ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವ ಲಾಭಗಳು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿದರೆ ದೇಹಕ್ಕೆ ಆಗುವ ಅಚ್ಚರಿ ಆರೋಗ್ಯ ಲಾಭಗಳು,
ಮನುಷ್ಯನ ದೇಹವು ಶೇಕಡ 75ರಷ್ಟು ನೀರಿನಂಶದಿಂದ ನಿರ್ಮಾಣಗೊಂಡಿದ್ದು ದ್ರವ ಅಂಶವು ಪ್ರಮುಖ ಪಾತ್ರವಹಿಸುವುದು ಹೀಗಾಗಿ ಮನುಷ್ಯರಿಗೆ ನೀರಿನ ಸೇವನೆ ಅಗತ್ಯ ಎನ್ನುತ್ತಾರೆ ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡಿ ಕೊಳ್ಳುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಯಿಂದಲು ಇದು ಕಾಪಾಡುವುದು ಹೀಗಾಗಿ ನಾವು ಪ್ರತಿನಿತ್ಯವೂ ಅಗತ್ಯಕ್ಕೆ ಅನುಗುಣವಾಗಿ ನೀರಿನ ಸೇವನೆಯನ್ನು ಮಾಡಬೇಕು ಒಂದು ಮಿತಿಯ ನೀರಿನ ಸೇವನೆ ಮಾಡದೇ ಇದ್ದರೆ ಆಗ ನಮ್ಮ ದೇಹವು ಡಿಹೈಡ್ರೇಷನ್ ಗೆ ಒಳಗಾಗುವುದು ಹೀಗಾಗಿ ನಮ್ಮ ದೇಹಕ್ಕೆ ನೀರು ಎನ್ನುವುದು ಅತಿ ಅಗತ್ಯ ನೀರನ್ನು ಸಾಮಾನ್ಯವಾಗಿ ನೀರು, ತಣ್ಣಗಿನ ನೀರು ಮತ್ತು ಬಿಸಿನೀರು ಎಂದು ಮೂರು ವಿಧಾನವಾಗಿ ವಿಂಗಡಿಸಬಹುದು ಹೀಗಾಗಿ ಬೇಸಿಗೆಯಲ್ಲಿ ಸಾಮಾನ್ಯ ಅಥವಾ ತಣ್ಣಗಿನ ನೀರನ್ನು ಕುಡಿಯಲು ಇಷ್ಟಪಡುವರು ಇನ್ನೂ ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿನೀರನ್ನು ಕುಡಿಯಲು ಇಷ್ಟಪಡುತ್ತಾರೆ ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿನೀರನ್ನು ಕುಡಿದರೆ ದೇಹಕ್ಕೆ ಯಾವ ರೀತಿಯ ಲಾಭಗಳು ಸಿಗಲಿದೆ ಎಂಬುದನ್ನು ಈ ದಿನ ನಾವು ತಿಳಿದುಕೊಳ್ಳೋಣ.
ಮೊದಲಿಗೆ ಜೀರ್ಣಕ್ರಿಯೆ ಸುಧಾರಿಸುವುದು:- ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತಿಮುಖ್ಯ ಲಾಭವೆಂದರೆ ಅದು ಜೀರ್ಣಕ್ರಿಯೆ ಸುಧಾರಣೆ ಮಾಡುವುದು ಬಿಸಿನೀರು ನಾವು ಸೇವಿಸಿದ ಆಹಾರವನ್ನು ವಿಘಟಿಸಲು ನೆರವಾಗುವುದು ಮಾತ್ರವಲ್ಲದೆ ಅದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ಆಗುವುದು.
ಎರಡನೆಯದಾಗಿ ತೂಕ ಇಳಿಸಲು ಕೂಡ ಸಹಾಯಕಾರಿ:- ಬಿಸಿ ನೀರನ್ನು ಕುಡಿದರೆ ಅದರಿಂದ ತೂಕವನ್ನು ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ ಬಿಸಿ ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಪರಿಣಾಮಕಾರಿಯಾಗಿ ಹೊರಹಾಕುವುದು ಇದು ಹೊಟ್ಟೆ ತುಂಬಿದಂತೆ ಮಾಡುವುದು ಯಾಕೆಂದರೆ ತಣ್ಣೀರಿಗೆ ಹೋಲಿಸಿದರೆ ಬಿಸಿನೀರು ಹೆಚ್ಚುಕಾಲ ಹೊಟ್ಟೆಯಲ್ಲಿ ಉಳಿಯುವುದು.
ಮೂರನೆಯದಾಗಿ ಕಟ್ಟಿದ ಮೂಗು ನಿವಾರಣೆ :- ಬಿಸಿ ನೀರನ್ನು ಕುಡಿಯುವುದರಿಂದ ಸಿಗುವ ಮತ್ತೊಂದು ಲಾಭವೆಂದರೆ ಮುಚ್ಚಿ ಹೋಗಿರುವಂತಹ ಮೂಗನ್ನು ಸುಧಾರಿಸಿ ದೀರ್ಘವಾಗಿ ಉಸಿರಾಡಲು ಸಹಾಯ ಮಾಡುತ್ತದೆ ಶೀತದ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿಯಾಗಿ ನೆರವಾಗುವುದು ಬಿಸಿನೀರನ್ನು ಕುಡಿದರೆ ಆಗ ನಿಮಗೆ ಶೀತದಿಂದ ಉಂಟಾಗಿರುವ ತಲೆನೋವನ್ನು ನಿವಾರಣೆ ಮಾಡಲು ನೆರವಾಗುತ್ತದೆ.
ನಾಲ್ಕನೆಯದಾಗಿ ಬ್ಲಡ್ ಸರ್ಕುಲೇಷನ್ ಸುಧಾರಿಸುವುದು:- ಕೇವಲ ಹೊಟ್ಟೆ ಆರೋಗ್ಯ ಮಾತ್ರವಲ್ಲದೆ ಬಿಸಿ ನೀರಿನಿಂದಾಗಿ ದೇಹದ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುವುದು ಬಿಸಿನೀರು ಬ್ಲಡ್ ವೆಸೆಲ್ಸ್ ಹೆಚ್ಚಿಸುವ ಮೂಲಕ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುವುದು ಇದರಿಂದ ಸಂಪೂರ್ಣ ರಕ್ತವು ದೇಹಕ್ಕೆ ಸರಿಯಾಗಿ ತಲುಪುವುದು ಇದೆಯೆಂದು ಹೃದಯದ ಆರೋಗ್ಯ ಉತ್ತಮವಾಗಿರುವುದು ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುವುದು.
ಐದನೆಯದಾಗಿ ಮಲಬದ್ಧತೆಯನ್ನು ತಡೆಯುತ್ತದೆ:- ಮೈದಾ ಹಾಗೂ ಇತರೆ ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ ನಿತ್ಯದ ತೊಂದರೆಯಾಗಿರುತ್ತದೆ ನಿತ್ಯವೂ ಬಿಸಿನೀರನ್ನು ಸೇವಿಸುವ ಮೂಲಕ ಕರುಳುಗಳು ಹೆಚ್ಚು ಹಗುರವಾಗುವುದು ಮೂಲಕ ದೇಹದಿಂದ ಕಲ್ಮಶವನ್ನು ಹೊರಹಾಕಲು ನೆರವಾಗುತ್ತದೆ.
ಆರನೆಯದಾಗಿ ಒತ್ತಡವನ್ನು ಕಡಿಮೆ:- ದಿನದ ಹಲವಾರು ಒತ್ತಡಗಳಿಂದ ಸಂಜೆಯಾಗುತ್ತಿದ್ದಂತೆಯೇ ಸುಸ್ತು ಹೆಚ್ಚಾಗುತ್ತದೆ ಇದನ್ನು ಕಡಿಮೆ ಮಾಡಲು ಬಿಸಿ ನೀರನ್ನು ಕುಡಿಯುವುದು ಇದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ ದೇಹದಲ್ಲಿ ಚೈತನ್ಯ ಹೆಚ್ಚಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ