ಮೊಡವೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಸಲಹೆಗಳು

ಬೆಳಗ್ಗೆ ನಿಮ್ಮ ಹಣೆಯ ಮೇಲೆ ಕಾಣಿಸಿದ್ದು ಸಣ್ಣ ಗುಳ್ಳೆ. ಹೋ ತುಂಬಾ ಟೆನ್ಷನ್ ಆಯ್ತಾ. ಅದರ ಕಾರಣದಿಂದಲೇ ಇವತ್ತು ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಆಗದೆ ಎಲ್ಲ ಮುಖ್ಯ ಸಂಗತಿಗಳನ್ನು ಮಿಸ್ ಮಾಡಿಕೊಂಡರ. ಹೌದು ನಾವೆಲ್ಲರೂ ಕಂಡಿತವಾಗಿಯೂ ಒಪ್ಪಿಕೊಳ್ಳಬೇಕು. ಮೊಡವೆಗಳು ಶೇಕಡ 85ಕ್ಕಿಂತ ಹೆಚ್ಚು ಜನರಿಗೆ ಜೀವನದ ಕಿರಿಕಿರಿ ಸಂಗತಿಯಾಗಿದೆ. ಆದರೆ ನಮ್ಮ ಸಮಸ್ಯೆಯ ಮೂಲ ಕಾರಣವನ್ನು ನಾವು ಒಮ್ಮೆ ತಿಳಿದುಕೊಂಡರೆ ಅವುಗಳನ್ನು ನಾವು ಸರಿಪಡಿಸುವ ಮಾರ್ಗಗಳನ್ನು ನಾವು ಖಂಡಿತವಾಗಿಯೂ ಕಂಡುಹಿಡಿಯಬಹುದು

ಇದು ಮೊಡವೆಗಳ ಅಂತೆಯೇ ಸಮಸ್ಯಾತ್ಮಕ ವಾಗಿದೆ. ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಪ್ರಾರಂಭವಾದರೂ ಮೊಡವೆಗಳಿಗೆ ವಯಸ್ಸಿನ ನಿರ್ಬಂಧವಿಲ್ಲ. ಎಂದು ನಿಮಗೆ ಗೊತ್ತಾ. ಇವು ವಯಸ್ಕರನ್ನು ಬಿಡುವುದಿಲ್ಲ. ಐವತ್ತರಲ್ಲಿ ಮೊಡವೆಗಳು ಕಾಣಿಸುವುದುಂಟು. ಹದಿಹರೆಯದವರಲ್ಲಿ ಮತ್ತು ವಯಸ್ಕರಲ್ಲಿ ಮೊಡವೆಗಳು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಸರಿಯಾದ ಕಾಳಜಿ ವಹಿಸಿದರೆ ಈ ಸ್ಥಿತಿಯ ತೀವ್ರ ಫಲಿತಾಂಶಗಳನ್ನ ತಡೆಯುವುದಕ್ಕೂ ಸಾಧ್ಯವಿದೆ.

ಈ ಮುಜುಗರ ತರುವಂತಹ ಮೊಡವೆಗಳು ಜೀವನದ ಒಂದು ಭಾಗ ಅದು ಸರ್ವೇಸಾಮಾನ್ಯ ಎಲ್ಲರಿಗೂ ಬಂದೇ ಬರುತ್ತದೆ. ಅಂತ ನೀವು ಭಾವಿಸಬಹುದು. ನಿಜ ಏನೆಂದರೆ ಮೊಡವೆಗಳನ್ನ ಯಾವಾಗ ಬೇಕಾದರೂ ನಿವಾರಿಸಿ ಗುಣಪಡಿಸಬಹುದು. ಅನೇಕರು ಚಾಕ್ಲೇಟ್ ಪಿಜ್ಜಾ ಅಥವಾ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದು ಮೊಡವೆಗಳು ಬ್ರೇಕ್ ಔಟನ ಪ್ರಚೋದಿಸುತ್ತದೆ ಅಂತ ಅನ್ನುತ್ತಾರೆ. ನಿಜವಾಗಿಯೂ ಈಗ್ಲೇ ಬನ್ನು ಬೆಂಬಲಿಸುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.

ಒತ್ತಡವು ಮೊಡವೆಗಳಿಗೆ ಕಾರಣವಲ್ಲ. ಆದರೂ ಒತ್ತಡದಿಂದ ನಿಮ್ಮ ದೇಹ ಆಂಡ್ರೋಜನ್ ಎಂದು ಕರೆಯಲ್ಪಡುವ ಹೆಚ್ಚು ಹಾರ್ಮೋನ್ ಗಳನ್ನು ಉತ್ಪಾದನೆ ಮಾಡುವುದರಿಂದ ಮತ್ತು ಹಾರ್ಮೋನಿನ ಮಟ್ಟವನ್ನು ಬದಲಾಯಿಸುವುದರಿಂದ ಮೊಡವೆಗಳಿಗೆ ಕಾರಣವಾಗಬಹುದು. ನಿರಂತರವಾಗಿ ಒತ್ತಡವನ್ನು ಎದುರಿಸುವುದು ನಿಮ್ಮ ಚರ್ಮದ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರುತ್ತೆ. ಮತ್ತು ಅದಾಗಲೇ ಇರುವಂತಹ ಬ್ರೇ ಕ್ ಔಟ್ ಅವುಗಳನ್ನು ಇನ್ನೂ ಹೆಚ್ಚು ಮಾಡುತ್ತದೆ

Leave A Reply

Your email address will not be published.