ವೀಕ್ಷಕರೇ ನಮಸ್ಕಾರ ತಮ್ಮ ಪರಿಚಯವಾಗಿ ಸುಸ್ವಾಗತ. ಆದರೆ ನಮ್ಮ ಭಾರತ ದೇಶ ದೇವಾನುದೇವತೆಗಳಿಂದಲೇ ನಿರ್ಮಿತವಾದಂತಹ ಪರಮ ಪುಣ್ಯ ಭೂಮಿ ಈ ಭಾರತ ದೇಶವು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಸಹ ಅನೇಕ ಪುಣ್ಯ ನದಿಗಳು, ಪುಣ್ಯ ಕ್ಷೇತ್ರಗಳು ಹಾಗು ಪುಣ್ಯ ಸರೋವರಗಳಿಂದಲೇ ಕೂಡಿದೆ.
ನಮ್ಮ ರಾಜ್ಯ ಕರ್ನಾಟಕದಲ್ಲಿಯೂ ಸಹ ನೂರಾರು ವರ್ಷಗಳ ಇತಿಹಾಸ ವಿರುವ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಹಲವಾರು ಪುಣ್ಯ ಕ್ಷೇತ್ರಗಳಿವೆ.ನಾವಿಂದು ನಮ್ಮ ಪ್ರಸ್ತುತ ಸಂಚಿಕೆಯಲ್ಲಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀನಿವಾಸ ದೇವರು ದಿನೇ ದಿನೇ ಬೆಳೆಯುತ್ತಿರುವ ಸಾಲಿಗ್ರಾಮ ಶಿಲೆಯ ರೂಪದಲ್ಲಿ ನೆಲೆಸಿರುವ ನಮ್ಮ ಕರ್ನಾಟಕದ ಒಂದು ಪವಿತ್ರ ಕ್ಷೇತ್ರದ ಪರಿಚಯವನ್ನು ಮಾಡ ಹೊರಟಿದ್ದೇವೆ.
ಅದುವೆ ಶ್ರೀ ಕ್ಷೇತ್ರ ಚೆಂಡೂರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಿಂದ ದಕ್ಷಿಣ ದಿಕ್ಕಿನಲ್ಲಿ ಕೇವಲ 12 ಕಿಲೋಮೀಟರ್ ದೂರದಲ್ಲಿರುವಂತಹ ಪುಟ್ಟ ಗ್ರಾಮವೇ ಚೆಂಡೂರು ಗ್ರಾಮ ಪ್ರಾಕೃತಿಕ ಸೌಂದರ್ಯದ ಜೊತೆಜೊತೆ ಗೆ ಸಾಕ್ಷಾತ್ ಶ್ರೀನಿವಾಸ ದೇವರು ಸಾಲಿಗ್ರಾಮ ರೂಪಿ ಯಾಗಿ ನೆಲೆಸಿ ಭಕ್ತಾದಿಗಳನ್ನು ಸಲಹುತ್ತ ಇರುವಂತಹ ಪುಣ್ಯಕ್ಷೇತ್ರವೇ
ಈ ಚೆಂಡೂರು ಚೆಂಡೂರು ಗ್ರಾಮದಲ್ಲಿ ಇರುವಂತಹ ವೆಂಕಟೇಶ್ವರ ಸ್ವಾಮಿಯ ದೇಗುಲ ಸುಮಾರು 500 ವರ್ಷಗಳಿಗಿಂತಲೂ ಪುರಾತನವಾದದ್ದು.ಈ ದೇಗುಲ ಒಂದು ವಿಶೇಷವಾದ ಹಿನ್ನೆಲೆಯನ್ನುಗಳಿಸಿದೆ.
ದೇವಾಲಯ ವ್ಯಾಸರಾಜರ ಕಾಲ ಕ್ಕಿಂತಲೂ ಹಳೆಯದಾಗಿದೆ. ಚೆಂಡು ಊರಿನಲ್ಲಿ ಸಾಲಿಗ್ರಾಮ ರೂಪಿಯಾಗಿ ನೆಲೆಸಿರುವ ಶ್ರೀನಿವಾಸ ಸ್ವಾಮಿಯು ತಮ್ಮನ್ನು ನಂಬಿ ಬಂದ ಭಕ್ತಾದಿಗಳನ್ನು ಕೈ ಬಿಡದೇ ಸಲಹುತ್ತಾರೆ. ಚೆಂಡೂರು ಬೆಂಗಳೂರಿನಿಂದ ತೊಂಬತ್ತು ಕಿಲೋಮೀಟರ್ ದೂರದಲ್ಲಿದೆ ಬೆಂಗಳೂರಿನಿಂದ ಬಾಗೇಪಲ್ಲಿಗೆ ತಲುಪಲು ಅನೇಕ ಬಸ್ಸುಗಳು ದೊರೆಯುತ್ತವೆ.
ಬಾಗೇಪಲ್ಲಿಯಿಂದ ಆಟೋ ಅಥವಾ ಟ್ಯಾಕ್ಸಿಯ ಮೂಲಕ ಚೆಂಡೂರು ಗ್ರಾಮವನ್ನು ಸುಲಭವಾಗಿ ತಲುಪಬಹುದು. ಆತ್ಮೀಯ ವೀಕ್ಷಕರೆ ನಮ್ಮ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಸಮೀಪವಿರುವಂತಹ ಒಂದು ವಿಶೇಷವಾದ ಧಾರ್ಮಿಕ ಕ್ಷೇತ್ರದ ಪರಿಚಯವನ್ನು ಮಾಡಿಕೊಡ ನಮಗೆಲ್ಲರಿಗೂ ಭಗವಂತನ ಕೃಪಾ ಕಟಾಕ್ಷ ಸದಾಕಾಲ ಎಂದು ಕೋರಿಕೊಳ್ಳುತ್ತಾ ಈ ಕಿರು ಪರಿಚಯ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ