ಸಿಹಿ ಗೆಣಸು ಸಕ್ಕರೆ ಕಾಯಿಲೆ ಇದ್ದವರು ತಿನ್ನುವ ಮುನ್ನ ಯೋಚಿಸಿ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಿಹಿ ಆಲೂಗೆಡ್ಡೆ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಇದು ಪಿಷ್ಟ ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ ಅಲ್ಲದೆ ಪ್ರೋಟೀನ್ ವಿಟಮಿನ್ ಏ ಮತ್ತು ವಿಟಮಿನ್ ಸಿ, ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣಗಳನ್ನು ಹೊಂದಿದೆ ಸಿಹಿ ಗೆಣಸು ತೂಕ ಕಡಿಮೆ ಮಾಡಲು ಉಪಯೋಗಕಾರಿ ಇದು ಮುಖ್ಯವಾಗಿ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತು ಸಂಧಿವಾತ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ ಇಷ್ಟೆಲ್ಲಾ ಉಪಯೋಗ ಇರುವ ಸಿಹಿ ಗೆಣಸನ್ನು ಕೆಲವು ಜನರು ಮಾತ್ರ ಸೇವಿಸಲೇಬಾರದು ಇದರಲ್ಲಿ
ಅತಿ ಹೆಚ್ಚು ಪ್ರಮಾಣದಲ್ಲಿ ವಿಟಮಿನ್ ‘ಎ’ ಇದೆ ಹಾಗಾದರೆ ಯಾರೆಲ್ಲಾ ಈ ಸಿಹಿ ಗೆಣಸನ್ನು ಸೇವಿಸಬಾರದು ಎಂದು ತಿಳಿಯೋಣ ಸಿಹಿ ಗೆಣಸನ್ನು ಕಿಡ್ನಿಯಲ್ಲಿ ಕಲ್ಲು ಇರುವವರು ಸೇವಿಸಲೇಬಾರದು ಸಿಹಿ ಗೆಣಸಿನಲ್ಲಿರುವ ಆಕ್ಸಿಲೆಟ್ ಈಗಾಗಲೇ ಶೇಖರಣೆ ಇರುವ ಕಲ್ಲಿನೊಂದಿಗೆ ಸೇರ್ಪಡೆಯಾಗುತ್ತದೆ ಮತ್ತಷ್ಟು ನೋವನ್ನು ಹೆಚ್ಚಿಸುತ್ತದೆ ತಜ್ಞರ ಪ್ರಕಾರ ಕಿಡ್ನಿಯಲ್ಲಿ ಕಲ್ಲನ್ನು ಹೊಂದಿರುವವರು ಸಿಹಿ ಗೆಣಸನ್ನು ಸೇವಿಸಲೇಬಾರದು ಇನ್ನು ಈ ಸಿಹಿಗೆಣಸಿನಲ್ಲಿ ಮನಿಟಲ್, ಸಕ್ಕರೆ , ಆಲ್ಕೋಹಾಲ್ ಅಥವಾ ಪ್ಯಾಲಿಯೋಲಿನ್ಎಂದು ಕರೆಯಲ್ಪಡುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿರುತ್ತದೆ ಈ ಕಾರ್ಬೋಹೈಡ್ರೇಟ್ ಅನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ಹಾನಿ ಉಂಟಗದಿದ್ದರು ಹೊಟ್ಟೆಯಲ್ಲಿ ನೋವು ಅಥವಾ ಅಸ್ವಸ್ಥತೆ ಉಂಟಾಗುತ್ತದೆ
ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಹೆಚ್ಚು ಹಾನಿ ಆಗುವುದಿಲ್ಲ ಹೆಚ್ಚಾಗಿ ಸೇವಿಸಿದರೆ ಅತಿಸಾರ ಹೊಟ್ಟೆ ನೋವಿನಿಂದ ಬಳಲಬಹುದು ಸಿಹಿ ಗೆಣಸನ್ನು ಸೇವಿಸುವುದರಿಂದ ಇನ್ಸುಲಿನ್ ಮಟ್ಟ ಸುಧಾರಿಸುತ್ತದೆ ಇದು ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಒಟ್ಟಾರೆ ಸಿಹಿ ಗೆಣಸು ಮಧುಮೇಹ ಹೊಂದಿರುವವರಿಗೆ ಸೂಕ್ತವಾಗಿದೆ ಆದರೆ ಮಿತವಾಗಿ ಸೇವಿಸಬೇಕು ಹೆಚ್ಚಾಗಿ ತಿನ್ನುವುದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟವು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇನ್ನು ಸಿಹಿ ಗೆಣಸು ಪೊಟ್ಯಾಶಿಯಂ ಹೊಂದಿದ್ದು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಇಡುತ್ತದೆ
ಯಾವುದೇ ಒಂದು ಪದಾರ್ಥವನ್ನು ಅತಿಯಾಗಿ ಸೇವಿಸುವುದರಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ, ಆದ್ದರಿಂದ ಮಿತವಾಗಿ ಸೇವಿಸುವುದು ಒಳ್ಳೆಯದು ಸಿಹಿ ಗೆಣಸು ಒಂದು ಬೇರಿನ ತರಕಾರಿಯಾಗಿದ್ದು ವಿಟಮಿನ್ ಎ ಅಂಶವನ್ನು ಹೆಚ್ಚಾಗಿ ಹೊಂದಿದೆ ಅತಿಯಾಗಿ ಸೇವಿಸಿದರೆ ವಿಶವಾಗಿ ಮಾರ್ಪಾಡಾಗುತ್ತದೆ ಅತಿಯಾದ ವಿಟಮಿನ್ ಎ ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಮಿತವಾಗಿ ಸೇವಿಸುವುದು ಉತ್ತಮ