ನಮ್ಮ ಆರೋಗ್ಯಕ್ಕೆ ಅರಿಶಿನ ಒಂದು ತರಹ ಔಷಧಿ ಇದ್ದಂತೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮನ್ನು ಕಾಯಿಲೆಗಳಿಂದ ದೂರ ಮಾಡುತ್ತದೆ. ನಮ್ಮ ತ್ವಚೆಯ ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕೂಡ ಅರಿಶಿನದ ಪಾತ್ರವನ್ನು ನಾವು ಮರೆಯುವಂತಿಲ್ಲ. ಪ್ರತಿ ದಿನ ಗಿಡಮೂಲಿಕೆ, ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರುವವರು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಕುಡಿಯುವುದರಿಂದ ಆರೋಗ್ಯ ಯಾವಾಗಲೂ ಉತ್ತಮ ಸ್ಥಿತಿಯಲ್ಲಿರುತ್ತದೆ.
ದಿನನಿತ್ಯ ತಮ್ಮ ಆಹಾರಪದ್ಧತಿಯಲ್ಲಿ ಅರಿಶಿನವನ್ನ ಸೇರಿಸಿಕೊಂಡು ಹಲವಾರು ಕಾಯಿಲೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಹಾಗಾದರೆ ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆಲ್ಲ ಅರಿಶಿನ ನಮಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನ ಇವತ್ತಿನ ವಿಡಿಯೋ ಮುಖಾಂತರ ತಿಳಿದುಕೊಳ್ಳೋಣ.
ನಿಮ್ಮ ಆಹಾರ ಪದ್ಧತಿಯಲ್ಲಿ ಅಂದರೆ ನೀವು ಪ್ರತಿ ದಿನ ತಯಾರು ಮಾಡುವ ತಿಂಡಿ ಅಡುಗೆಯಲ್ಲಿ ಸ್ವಲ್ಪ ಅರಿಶಿನ ಬೆರೆಸಿದರೆ ಅದು ನಿಮ್ಮ ಮೆಟಬಾಲಿಸಂ ಪ್ರಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡುತ್ತದೆ.ಚೆನ್ನಾಗಿ ನಡೆಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಜೀರ್ಣಶಕ್ತಿ ಹೆಚ್ಚಾಗಿ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಅರಿಶಿನದಲ್ಲಿ ಕಂಡುಬರುವಂತಹ ಕರ್ಕ್ಯುಮಿನ್ ಎಂಬ ಅಂಶವು ನಮ್ಮ ದೇಹದ ತೂಕದ ವಿಚಾರದಲ್ಲಿ ನೆರವಾಗುತ್ತದೆ.
ಇದು ನಮ್ಮ ದೇಹದಲ್ಲಿ ಆಂಟಿ ಇನ್ಫ್ಲಮೇಟರಿ ಲಕ್ಷಣಗಳನ್ನು ಪ್ರದರ್ಶಿಸಿ ಆಂಟಿ ಆಕ್ಸಿಡೆಂಟ್ ಗುಣ ಲಕ್ಷಣಗಳ ಜೊತೆಗೆ ದೇಹದ ತೂಕವನ್ನ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಆರೋಗ್ಯಕರವಾದ ತೂಕವನ್ನು ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಅವರು ತಮ್ಮ ಆಹಾರಪದ್ಧತಿಯಲ್ಲಿ ಅರಿಶಿನವನ್ನು ಸೇರಿಸಿಕೊಳ್ಳಬಹುದು.
ಇನ್ನು ಚಳಿಗಾಲದಲ್ಲಿ ಸಾಮಾನ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನ ಉತ್ತಮಪಡಿಸುವ ಹಾಗೆ ನಾವು ಯಾವುದಾದರು ಕಷಾಯಗಳನ್ನು ಮಾಡಿ ಕುಡಿಯ ಇರುತ್ತವೆ. ಒಂದು ವೇಳೆ ಇದರಲ್ಲಿ ಅರಿಶಿನ, ಶುಂಠಿ ಮತ್ತು ಕಾಳು ಮೆಣಸು ಸೇರಿದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಅತ್ಯಂತ ಸಮರ್ಥವಾಗಿ ಹೆಚ್ಚಿಸುತ್ತದೆ. ಅರಿಶಿನ ನಮ್ಮ ದೇಹದಲ್ಲಿಷ್ಟು ಬೇಗನೆ ಹೇಳಿಕೊಳ್ಳುವುದಿಲ್ಲ.ಇನ್ನು ಅರಿಶಿನ ತನ್ನಲ್ಲಿ ಆಂಟಿ ಕ್ಯಾನ್ಸರ್ ಗುಣಲಕ್ಷಣಗಳನ್ನು ಹೊಂದಿದೆ.
ಜೀವಕೋಶಗಳ ಹಾನಿಯನ್ನು ಇದು ಸಂಪೂರ್ಣವಾಗಿ ತಡೆಯುತ್ತದೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಗಡ್ಡೆಗಳು ಉಂಟಾಗದ ಹಾಗೆ ನೋಡಿಕೊಳ್ಳುತ್ತದೆ. ಅರಿಶಿನವನ್ನು ಯಾರು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಾದರೂ ಸೇವಿಸುತ್ತಾ ಬರುತ್ತಾರೆ. ಅವರಿಗೆ ಕ್ಯಾನ್ಸರ್ ಸಮಸ್ಯೆ ಬರುವುದಿಲ್ಲ ಮತ್ತು ಒಂದು ವೇಳೆ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಇದ್ದರೆ ಅವು ಬೇರೆ ಭಾಗಕ್ಕೆ ಹರಡುವುದಿಲ್ಲ ಎಂಬುದು ಸಂಶೋಧಕರ ಮಾತು.