ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುವಾಗ ಅಥವಾ ಮನೆಯಲ್ಲಿ ಹೊರಗೆ ನಿಂತಾಗ ಕಾಗೆಗಳು ಹತ್ತಿರಕ್ಕೆ ಬಂದು ಹೋಗುತ್ತವೆ. ಕೆಲವೊಮ್ಮೆ ಅವುಗಳು ನಮ್ಮ ತಲೆಗೆ ಬಂದು ಕುಕ್ಕಿ ಹೋಗುತ್ತವೆ. ಜ್ಯೋತಿಷ್ಯದ ಪ್ರಕಾರ ಇದಕ್ಕೆ ಅನೇಕ ಅರ್ಥಗಳಿದೆ. ಹಾಗಾದ್ರೆ ಕಾಗೆ ಬಂದು ತಲೆಗೆ ಕುಕ್ಕಿದರೆ ಅಥವಾ ತಾಗಿಸಿದರೆ ಅದರ ಅರ್ಥವೇನು ಎಂಬುದು ಇಲ್ಲಿದೆ ಕಾಗೆ ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುವ ಪಕ್ಷಿಯಾಗಿದೆ.
ಈ ಕಾಗೆ ನಮ್ಮ ಜೀವನದ ಒಂದು ಅಂಗವಾಗಿದೆ. ಈ ಕಾಗೆ ನಮ್ಮ ಪೂರ್ವಜರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಕಾಗೆಯ ಮನೆ ಹತ್ತಿರ ಬಂದು ಕೂರುವುದಕ್ಕೂ ಹಾಗೂ ತಲೆಗೆ ಬಂದು ಕುಕ್ಕಿದರೂ ಅದಕ್ಕೂ ನೂರಾರು ಅರ್ಥಗಳಿದೆ. ಹಾಗಾದ್ರೆ ಈ ಕಾಗೆ ನಿಮ್ಮ ತಲೆಗೆ ಬಂದು ಹೊಡೆದರೆ ಅಥವಾ ಕುಕ್ಕಿದರೆ ಅದರ ಅರ್ಥವೇನು ಹಾಗೂ ಅದರಿಂದ ಏನಾಗುತ್ತದೆ ಎಂಬುದು ಇಲ್ಲಿದೆ. ಇನ್ನು ಕಾಗೆಯನ್ನ ಶನಿ ದೇವರ ವಾಹನ ಎನ್ನಲಾಗುತ್ತದೆ.
ಈ ಕಾಗೆ ನಮಗೆ ಅನೇಕ ಭಯವನ್ನ ಹುಟ್ಟಿಸುತ್ತದೆ. ಕಾಗೆ ಹತ್ತಿರಕ್ಕೆ ಬಂದರೆ ನಮಗೆ ಬಹಳ ಭಯವಾಗುತ್ತದೆ. ಆದರೆ ಈ ಕಾಗೆ ಕೆಲವೊಮ್ಮೆ ಶುಭಫಲಗಳನ್ನ ನೀಡುತ್ತದೆ ಎನ್ನಲಾಗುತ್ತದೆ. ಇದಲ್ಲದೇ ಈ ಕಾಗೆಯೂ ನಮ್ಮ ಭವಿಷದ ಬಗೆ ಸೂಚನೆಯನ್ನ ನೀಡುತ್ತದೆ ಎನ್ನುವ ನಂಬಿಕೆ ಇದೆ.ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದಕ್ಕೆ ಕೆಟ್ಟ ಅರ್ಥಗಳೇ ಇರುವುದು.
ಈ ರಿತಿ ಕಾಗೆ ಕುಟ್ಟುವುದು ಅಶುಭ ಎಂದರ್ಥ. ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಎಂಬುದರ ಸೂಚನೆ ಎನ್ನಲಾಗುತ್ತದೆ. ಅಲ್ಲದೇ, ಸದ್ಯದಲ್ಲಿ ಅಶುಭ ಸುದ್ದಿ ಕೇಳುವ ಮೇಲೆ ಅನೇಕ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.ಮೊದಲೇ ಹೇಳಿದಂತೆ ಈ ಕಾಗೆ ನಮಗೆ ಭವಿಷ್ಯದ ಸೂಚನೆಯನ್ನ ನೀಡುತ್ತದೆ. ಮುಖ್ಯವಾಗಿ ಇದು ಕುಟುಂಬದಲ್ಲಿ ಕೆಟ್ಟದ್ದೇನೋ ನಡೆಯೋ ಸೂಚನೆಯನ್ನ ಕಾಗೆ ನೀಡುತ್ತದೆ.
ಈ ಕಾರಣಕ್ಕೆ ಕಾಗೆ ತಲೆ ಮೇಲೆ ಕುಕ್ಕಿ ಹೋಗುತ್ತದೆ ಎನ್ನುತ್ತಾರೆ ಹಿರಿಯರು. ಅಲ್ಲದೇ, ತಲೆಗೆ ಕಾಗೆ ಕುಕಿದರೆ ಮನೆಯಲ್ಲಿ ನೋವಿನ ಘಟನೆ ನಡೆಯಬಹುದು. ನೀವು ಸಾವಿನ ಸುದ್ದಿ ಕೇಳುವಿರಿ ಎಂಬ ಸೂಚನೆ ಕಾಗೆ ನೀಡುತ್ತದೆ. ಇನ್ನು ಕೆಲ ವಿಚಾರಗಳ ಬಗ್ಗೆಯೂ ಕಾಗೆ ಈ ರೀತಿ ಕುಕ್ಕುವುದರ ಮೂಲಕ ಎಚ್ಚರಿಕೆ ನೀಡುತ್ತದೆ.
ಜೀವನದಲ್ಲಿ ಕಷ್ಟ ಕಾಲ ಬರುವುದಿದೆ, ಹಾಗಾಗಿ ಎಚ್ಚರದಿಂದ ಯೋಚಿಸಿ ಹೆಜ್ಜೆ ಇಡಬೇಕು ಎಂದು ಇಲ್ಲದಿದ್ದರೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ, ಕಾಗೆಯನ್ನ ಯಮನ ದೂತ ಎಂದು ಪರಿಗಣಿಸಲಾಗಿದೆ. ಹಾಗಾಗಿ ತಲೆಗೆ ಬಂದು ಕಾಗೆ ಕುಟ್ಟಿದರೆ ನಮ್ಮ ಜೀವಕ್ಕೂ ಸಹ ಅಪಾಯವಿದೆ ಎಂದರ್ಥ. ಅಪ್ಪಿ-ತಪ್ಪಿ ಕಾಗೆ ನಿಮ್ಮ ತಲೆಗೆ ಕುಟ್ಟಿದರೆ ನಿಮಗೆ ಹಣಕಾಸಿನ ಸಮಸ್ಯೆಗಳು ಸಹ ಉಂಟಾಗಬಹುದು.
ಇದರಿಂದ ನೀವು ಅಪಾರ ನಷ್ಟ ಸಹ ಅನುಭವಿಸಬಹುದು ಎನ್ನಲಾಗುತ್ತದೆ. ಇನ್ನು ಕಾಗೆ ಮನೆಯ ಹತ್ತಿರ ಬಂದು ಪದೇ ಪದೇ ಕೂಗುತ್ತಿದ್ದರೆ ಅದಕ್ಕೂ ಸಹ ಅರ್ಥವಿದೆ. ಮುಖ್ಯವಾಗಿ ಇದು ಹಿರಿಯರು ಕಳುಹಿಸಿರುವ ಸಂಕೇತ ಎನ್ನಲಾಗುತ್ತದೆ. ನಿಮಗೆ ‘ಮುಂದಿನ ಅಪಾಯದ ಬಗ್ಗೆ ಸೂಚನೆ ನೀಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಮನೆಗೆ ಅತಿಥಿಗಳು ಬರುವುದನ್ನ ಸಹ ಈ ಕಾಗೆಗಳು ಸೂಚಿಸುತ್ತವೆ.
ನಿಮ್ಮ ಕಾಗೆ ತಲೆಗೆ ಕುಕ್ಕಿದರೆ ಅದಕ್ಕೆ ಸೂಚಿಸುತ್ತವೆ.ನಿಮ್ಮ ಕಾಗೆ ತಲೆಗೆ ಕುಕ್ಕಿದರೆ ಅದಕ್ಕೆ ಕೆಲ ಪರಿಹಾರ ಮಾಡಿ, ನೀವು ಕುಕ್ಕಿದ ತಕ್ಷಣ ಮನೆಗೆ ಬಂದು ತಲೆಸ್ನಾನ ಮಾಡಿ, ಮನೆಯಲ್ಲಿ ದೀಪ ಹಚ್ಚಿ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿ. ನಂತರ ಮತ್ತೊಂದು ದೊಡ್ಡ ಹಣತೆಯಲ್ಲಿ ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಈ ಮೂರು ಎಣ್ಣೆಗಳನ್ನ ಮಿಕ್ಸ್ ಮಾಡಿ, ಅದಕ್ಕೆ 5 ಬಣ್ಣದ ಬತ್ತಿಯನ್ನ ಹಾಕಬೇಕು. ಬಿಳಿ, ಕೆಂಪು, ಹಸಿರು, ನೀಲಿ, ಕಪ್ಪು ಬತ್ತಿಯನ್ನ ಹಾಕಿ ದೀಪವನ್ನ ದೇವಸ್ಥಾನದಲ್ಲಿ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು.