ಬೆಲ್ಲದ ಚಹಾ ಈ ಕಾಯಿಲೆ ಇದ್ದವರು ಇವತ್ತೆ ಸೇವಿಸಿ ನೋಡಿ

Recent Posts

ಬೆಲ್ಲದ ಚಹಾ ಈ ಕಾಯಿಲೆ ಇದ್ದವರು ಇವತ್ತೆ ಸೇವಿಸಿ ನೋಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಬೇರೆ ಯಾವುದೇ ಸಂದರ್ಭದಲ್ಲಿ ಆದರೂ ಪರವಾಗಿಲ್ಲ ಆದರೆ ಚಳಿಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ ನಮ್ಮ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೆ ನೆಗಡಿ ಬರುವುದು ಖಂಡಿತ ಬೇರೆ ಸಮಯದಲ್ಲಿ ನಿರ್ಲಕ್ಷ ಮಾಡಿದಂತೆ ಈಗ ನೆಗಡಿಯನ್ನು ನಿರ್ಲಕ್ಷಿಸಿದರೆ ಖಂಡಿತ ಜ್ವರಕ್ಕೆ ಸಂಬಂಧಪಟ್ಟ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಹೀಗಾಗಿ

ಸಣ್ಣ ಪ್ರಮಾಣದಲ್ಲಿ ನೆಗಡಿ ಬಂದ ತಕ್ಷಣ ಹೇಗಾದರೂ ಮಾಡಿ ನಿಮ್ಮ ದೇಹದ ತಾಪಮಾನವನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನ ಮಾಡಿ ಇದಕ್ಕೆ ಬೆಲ್ಲ ಒಂದು ಉತ್ತಮ ಪರಿಹಾರವೆಂದು ಹೇಳಬಹುದು ಹಾಗೆಂದು ಇದ್ದಕ್ಕಿದ್ದಂತೆ ಅಪಾರ ಪ್ರಮಾಣದಲ್ಲಿ ಬೆಲ್ಲ ತಿನ್ನಬೇಕು ಎಂದೇನಿಲ್ಲ ನೀವು ಕುಡಿಯುವ ಕಾಫಿ ಅಥವಾ ಚಹಾದಲ್ಲಿ ಸಕ್ಕರೆ ಬದಲು ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಿರಿ ಮನೆಯಲ್ಲಿ ಒಂದು ವೇಳೆ ಎಳ್ಳು ಇದ್ದರೆ ಅದರ ಜೊತೆ ಬೆಲ್ಲ ಸೇರಿಸಿ ತಿನ್ನಬಹುದು ಹೀಗೆ ಹಲವಾರು ವಿಧಗಳಲ್ಲಿ ಬೆಲ್ಲವನ್ನು ಸೇವನೆ ಮಾಡಿ ನಿಮ್ಮ ದೇಹದ ಉಷ್ಣಾಂಶ ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ನೋಡಿಕೊಳ್ಳಿ ಹಾಗಾದ್ರೆ ಚಳಿಗಾಲದಲ್ಲಿ ಬೆಲೆಯನ್ನು ಏಕೆ ತಿನ್ನಬೇಕು ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ

ಕೆಲವು ಶೀತ ಸಂಬಂಧಿತ ಸೋಂಕುಗಳು ನಮ್ಮ ದೇಹದಲ್ಲಿ ಅಭಿವೃದ್ಧಿಯಾಗುವುದು ನಮ್ಮ ದೇಹದ ತಾಪಮಾನ ಕುಸಿದಾಗ ಆದರೆ ಈ ಒಂದು ಸಾಧ್ಯತೆಯಿಂದ ಪಾರಾಗಬೇಕು ಎಂದರೆನಮ್ಮ ದೇಹದ ತಾಪಮಾನ ಹೊರಗಿನ ಚಳಿ ಸಂದರ್ಭದಕ್ಕೆ ಯಾವುದೇ ಕಾರಣಕ್ಕೂ ಬದಲಾಗಬಾರದು ಹೀಗಾದಾಗ ಮಾತ್ರ ಒಳಗಿನಿಂದಲೇ ನಮ್ಮ ದೇಹದ ತಾಪಮಾನ ಬಿಸಿಯಾಗಿ ಉಳಿಯುತ್ತದೆ ಇದಕ್ಕೆ ಬೆಲ್ಲವನ್ನು ಚಳಿಗಾಲದಲ್ಲಿ

ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು ಮುಖ್ಯವಾಗಿ ಹೇಳಬೇಕು ಎಂದರೆ ಜಿಂಕ್ ಮತ್ತು ಸೆಲೆನಿಯಂ ಅಂಶಗಳ ಪ್ರಮಾಣ ಬೆಲ್ಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸೋಂಕುಗಳ ವಿರುದ್ಧ ನಿಮ್ಮನ್ನು ರಕ್ಷಣೆ ಮಾಡಬಲ್ಲದು ಇದರ ಜೊತೆಗೆ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ಇದು ಹೆಚ್ಚು ಮಾಡುತ್ತದೆ ಹೀಗಾಗಿ ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡಬೇಕು ಎಂದುಕೊಂಡರೆ ಅದರಲ್ಲಿ ಬೆಲ್ಲವನ್ನು ನೀವು ಸೇರಿಸಿಕೊಳ್ಳಬೇಕು

ಇನ್ನು ಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ಶ್ವಾಸಕೋಶದ ಆರೋಗ್ಯ ಚೆನ್ನಾಗಿರುತ್ತದೆ ಶ್ವಾಸಕೋಶದಲ್ಲಿ ಯಾವುದಾದರೂ ಕಿರಿಕಿರಿ ಕಂಡು ಬಂದರೆ ಅಥವಾ ಗಂಟಲಿನ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಹೋಗಲಾಡಿಸಲು ಬೆಲ್ಲ ನಿಮಗೆ ಸಹಾಯ ಮಾಡಬಲ್ಲದು ನಿಮ್ಮ ಇಡೀ ದೇಹದ ತಾಪಮಾನವನ್ನು ಬೆಚ್ಚುಗೆ ಇರಿಸುವುದರ ಮೂಲಕ ನಿಮ್ಮ ಉಸಿರಾಟದ ತೊಂದರೆಯನ್ನು ಪರಿಹಾರ ಮಾಡುತ್ತದೆ ಇನ್ನು ಚಳಿಗಾಲದಲ್ಲಿ ಕೊಬ್ಬಿನಂಶ ಇರುವಂತಹ ಆಹಾರ ಪದಾರ್ಥಗಳನ್ನು ಒಂದು ವೇಳೆ ಸೇವನೆ ಮಾಡಿದರೆ

ನಿಮ್ಮ ದೇಹದಲ್ಲಿ ಜೀರ್ಣ ಶಕ್ತಿ ಕುಂಠಿತವಾಗುತ್ತದೆ ಹೀಗಾಗಿ ಈ ಸಂದರ್ಭದಲ್ಲಿ ಬೆಲ್ಲವನ್ನು ಸೇವನೆ ಮಾಡುವುದರಿಂದ ನಿಮ್ಮ ಅಜೀರ್ಣತೆಯ ಸಮಸ್ಯೆ ಮತ್ತು ಗ್ಯಾಸ್ಟಿಕ್ ದೂರವಾಗುವುದು ಮಾತ್ರವಲ್ಲದೆ ನಿಮ್ಮ ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡಲು ಅಗತ್ಯವಾಗಿ ಬೇಕಾಗಿರುವ ಆಮ್ಲಗಳು ಹೊಟ್ಟೆಯಲ್ಲಿ ಉತ್ಪತ್ತಿಯಾಗುತ್ತದೆ ಇನ್ನು ಯಾವಾಗ ನೀವು ಬೆಲ್ಲವನ್ನು ಸೇವನೆ ಮಾಡಲು ಮುಂದಾಗುತ್ತೀರಿ ಆ ಸಂದರ್ಭದಲ್ಲಿ ನಿಮ್ಮ ದೇಹದ ಪ್ರಕ್ರಿಯೆ ನೇರವಾಗಿ ಚಳಿಗಾಲದ ವಿರುದ್ಧ

ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ ಎಂದರೆ ಚಳಿಗಾಲದ ಸಂದರ್ಭದಲ್ಲಿ ರಕ್ತನಾಳಗಳು ಸ್ವಲ್ಪ ತಮ್ಮ ಗಾತ್ರವನ್ನು ಕಡಿಮೆ ಮಾಡಿಕೊಳ್ಳುತ್ತವೆ ಆದರೆ ಬೆಲ್ಲವನ್ನು ಸೇವನೆ ಮಾಡುವುದರಿಂದ ರಕ್ತನಾಳಗಳು ಹಿಗ್ಗುತ್ತವೆ ಹೀಗಾಗಿ ರಕ್ತ ಸಂಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಹೃದಯದ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಹೃದಯದ ಮೇಲೆ ಒತ್ತಡವಿಲ್ಲದಂತೆ ನಿಮ್ಮ ಪ್ರತಿಯೊಂದು ಅಂಗಾಂಗಗಳ ಕಾರ್ಯ ಚಟುವಟಿಕೆಗಳು ನಡೆಯುತ್ತವೆ ಇನ್ನು ಬೆಲ್ಲದಲ್ಲಿ ನೀವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಅದು ಆಂಟಿ ಆಕ್ಸಿಡೆಂಟ್ ಅಂಶಗಳು ಇವುಗಳ ಕಾರಣದಿಂದ

ನಿಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಹಾವಳಿ ಇರುವುದಿಲ್ಲ ನಿಮ್ಮ ಚರ್ಮದ ಆರೋಗ್ಯ ತಲೆಕೂದಲಿನ ಸೊಂಪಾದ ಬೆಳವಣಿಗೆ ಇತ್ಯಾದಿಗಳ ಜೊತೆಗೆ ನೋವು ಮತ್ತು ಉರಿ ಯೂತ ಕಡಿಮೆಯಾಗುತ್ತದೆ ಹೀಗಾಗಿ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಚಳಿಗಾಲದಲ್ಲಿ ಕಂಡುಬರುವುದಿಲ್ಲ ಇನ್ನು ನಮ್ಮ ದೇಹದಲ್ಲಿ ನಾವು ಆಹಾರ ಸೇವನೆ ಮಾಡಿದ ನಂತರ ಅದು ವಿಷಕಾರಿ ತ್ಯಾಜ್ಯವಾಗಿ ಬದಲಾಗಿ ನಮ್ಮ ದೇಹಕ್ಕೆ ನಾನಾ ರೀತಿಯಲ್ಲಿ ಹಿಂಸೆಯನ್ನು ನೀಡುತ್ತದೆ

ಇದರಿಂದ ಬಹಳಷ್ಟು ಕಾಯಿಲೆಗಳು ಸಹ ನಮಗೆ ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ಮೊದಲು ನಮ್ಮ ದೇಹವನ್ನು ನಾವು ಸ್ವಚ್ಛ ಮಾಡಿಕೊಳ್ಳುವ ಕಡೆಗೆ ಪ್ರಯತ್ನ ಮಾಡಬೇಕು ಬೆಲ್ಲವನ್ನು ಸೇವನೆ ಮಾಡುವುದರಿಂದ ಕೇವಲ ದೇಹದಲ್ಲಿ ಮಾತ್ರವಲ್ಲದೆ ನಮ್ಮ ಲಿವರ್ ಬಾಗದಲ್ಲೂ ಕೂಡ ಸ್ವಚ್ಛತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಹೇಳಬಹುದು ಇನ್ನು ಮನುಷ್ಯನಿಗೆ ಯಾವ ಸಂದರ್ಭದಲ್ಲಿ ಆರೋಗ್ಯ ಕೈಕೊಡುತ್ತದೆ ಎಂದು ಹೇಳಲು ಬರುವುದಿಲ್ಲ ಆದರೆ ಅದಕ್ಕೆ ಮುಖ್ಯ ಕಾರಣ ಮಾತ್ರ ಎಲ್ಲೋ ಒಂದು ಕಡೆ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿಗಳು ಆಗಿರಬಹುದು ಮನೆ ಸದಸ್ಯರಿಗೆ ಕೇವಲ ಒಂದೇ ಬಾರಿ ಹುಷಾರು ತಪ್ಪಬೇಕು ಎಂದೆನಿಲ್ಲ ಒಬ್ಬರು ಹುಷಾರು ತಪ್ಪಿದರೆ ಮತ್ತೊಬ್ಬರು ಅವರನ್ನು ನೋಡಿಕೊಳ್ಳುವ ಕಡೆಗೆ

ಗಮನಹರಿಸಬೇಕಾಗುತ್ತದೆ ಹೀಗಿರುವ ಸಂದರ್ಭದಲ್ಲಿ ಹುಷಾರು ತಪ್ಪಿದವರ ದೇಹದ ತಾಪಮಾನವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಮಾಡಲು ಮತ್ತು ಶೀತ ವಾತಾವರಣದಿಂದ ದೂರ ಮಾಡಲು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಸಣ್ಣ ನಿಂಬೆ ಹಣ್ಣಿನ ಗಾತ್ರದ ಬೆಲ್ಲವನ್ನು ಚೂರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಬೇಕು ಇದರಿಂದ ಅತ್ಯುತ್ತಮವಾದ ಆರೋಗ್ಯ ಪ್ರಯೋಜನಗಳು ಬಹಳ ಶೀಘ್ರವಾಗಿ ಲಭಿಸುತ್ತದೆ ಇನ್ನು ಊಟವಾದ ಬಳಿಕ ಬಂದು ತುಂಡು ಬೆಲ್ಲ ತಿಂದರೆ ಅದರಿಂದ

ಜೀರ್ಣ ಕ್ರಿಯೆ ತುಂಬಾ ಸಹಕಾರಿ ಆಗಲಿದೆ ಸಕ್ಕರೆಯುಕ್ತ ಪಾನಿಯಗಳನ್ನು ಸೇವನೆ ಮಾಡುವ ಬದಲು ಒಂದು ತುಂಡು ಬೆಲ್ಲ ತಿಂದರೆ ಅದು ಆರೋಗ್ಯಕಾರಿಯಾಗಿ ಜೀರ್ಣಕ್ರಿಯೆಗೆ ನೆರವಾಗುತ್ತದೆ ಹಿಂದಿನಿಂದಲೂ ಬೆಲ್ಲವನ್ನು ಜೀರ್ಣಕ್ರಿಯೆಗೆ ಸರಾಗವಾಗಲು ಬಳಸಲಾಗುತ್ತಿದೆ ಊಟ ಆದ ನಂತರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಂದರೆ ಒಂದು ಗೋಲಿ ಗಾತ್ರದಲ್ಲಿ ಬೆಲ್ಲವನ್ನು ಬಾಯಿಯಲ್ಲಿ ಹಾಕಿಕೊಳ್ಳಬಹುದು ಇಲ್ಲವೆಂದರೆ ಸಕ್ಕರೆ ಬದಲಿಗೆ ನೀವು ಹಾಲಿನಲ್ಲಿ ಕೂಡ ಬೆಲ್ಲವನ್ನು ಹಾಕಿಕೊಂಡು ಕುಡಿಯಬಹುದು.

Leave a Reply

Your email address will not be published. Required fields are marked *