ಮಕರ ರಾಶಿ ಮತ್ತು ಕುಂಭ ರಾಶಿ. ಯಾವ ಹರಳು ಧರಿಸಬೇಕು.

ಮಕರ ರಾಶಿಯ ಅಧಿಪತಿ ಶನಿ ಮಕರ ರಾಶಿಯನ್ನು ಶನಿ ಗ್ರಹ ಆಗುತ್ತೆ. ಶನಿಯ ಆಡಳಿತದ ಅಡಿಯಲ್ಲಿ ಬರುವ ಕಾರಣ ಮಕರ ರಾಶಿಯವರು ಸಾಕಷ್ಟು ಶಿಸ್ತಿನಿಂದ ಇರುತ್ತಾರೆ. ಶಿಸ್ತಿಗೆ ಅವರು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಎಲ್ಲ ರಾಶಿಚಕ್ರದ ಚಿಹ್ನೆಗಳಲ್ಲಿ ಮಕರ ರಾಶಿಯು ಹೆಚ್ಚು ದೃಢ ಸಂಕಲ್ಪ ವಿರುವ ರಾಶಿ ಅಂತಾನೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರ ಪ್ರಮುಖ ಗುಣ ಲಕ್ಷಣಗಳು ಮಹತ್ವ ಕಾಂಕ್ಷಿ, ಸಂಪ್ರದಾಯವಾದಿಗಳು, ಪ್ರಾಯೋಗಿಕತೆ ಮತ್ತು ದೃಢ ನಿಶ್ಚಯವನ್ನು ಒಳಗೊಂಡಿರುತ್ತಾರೆ.

ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವ ಪ್ರಾಕ್ಟಿಕಲ್ ಲೈಫ್‌ನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು.ಇವರು ಹೊಂದಿರುತ್ತಾರೆ. ಮಕರ ರಾಶಿಯವರು ಉತ್ತಮ ನಾಯಕ ರಾಗುತ್ತಾರೆ. ಯಾಕಂದ್ರೆ ಅವರು ತಾವು ಮಾಡಿರುವ ಕೆಲಸವನ್ನು ಗಮನ ವಿಟ್ಟು ಪೂರ್ಣಗೊಳಿಸಿದ್ದಾರೆ. ಇವರ ಲ್ಲಿ ನಾಯಕತ್ವ ಗುಣಗಳು ಜಾಸ್ತಿಯಾಗಿರುತ್ತವೆ. ಯಾವುದೇ ಕೆಲಸಗಳನ್ನು ವಹಿಸಿ ಕೊಟ್ಟರು.

ಅದನ್ನ ಸರಿಯಾದ ಸಮಯಕ್ಕೆ ಮಾಡಿ ಮುಗಿಸುವುದರಲ್ಲಿ ಇವರು ಎತ್ತಿದ ಕೈ. ಆದರೆ ಈ ಕಾರ್ಯ ನಿರತ ವ್ಯಕ್ತಿಗಳು ಕೆಲವೊಮ್ಮೆ ಅನುಮಾನಾಸ್ಪದವಾಗಿಯು ಇರ್ತಾರೆ ಮಾತ್ರವಲ್ಲ ಅದ ಮಾರಿ ಗುಣ ವನ್ನು ಕೂಡ ಹೊಂದಿರುತ್ತಾರೆ. ಮಕರ ರಾಶಿಯನ್ನು ಪ್ರತಿನಿಧಿಸುವ ಮಕರ ಹಿಂದೂ ಪುರಾಣಗಳ ಪ್ರಕಾರ ಇದನ್ನ ಸಮುದ್ರ ಜೀವಿ ಅಂತ ಕನ್ಸಿ ಡರ್ ಮಾಡಿದ್ದಾರೆ.

ಮಕರ ರಾಶಿಯವರ ದೇಹರಚನೆ ನೋಡುವುದಾದರೆ ಈ ರಾಶಿಯವರು ಕಡಿಮೆ ತೂಕ ಹೊಂದಿರುತ್ತಾರೆ. ಇವರು ಸೆಲ್ಫ್ ಸೆಂಟರ್ಡ್ ಆಗಿರ್ತಾರೆ.ಅವರು ಸ್ವಭಾವ ತಃ ತುಂಬಾ ಹಠಮಾರಿಗಳು, ಯಾವುದೇ ಸಂಗತಿಗಳು ಇವರಿಗೆ ಒಮ್ಮೆ ಬೇಕು ಅನಿಸಿದರೆ ಮುಗಿತು. ಅದನ್ನ ಹೇಗಾದರೂ ಮಾಡಿ ಪಡೆದೇ ಪಡೆಯುತ್ತಾರೆ. ಮಕರ ರಾಶಿಯವರ ನೆನಪಿನ ಶಕ್ತಿ ಅದ್ಭುತವಾಗಿದೆ.

ಆರ್ಥಿಕ ವಿಷಯಗಳಿಗೆ ಬಂದಾಗ ಇವರು ತುಂಬಾ ಬುದ್ಧಿವಂತಿಕೆ ಉಪಯೋಗಿಸುತ್ತಾರೆ. ಸೇವೆ ಮಾಡುವ ಮನೋಭಾವ ಇವರ ಲ್ಲಿ ಹೆಚ್ಚಿರುತ್ತೆ. ಮಕರ ರಾಶಿಯವರು ಶೈಕ್ಷಣಿಕ ಕ್ಷೇತ್ರದ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಅಧ್ಯಯನದ ಮೇಲೆ ಉತ್ತಮ ಹಿಡಿತವನ್ನು ಹೊಂದಿದ್ದಾರೆ.

ಮಕರ ರಾಶಿಯವರು ಕೂಡ ಪ್ರೀತಿಯಲ್ಲಿ ತುಂಬಾ ಅದೃಷ್ಟವಂತರು ಸಂಗಾತಿಯನ್ನ ಸರಿಯಾಗಿ ಅರ್ಥ ಮಾಡಿಕೊಂಡು ಪ್ರೀತಿಸುವುದರಲ್ಲಿ ಸಹಬಾಳ್ವೆ ನಡೆಸಿದ ಲ್ಲಿ ಇವರು ಖುಷಿ ಪಡುತ್ತಾರೆ. ಹಾಗಾಗಿ ಇವರ ವೈವಾಹಿಕ ಜೀವನವು ಆನಂದಮಯವಾಗಿರುತ್ತೆ.ಮಕರ ರಾಶಿಯವರ ಲಿಮಿಟೇಷನ್ ಅಥವಾ ನ್ಯೂನತೆಗಳ ಬಗ್ಗೆ ನೋಡ್ತಾ ಹೋದ್ರೆ ಇವರು ಬಹಳ ಸುಲಭವಾಗಿ ಕಿರಿಕಿರಿ ಗೆ ಒಳಗಾಗುತ್ತಾರೆ.

ಕೆಲವೊಮ್ಮೆ ಸಣ್ಣ ಪುಟ್ಟ ಸಂಗತಿಗಳಿಗೂ ಕಿರುಚಾಡುತ್ತಾರೆ. ಇದರೊಂದಿಗೆ ಅವರ ವರ್ತನೆಯ ಲ್ಲಿ ಸ್ವಲ್ಪ ಪ್ರಮಾಣದ ಅಹಂಕಾರ ವು ಕಂಡುಬರುತ್ತೆ. ಅವರು ಎಲ್ಲರಿಗಿಂತಲೂ ಹೆಚ್ಚು ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರು ಅಂತ ಕರೆಯಲಾಗುತ್ತೆ. ಆದರೆ ಅವರು ಯಾವಾಗ ಲೂ ಸವಾಲುಗಳು ಮತ್ತು ಸ್ಪರ್ಧಿಗಳಿಗೆ ಸಿದ್ಧರಾಗಿರುತ್ತಾರೆ.

ಯಾವುದೇ ಸ್ಪರ್ಧೆ ಬರಲಿ, ಅದನ್ನ ಖುಷಿಯಿಂದ ಮತ್ತು ಧೈರ್ಯ ದಿಂದ ಎದುರಿಸುತ್ತಾರೆ. ಆದರೆ ಕೆಲವೊಂದು ಕೆಲಸಗಳನ್ನು ಮಾಡುವಾಗ ಆ ಕೆಲಸ ವಿಫಲಗೊಂಡರೆ ಏನು ಗತಿ ಅನ್ನೋ ಭಯ ಇವರಲ್ಲಿರುತ್ತದೆ ಮಾಡುವ ಯಾವುದೇ ಕೆಲಸದಲ್ಲಿ ಅವರು ವಿಫಲವಾದಾಗ ಬದುಕಿನಲ್ಲಿ ಅವರು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತೆ.

Leave A Reply

Your email address will not be published.