೆ ತುಂಬಾ ಇಷ್ಟವಾದ ವಸ್ತುವಾಗಿದೆ ಖಂಡಿತವಾಗಿಯೂ ನವಿಲುಗರಿಯನ್ನು ದೇವರ ಕೋಣೆಯಲ್ಲಿ ಇಡಲೇಬೇಕು ಇದರಿಂದ ಭಗವಂತ ಆಶೀರ್ವಾದ ಸದಾ ಇರುತ್ತದೆ.3) ಗೋಮಾತಾ ವಿಗ್ರಹ ಕರುವಿಗೆ ಹಾಲು ಕುಡಿಸುತ್ತಿರುವ ವಿಗ್ರಹ ಇಟ್ಟರೆ ಬಹಳ ಒಳ್ಳೆಯದು, ಸಕಲ ದೇವತೆಗಳು ನೆಲೆಸಿದ್ದಾರೆ. ಸಕಲ ಶುಭ ಕಾರ್ಯಗಳು ನಡೆಯಲು ಸದಾ ಲಕ್ಷ್ಮೀ ತಾಯಿಯ ಅನುಗ್ರಹ ಸಿಗಲು ಖಂಡಿತವಾಗಿಯೂ ಇಟ್ಟು ಪೂಜಿಸಬೇಕು.
4) ಛತ್ರಿ [ ಪುಟ್ಟ ಛತ್ರಿ ] ಮತ್ತು ಚಾಮರ [ ಪುಟ್ಟ ಚಾಮರ ] ಪ್ರತಿನಿತ್ಯ ಪೂಜೆ ಮಾಡುವಾಗ ಚಾಮರ ಉಪಯೋಗಿಸುತ್ತಾ ಪೂಜೆ ಮಾಡಿದರೆ ದೇವರಿಗೆ
ಉಪಚಾರ ಮಾಡಿದಂತೆ ಇದರಿಂದ ಮನೆಯಲ್ಲಿ ದೈವಶಕ್ತಿ ದೈವಕಳೆ, ಹೆಚ್ಚಾಗಿರುತ್ತದೆಮನೆಯಲ್ಲಿ ದೈವಬಲ ಕೂಡ ಅಧಿಕವಾಗಿರುತ್ತದೆ.5) ದಕ್ಷಿಣಾವರ್ತಿ ಶಂಖ ಸಣ್ಣ ಶಂಕು ಇಟ್ಟರೆ ಬಹಳ ಒಳ್ಳೆಯದು ಇದರಿಂದ ಸಾಲಿಗ್ರಾಮ, ದೇವರ ವಿಗ್ರಹಗಳಿಗೆ ಅಭಿಷೇಕ ಮಾಡಿದರೆ ಬಹಳ ಒಳ್ಳೆಯದು. ಬಾಯಿಂದ ಉದುವಾ ಶಂಖದಿಂದ ಅಭಿಷೇಕ ಮಾಡಬಾರದು.
ಯಾವುದೇ ಶಂಖ ನೆಲದ ಮೇಲೆ ಇಡಬಾರದು.6) ಲಕ್ಷ್ಮೀ ಕವಡೆಗಳು ಕವಡೆಯ ಹಿಂಭಾಗದಲ್ಲಿ ಸ್ವಲ್ಪ ಅರಿಶಿನ ಬಣ್ಣದಲ್ಲಿ ಇರುತ್ತದೆ ಅದೇ ಲಕ್ಷ್ಮೀ ಕವಡೆ ಕನಿಷ್ಠ 9 ಸಣ್ಣ ತಟ್ಟೆಗೆ ಇಡಬೇಕು ಈ ರೀತಿ ಇಟ್ಟರೆ ಗಂಡ ಹೆಂಡತಿ ಮಧ್ಯ ಮನಸ್ಥಾಪ ಬರುವುದಿಲ್ಲ, ಅನ್ನೋನ್ಯವಾಗಿರುತ್ತಾರೆ.. ದಾಂಪತ್ಯ ಬಹಳ ಚೆನ್ನಾಗಿರುತ್ತದೆ.
7) ಗೋಮತಿ ಚಕ್ರ ಇದುಕೂಡ ಕನಿಷ್ಠ 9 ಇಟ್ಟು ಪೂಜಿಸಬೇಕು ಗೋಮತಿ ಚಕ್ರವನ್ನು ಪೂಜಿಸಿದರೆ ಪ್ರಪಂಚದಲ್ಲಿ ಇರುವ ಎಲ್ಲಾ ಗೋವುಗಳನ್ನು ಪೂಜಿಸಿದಷ್ಟು ಫಲ ಸಿಗುತ್ತದೆ…. ಇದು ಲಕ್ಷ್ಮೀ ದೇವಿಗೆ ಬಹಳ ಇಷ್ಟವಾದ ವಸ್ತು ಮಹಾಶಕ್ತಿ ಇರುತ್ತದೆ.ಸಮುದ್ರದಲ್ಲಿ ಸಿಗುವ ಎಲ್ಲಾ ಪವಿತ್ರ ವಸ್ತುಗಳು ಲಕ್ಷ್ಮೀ ದೇವಿಗೆ ನೇರವಾಗಿ ಸಂಪರ್ಕ
ಹೊಂದಿರುತ್ತದೆ….. ತಾಯಿಯು ಸಮುದ್ರದಲ್ಲಿ ಜನಿಸಿರುವುದರಿಂದ ಇದೆಲ್ಲಾ ತಾಯಿಗೆ ಸೋದರ ಸಂಬಂಧ ಹೊಂದಿರುತ್ತದೆ ಆದ್ದರಿಂದ ವಿಶೇಷ ಶಕ್ತಿ ಹೊಂದಿರುತ್ತದೆ.ಇನ್ನೂ ದೇವರ ಮನೆ ತುಂಬಾ ಸ್ವಚ್ಛವಾಗಿರಬೇಕು ಯಾವುದೇ ಅಂಟು, ಧೂಳು ಇರಬಾರದು ಒಂದು ಡಬ್ಬಿಯಲ್ಲಿ 9 ಪಚ್ಚ ಕರ್ಪೂರ, 9 ಏಲಕ್ಕಿ, 9 ಲವಂಗ,ಈ ರೀತಿ ಇದ್ದರೆ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ.