ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಒಂದುವೇಳೆ ಹಂಚಿಕೊಂಡರೆ ಏನಾಗುತ್ತೆ ಗೊತ್ತಾ ಸಣ್ಣ ತಪ್ಪಿಗೆ ಮಾಡಿ ದೊಡ್ಡ ಸಮಸ್ಯೆ ಎದುರಾಗುತ್ತದೆ.
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಎಷ್ಟೇ ಕಷ್ಟ ಬಂದರೂ ಈ ನಾಲ್ಕು ವಿಷಯಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಹಂಚಿಕೊಳ್ಳಲು ಹೋಗಬೇಡಿ, ಹೌದು ಸ್ನೇಹಿತರೆ ಪ್ರಾಣ ಹೋಗುವ ಸಂದರ್ಭ ಬಂದರೂ ಈ ಕೆಲವೊಂದು ವಿಷಯವನ್ನು ಯಾರ ಹತ್ತಿರ ಕೂಡ ಹೇಳಿಕೊಳ್ಳಬೇಡಿ ಒಂದು ವೇಳೆ ಹೇಳಿಕೊಂಡರೆ ಕೆಟ್ಟ ಗಳಿಗೆ ಶುರುವಾಗುತ್ತದೆ, ಹೌದು ಕೆಲವೊಮ್ಮೆ ಪ್ರಾಣ ಹೋಗುವ ಸಂದರ್ಭ ಬಂದರೂ ಕೂಡ ಕೆಲವೊಂದು ವಿಷಯಗಳನ್ನು ಯಾರ ಬಳಿ ಕೂಡ ಹೇಳಿಕೊಳ್ಳಬಾರದು ಒಂದುವೇಳೆ ಹೇಳಿಕೊಂಡರೆ ಕೆಟ್ಟ ಗಳಿಗೆ ಶುರುವಾಗುತ್ತದೆ ಎಂದು ಹೇಳಲಾಗುತ್ತದೆ.
ಗೆಳೆಯರೇ ನಮಗೆ ಇಷ್ಟ ಬಂದಂತೆ ಮನಸ್ಸಿಗೆ ಬಂದಂತೆ ಹೇಳುತ್ತೇವೆ ಆಗ ಅಪ್ಪಿತಪ್ಪಿ ಹೇಳಿದ ಮಾತು ಭವಿಷ್ಯದಲ್ಲಿ ತೊಂದರೆಯನ್ನು ಉಂಟುಮಾಡುವ ಸಂದರ್ಭ ಬರುತ್ತದೆ ಹಾಗಾಗಿ ಪುರುಷ ಹಾಗೂ ಮಹಿಳೆಯರು ಕೆಲವೊಂದು ವಿಷಯಗಳನ್ನು ತಮ್ಮ ಬಳಿ ಇರಿಸಿಕೊಳ್ಳುವುದು ತುಂಬಾ ಉತ್ತಮ ಆ ವಿಷಯಗಳು ಯಾವುದೆಂದು ಈಗ ತಿಳಿಯೋಣ.
ಮೊದಲನೆಯದು ಅವಮಾನ ಸ್ನೇಹಿತರೆ ಕೆಲವೊಮ್ಮೆ ನಮಗೆ ಎಷ್ಟೇ ಅವಮಾನವಾದರೂ ನಮ್ಮ ಹತ್ತಿರವೆ ಇಟ್ಟುಕೊಳ್ಳುವುದು ಒಳ್ಳೆಯದು ಒಂದು ವೇಳೆ ಈ ವಿಷಯವನ್ನು ಬೇರೆಯವರಿಗೆ ಹೇಳಿಕೊಂಡರೆ ಅವರು ನಮ್ಮನ್ನು ನೋಡಿ ಮಿಸ್ ಯೂಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದರಿಂದ ಇನ್ನಷ್ಟು ಅವಮಾನ ಆಗಬಹುದು ಅಥವಾ ನೋವಾಗಬಹುದು ಆದ್ದರಿಂದ ಈ ಅವಮಾನದ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಎರಡನೆಯದು ಧನ ನಷ್ಟ ಈಗಿನ ಕಾಲದಲ್ಲಿ ಮನುಷ್ಯನ ಆರ್ಥಿಕ ಪರಿಸ್ಥಿತಿಯ ಮೂಲದಿಂದಲೇ ಆತನನ್ನು ಅಳೆಯಲಾಗುತ್ತದೆ, ವ್ಯಕ್ತಿಯ ಬಳಿ ಹಣವಿದ್ದರೆ ಮಾತ್ರ ಅವರನ್ನು ತಮ್ಮ ಬಳಿ ಸೇರಿಸಿಕೊಳ್ಳುವ ಜನರು ಬಹಳಷ್ಟಿದ್ದಾರೆ ಆದ್ದರಿಂದ ಅವರು ಬಡವರಾಗಿದ್ದರೆ ಅವರನ್ನು ಹತ್ತಿರ ಕೂಡ ಸೇರಿಸಿಕೊಳ್ಳುವುದಿಲ್ಲ ಕೀಳಾಗಿ ಕಾಣುತ್ತಾರೆ ಹಾಗಾಗಿ ನಮಗೆ ಎಷ್ಟೇ ಧನ ಹಾನಿಯಾಗಿದ್ದರೂ ಇದನ್ನು ಬೇರೆಯವರು ಬಳಿ ಹೇಳಿಕೊಳ್ಳದೆ ಇರುವುದು ತುಂಬಾ ಉತ್ತಮ ಏಕೆಂದರೆ ಇದು ಸಂಬಂಧಗಳನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಹಾಗೇ ನಮ್ಮ ಬಳಿ ತುಂಬಾ ಹಣವಿದ್ದರೂ ಕೂಡ ಆ ವಿಷಯವನ್ನು ಹೇಳಿಕೊಳ್ಳದೆ ಇರುವುದು ಒಳ್ಳೆಯದು.
ಕುಟುಂಬದಲ್ಲಿ ಗಲಾಟೆ ಸ್ನೇಹಿತರೆ ಕುಟುಂಬದಲ್ಲಿ ಸಣ್ಣಪುಟ್ಟ ಗಲಾಟೆ ಸಾಮಾನ್ಯ , ಕುಟುಂಬದ ಗುಟ್ಟು ನಮ್ಮಲ್ಲಿದ್ದರೆ ಒಳ್ಳೆಯದು ಈ ವಿಷಯ ಬೇರೆಯವರಿಗೆ ತಿಳಿದರೆ ಸಮಾಜದಲ್ಲಿ ಘನತೆ ಗೌರವ ಕಡಿಮೆಯಾಗುತ್ತದೆ ಕುಟುಂಬವನ್ನು ಹಾಳುಮಾಡಲು ಬಯಸುವರು ಈ ತರದ ವಿಷಯವನ್ನು ಮಾಡಿ ಲಾಭವನ್ನು ಪಡೆಯುತ್ತಾರೆ.
ನಾಲ್ಕನೆಯದು ಮಂತ್ರ ಗುರುಗಳು ಹೇಳಿಕೊಡುವ ಮಂತ್ರವನ್ನು ಬೇರೆಯವರಿಗೆ ಹೇಳಬಾರದು ಆ ಮಂತ್ರವನ್ನು ಯಾರಿಗೂ ಹೇಳದೆ ಪಠಿಸಿದರೆ ಒಂದು ದಿನ ಲಾಭ ಸಿಗುತ್ತದೆ, ಅದು ಅಲ್ಲದೆ ಮಂತ್ರವನ್ನು ಗುಪ್ತವಾಗಿ ಇರಿಸುವುದರಿಂದ ಶೀಘ್ರವಾಗಿ ಶುಭ ಫಲಿತಾಂಶವನ್ನು ಪಡೆಯುತ್ತೀರಿ. ಐದನೆಯದಾಗಿ ದಾನ ಸ್ನೇಹಿತರೆ ದಾನವನ್ನು ಮಾಡಿದಾಗ ಬೇರೆಯವರಿಗೆ ಹೇಳಿದರೆ ಅದರ ಫಲ ನಿಮಗೆ ಸಿಗುವುದಿಲ್ಲ ಹಾಗಾಗಿ ಬಲಗೈಯಲ್ಲಿ ಕೊಟ್ಟ ವಿಷಯ ಎಡಗೈ ಗೆ ತಿಳಿಯಬಾರದು ಹಾಗಾಗಿ ಗುಪ್ತವಾಗಿ ದಾನಮಾಡುವುದು ಒಳ್ಳೆಯದು ಇದರಿಂದ ಒಳ್ಳೆಯ ಕೆಲಸಕ್ಕೆ ಬೆಲೆ ಹೆಚ್ಚಾಗುತ್ತದೆ.