ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ಸುಲಭವಾಗಿ ತಿಳಿಯಬಹುದು

ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ಸುಲಭವಾಗಿ ತಿಳಿಯಬಹುದು.

ನಮಸ್ಕಾರ ಆತ್ಮೀಯರೇ ನಿಮ್ಮ ಆರೋಗ್ಯವನ್ನು ನಿಮ್ಮ ಬೆರಳುಗಳಿಂದ ತಿಳಿಯಬಹುದು ಅದು ಹೇಗೆ ಎಂದು ನೋಡೋಣ ಬನ್ನಿ ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ಒಂದು ರೀತಿಯಲ್ಲಿ ಮಾಹಿತಿ ನೀಡುತ್ತದೆ ಅದನ್ನು ತಿಳಿದುಕೊಂಡು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಹಾಗಿದ್ದರೆ ಉಗುರಿನಲ್ಲಿರುವ ಅರ್ಧಚಂದ್ರಾಕೃತಿಯ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ಈಗ ತಿಳಿಯೋಣ.

ನಿಮ್ಮ ಉಗುರಿನಲ್ಲಿ ದೊಡ್ಡ ಚಂದ್ರಕಾರದ ಮಚ್ಚೆ ಇದ್ದರೆ ಆರೋಗ್ಯ ತುಂಬಾ ಚೆನ್ನಾಗಿದೆ ಎಂದರ್ಥ ಚಂದ್ರ ಚಿಕ್ಕದಾಗಿದ್ದರೆ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ ಇವರಿಗೆ ಪಚನಕ್ರಿಯೆ ತುಂಬಾ ನಿಧಾನವಾಗಿರುತ್ತದೆ ಚಂದ್ರಕಾರದ ಮಚ್ಚೆ ಇಲ್ಲದಿದ್ದರೆ ಥೈರಾಡ್ ಪ್ರಾಬ್ಲಮ್ ಇದೆ ಎಂದರ್ಥ ಇರುವ 10 ಬೆರಳುಗಳಲ್ಲಿ ಕನಿಷ್ಠ 8 ಉಗುರಿಗೆ ಚಂದ್ರಕಾರದ ಮಚ್ಚೆ ಇರಬೇಕು ಇಲ್ಲವಾದಲ್ಲಿ ವಿಟಮಿನ್ A ಮತ್ತು ಪೌಷ್ಟಿಕಾಂಶದ ಕೊರತೆ ಇದೆ ಎಂದರ್ಥ ಬಿಳಿ ಮಚ್ಚೆ ಒಂದು ಬಾರಿ ಕಾಣಿಸಿದರೆ ಮತ್ತೊಂದು ಬಾರಿ ಮಾಯವಾಗುತ್ತದೆ.

ಇಂತಹ ಸಮಸ್ಯೆ ಹೊಂದಿರುವವರು ದೇಹಕ್ಕೆ ಬೇಕಾಗಿರುವಷ್ಟು ಆಹಾರ ಸೇವಿಸುತ್ತಿಲ್ಲ ಎಂದರ್ಥ ಉಗುರು ಅರಿಶಿನ ಬಣ್ಣಕ್ಕೆ ತಿರುಗಿದರೆ ಲಿವರ್ ಸಮಸ್ಯೆ ಇದೆ ಎಂದರ್ಥ ಇದು ಕಾಮಾಲೆ ರೋಗದ ಲಕ್ಷಣವೂ ಆಗಿರಬಹುದು ಉಗರು ಬಿಳಿಚಿ ಕೊಂಡಿದ್ದರೆ ರಕ್ತ ಕಡಿಮೆ ಇದೆ ಎಂದರ್ಥ ಇವರ ಹೃದಯ ಬಡಿತವು ಹೆಚ್ಚಾಗಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು.

ಕಪ್ಪು ಕಲೆ ಇದ್ದರೆ ಅವರಿಗೆ ಚರ್ಮದ ಕ್ಯಾನ್ಸರ್ ಇರುವ ಸಾಧ್ಯತೆ ಇದೆ ಆದ್ದರಿಂದ ಉಗುರುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ಯಾವುದೇ ರೀತಿಯ ಸಂದೇಶ ಕಂಡುಬಂದಲ್ಲಿ ವೈದ್ಯರ ಬಳಿ ತೋರಿಸಿ ಅನುಮಾನವನ್ನು ಬಗೆಹರಿಸಿಕೊಳ್ಳಿ ಉತ್ತಮ ಆರೋಗ್ಯ ನಿಮ್ಮದಾಗಲಿ ಹಾಗೂ ನಿಮ್ಮವರಿಗೂ ಈ ಮಾಹಿತಿಯನ್ನು ತಿಳಿಸಿ ಅವರ ಆರೋಗ್ಯವನ್ನು ಕಾಪಾಡಿ.

Leave A Reply

Your email address will not be published.