ಯಾವ ದಿನ ಯಾವ ದೇವರ ಪೂಜೆ ಮಾಡಿದರೆ ನಿಮಗೆ ಅನುಕೂಲ ಮತ್ತು ಉತ್ತಮ ಎಂದು ತಿಳಿದುಕೊಳ್ಳೋಣ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ಯಾವ ವಾರ ಯಾವ ದೇವರನ್ನು ಪೂಜಿಸಬೇಕು ಎಂದು ತಿಳಿಸಿಕೊಡುತ್ತೇವೆ,
ಮೊದಲನೆಯದಾಗಿ ಸೋಮವಾರ : ಸೋಮವಾರವನ್ನು ಶಿವನಿಗೆ ಅರ್ಪಿಸಲಾಗಿದೆ ಶಿವನ ಸಹಧರ್ಮಿಣಿ ಪಾರ್ವತಿಯೊಂದಿಗೆ ದೇವರನ್ನು ಸ್ಮರಿಸಿ ಕೊಳ್ಳಲಾಗುವುದು ಈ ದಿನದಂದು ಶಿವನಿಗಾಗಿ ನಡೆಯುವ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ಉಪವಾಸ ಕೈಗೊಳ್ಳುತ್ತಾರೆ
ಮಂಗಳವಾರ : ಮಂಗಳವಾರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ ಹನುಮಂತನಿಗಾಗಿ ಮಂಗಳವಾರದ ದಿನ ವ್ರತಗಳನ್ನು ಕೈಗೊಂಡು ಎರಡು ದಿನಗಳವರೆಗೆ ಇದು ಮುಂದುವರೆಯುತ್ತದೆ ಗೋದಿ ಮತ್ತು ಬೆಲ್ಲದಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಬೇಕು ಗಂಡು ಮಗುವಿನ ಬಯಕೆ ಉಳ್ಳ ದಂಪತಿಗಳು ಈ ವ್ರತವನ್ನು ಮಾಡಿದರೆ ಹನುಮಂತ ಫಲ ನೀಡುತ್ತಾನೆ ಎಂದು ನಂಬಲಾಗಿದೆ.
ಬುಧವಾರ : ಬುಧವಾರವನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ ಇವತ್ತಿನ ದಿನ ಶ್ರೀಕೃಷ್ಣನಿಗೆ ಸ್ಮರಣೆ ಭಜನೆಗಳನ್ನು ಕೈಗೊಳ್ಳಲಾಗುತ್ತದೆ, ಈ ದಿನದಂದು ವ್ರತವನ್ನು ಕೈಗೊಳ್ಳುವವರು ಹೊಸ ವ್ಯಾಪಾರವನ್ನು ಶುರುಮಾಡುತ್ತಾರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಗೆಲ್ಲಲು ಈ ದಿನ ಕೃಷ್ಣ ಭಗವಂತನನ್ನು ನೆನೆಯುತ್ತಾರೆ ಹಾಗೂ ದಂಪತಿಗಳು ತಮ್ಮ ದಾಂಪತ್ಯ ಜೀವನ ಸುಖವಾಗಿರಲಿ ಎಂದು ಶ್ರೀಕೃಷ್ಣನನ್ನು ನೇಯುತ್ತಾರೆ.
ಗುರುವಾರ : ಗುರುವಾರವನ್ನು ಶ್ರೀವಿಷ್ಣುವಿಗೆ ಸಮರ್ಪಿಸಲಾಗಿದೆ ಈ ದಿನ ವಿಷ್ಣುವಿನ ಭಕ್ತರು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಅರ್ಪಿಸುತ್ತಾರೆ ಈ ದಿನ ವ್ರತವನ್ನು ಕೈಗೊಳ್ಳುವವರು ಗಜರಿ ಮತ್ತು ತುಪ್ಪವನ್ನು ಬಳಸದ ಆಹಾರವನ್ನು ಸೇವಿಸುತ್ತಾರೆ ಈ ವ್ರತವನ್ನು ಕೈಗೊಳ್ಳುವವರು ಧನಕೀರ್ತಿ ಹಾಗೂ ಯಶಸ್ಸನ್ನು ಕಾಣುತ್ತಾರೆ.
ಶುಕ್ರವಾರ : ಶುಕ್ರವಾರದಂದು ದೇವಿಯ ಆರಾಧನೆಯನ್ನು ಮಾಡುತ್ತಾರೆ, ಈ ದಿನವನ್ನು ತಾಯಿ ದುರ್ಗಾದೇವಿ ಅರ್ಪಿಸಲಾಗಿದೆ ಸಂತೋಷಿಮಾತಾ ವ್ರತವನ್ನು ಕೈಗೊಳ್ಳಲಾಗುತ್ತದೆ ಈ ವ್ರತವು ಸೂರ್ಯೋದಯದಿಂದ ಶುರುವಾಗಿ ಸೂರ್ಯಾಸ್ತದ ಸಮಯಕ್ಕೆ ಈ ವ್ರತ ಮುಗಿಯುತ್ತದೆ ಈ ದಿನದಂದು ಬಿಳಿ ವಸ್ತ್ರವನ್ನು ಧರಿಸಿ ರಾತ್ರಿ ಊಟದಲ್ಲಿ ಪಾಲ್ಗೊಳ್ಳುತ್ತಾರೆ ಈ ದಿನ ಬಿಳಿ ಬಣ್ಣದ ಆಹಾರವನ್ನು ಸೇವನೆ ಮಾಡುತ್ತಾರೆ.
ಶನಿವಾರ : ಶನಿವಾರವನ್ನು ಶನಿದೇವರಿಗೆ ಅರ್ಪಣೆ ಮಾಡಲಾಗಿದೆ ಭಯವನ್ನು ಉಂಟುಮಾಡುವ ದೇವರನ್ನು ಶನಿದೇವರನ್ನು ಕಾಣುತ್ತಾರೆ ಬಿಲ್ಲುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಗೆಯನ್ನು ವಾಹನವಾಗಿ ಮಾಡಿಕೊಂಡಿದ್ದಾರೆ ಈ ದಿನ ಶನಿದೇವರ ದೇವಸ್ಥಾನಕ್ಕೆ ಭೇಟಿ ನೀಡುವವರು ಕಪ್ಪು ವಸ್ತ್ರವನ್ನು ಧರಿಸಿಕೊಳ್ಳುತ್ತಾರೆ ಎಳೆಲಲ್ಲಿ ಕಪ್ಪು ಬಟ್ಟೆಗಳನ್ನು ಕಪ್ಪು ಬಣ್ಣದ ಧಾನ್ಯಗಳನ್ನು ಅರ್ಪಿಸುತ್ತಾರೆ ಜೀವನದಲ್ಲಿ ಬಂದು ಹೋಗುವ ಕಷ್ಟಗಳನ್ನು ನಿವಾರಿಸುವ ಶನಿದೇವರು ಅನಾರೋಗ್ಯವನ್ನು ಸಹ ನಿವಾರಿಸುತ್ತಾರೆ
ಭಾನುವಾರ : ಭಾನುವಾರವನ್ನು ಸೂರ್ಯದೇವನಿಗೆ ಅರ್ಪಿಸಲಾಗಿದೆ ಈ ದಿನ ಸೂರ್ಯನ ಭಕ್ತರು ಕೆಲಸವನ್ನು ಮುಗಿಸಿ ತಮ್ಮ ದೇಹ ಹಾಗೂ ಮನೆಯನ್ನು ಶುಚಿ ಮಾಡಿಕೊಳ್ಳುತ್ತಾರೆ ಸೂರ್ಯದೇವನಿಗೆ ಕೆಂಪು ಹೂವುಗಳನ್ನು ಸಮರ್ಪಿಸಿ ಹಾಗೂ ಕೆಂಪು ಚಂದನವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ ಇದರಿಂದ ಸೂರ್ಯದೇವನು ಎಲ್ಲಾ ಚರ್ಮಗಳ ರೋಗವನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ