ರಾತ್ರಿ ಇದನ್ನು ಹಚ್ಚಿ ಬೆಳಿಗ್ಗೆ ಕಣ್ಣಿನ ಸುತ್ತ ಇದ್ದ ಕಪ್ಪು ಕಲೆ ಶಾಶ್ವತವಾಗಿ ಹೋಗಿರುತ್ತೆ
ಸ್ನೇಹಿತರೆ ಕಣ್ಣುಗಳು ನಮ್ಮ ಅಂದವನ್ನು ಹೆಚ್ಚಿಸುತ್ತದೆ ಆದರೆ ಅದೇ ಕಣ್ಣಿನ ಕೆಳಗೆ ಬರುವಂತಹ ಕಪ್ಪು ಕಲೆಗಳು ನಮ್ಮ ಅಂದವನ್ನು ಕೆಡಿಸುತ್ತದೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಆಯಾಸದಿಂದ ನಿದ್ದೆಯ ಕೊರತೆ ,ಮಾನಸಿಕ ಒತ್ತಡ, ಪೌಷ್ಟಿಕ ಆಹಾರದ ಕೊರತೆ, ಅತಿಯಾಗಿ ಟಿವಿ,ಕಂಪ್ಯೂಟರ್, ಮೊಬೈಲ್ ಗಳನ್ನು, ನೋಡುವುದರಿಂದ ಎಲ್ಲಾರಲ್ಲೂ ಕಪ್ಪು ಕಲೆಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಮ್ಮ ಕಣ್ಣಿನ ಕೆಳಗಿನ ಚರ್ಮದ ಹೊರಪದರ ಮತ್ತು ಕೆಳ ಪದರಗಳು ತುಂಬಾ ತೆಳುವಾಗಿರುತ್ತದೆ ಸರಿಯಾಗಿ ನಿದ್ದೆ ಮಾಡದೆ ಅತಿಯಾದ ಆಯಾಸ ದಿಂದ ಈ ಭಾಗದಲ್ಲಿ ತೇವಾಂಶ ಕಡಿಮೆಯಾಗಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ
ನಿಮ್ಮ ಕಣ್ಣಿನ ಸುತ್ತಲೂ ಈ ರೀತಿಯ ಕಪ್ಪು ಕಲೆಗಳು ಆಗಿದ್ದರೆ ಚಿಂತಿಸುವ ಅವಶ್ಯಕತೆ ಇಲ್ಲ ಈ ದಿನ ನಾನು ನಿಮಗೆ ಸೂಪರ್ ಆಗಿರುವ ಮನೆಮದ್ದನ್ನು ತಿಳಿಸಿಕೊಡುತ್ತೇನೆ ಇದರಿಂದ ಕಪ್ಪು ಕಲೆಗಳ ಸಮಸ್ಯೆ ಪೂರ್ತಿಯಾಗಿ ಕಡಿಮೆಯಾಗಿ ನಿಮ್ಮ ಕಣ್ಣುಗಳು ಕೂಡ ಆರೋಗ್ಯವಾಗಿ ಇರುತ್ತವೆ ಇಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರುವುದು ಆಲೂಗೆಡ್ಡೆ ಹೌದು ಸ್ನೇಹಿತರೆ ಆಲೂಗೆಡ್ಡೆಯಲ್ಲಿ ನೈಸರ್ಗಿಕವಾಗಿ ನಮ್ಮ ಚರ್ಮವನ್ನು ಬ್ಲೀಚ್ ಮಾಡುವ ಗುಣ ಇದೆ ಇದು ಕಪ್ಪು ಕಲೆಗಳನ್ನು ಹೇಳ ಹೆಸರಿಲ್ಲದಂತೆ ಮಾಯ ಮಾಡುತ್ತದೆ ಇದರಲ್ಲಿ ವಿಟಮಿನ್A C ಪಿಷ್ಟ ಹಾಗೂ ಇತರ ಕಿಣ್ವಗಳಿವೆ ಇವು ನಮ್ಮ ಚರ್ಮವನ್ನು ಪೋಷಿಸುತ್ತದೆ ವಿಶೇಷವಾಗಿ ನಮ್ಮ ಕಣ್ಣುಗಳ ಕೆಳಗಿನ ತೆಳುವಾದ ಚರ್ಮಕ್ಕೆ ಈ ಪೋಷಕಾಂಶಗಳು ಅತಿ ಅವಶ್ಯಕವಾಗಿ ಬೇಕು ನಂತರ ಪುದಿನ ,ಹೌದು ಸ್ನೇಹಿತರೆ ಪುದಿನ ಎಲೆಯಲ್ಲಿ ವಿಟಮಿನ್ ಸಿ ಇದೆ ಪುದಿನ ದಲ್ಲಿರುವ ಮೆಂತಲ್ ನ ಅಂಶ ರಕ್ತಪರಿಚಲನೆಯನ್ನು ಹೆಚ್ಚಿಸಿ ಚರ್ಮಕ್ಕೆ ಆರಾಮ ಒದಗಿಸುತ್ತದೆ ಹಾಗೂ
ಚರ್ಮದ ಮೇಲಿರುವ ಹಳೆಯ ಕಲೆಗಳನ್ನು ನಿವಾರಣೆ ಮಾಡುತ್ತದೆ ಒಂದು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆ ತೆಗೆಯಿರಿ ನಂತರ ಅರ್ಧ ಆಲೂಗೆಡ್ಡೆಯನ್ನ
ಚಿಕ್ಕದಾಗಿ ಕತ್ತರಿಸಿಕೊಳ್ಳಿ ಹಾಗೆ ಇದರ ಜೊತೆ ಹತ್ತರಿಂದ ಹದಿನೈದು ಪುದಿನ ಎಲೆಗಳನ್ನು ಹಾಕಿ ಕುಟ್ಟಿ, ಪೇಸ್ಟ್ ತಯಾರಿಸಿ
ತಯಾರಿಸಿದ ಈ ಪೇಸ್ಟನ್ನು ಒಂದು ಬೌಲ್ನಲ್ಲಿ ಹಾಕಿ ಇದರ ಜೊತೆಗೆ ಒಂದು ಚಮಚ ಅಲೋವೆರ ಜೆಲ್ ಅನ್ನು ಮಿಕ್ಸ್ ಮಾಡಿ ಈ ಮಿಶ್ರಣವನ್ನು ಪ್ರತಿದಿನ ಬಳಸುವುದರಿಂದ ನಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ ,ಇದನ್ನು ರಾತ್ರಿ ಮಲಗುವ ಮುಂಚೆ ಕಣ್ಣಿನ ಸುತ್ತಲೂ ಹಚ್ಚಿ ಅರ್ಧ ಗಂಟೆ ಒಣಗಲು ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆದುಕೊಳ್ಳಿ ಅಥವಾ ರಾತ್ರಿ ಇಡೀ ಹಾಗೆ ಬಿಟ್ಟು ಬೆಳಗ್ಗೆ ತೊಳೆದುಕೊಳ್ಳಿ ತಯಾರಿಸಿದ ಈ ಪೇಸ್ಟನ್ನು ಫ್ರಿಡ್ಜ್ ನಲ್ಲಿ ಇಟ್ಟು ಒಂದು ವಾರದವರೆಗೂ ನೀವು ಉಪಯೋಗಿಸಬಹುದು ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ