ರೈತ ನಮಗೆ ಮಾರ್ಗದರ್ಶಿ ರೈತನಿಂದ ಕಲಿಯಬೇಕಾದ ವಿಚಾರವಿದು ಗುರಿ ಗಮನ ಚಾಣಕ್ಯ ನೀತಿ

Recent Posts

ರೈತ ನಮಗೆ ಮಾರ್ಗದರ್ಶಿ ರೈತನಿಂದ ಕಲಿಯಬೇಕಾದ ವಿಚಾರವಿದು ಗುರಿ ಗಮನ ಚಾಣಕ್ಯ ನೀತಿ

ನಮಸ್ಕಾರ ಸ್ನೇಹಿತರೇ ಸುಮಾರು ಚಾಣಕ್ಯ ನೀತಿಗಳು ಮತ್ತು ಸೂತ್ರಗಳು ಅರ್ಥಪೂರ್ಣವಾಗಿರುತ್ತವೆ ಆದರೆ ನಾವು ನೋಡ್ತೀವಿ ಮರೆತು ಹೋಗುತ್ತಿವೆ ಅದನ್ನು ಗಮನದಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೆ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ತಿಳಿದುಕೊಂಡು. ಅದರ ಕುರಿತು ಚಾಣಕ್ಯರೇ ಹೇಳಿದ ಅದ್ಭುತ ಸಾಲುಗಳನ್ನು ತಿಳಿದುಕೊಳ್ಳಿರಿ


ನೀವು ರೈತನನ್ನು ಗಮನಿಸಿದ್ದೀರಾ ರೈತ ಬೆಳೆಯನ್ನು ಹಾಕಿದರೆ ಒಂದೇ ರೀತಿ ಹಾಕುತ್ತಾನೆ ಏಕೆ ವ್ಯವಸಾಯ ಮಾಡಬೇಕಾದರೆ ಒಂದೇ ರೀತಿಯ ಬೀಜವನ್ನು ಏಕೆ ರೈತ ಭೂಮಿಯಲ್ಲಿ ಹಾಕುತ್ತಾನೆ ಬೇರೆ ಬೇರೆ ಬೀಜವನ್ನು ಬಿತ್ತನೆ ಮಾಡುವುದಿಲ್ಲ ಏಕೆ ಅದರಲ್ಲಿ ಸುಮಾರು ತಿಳಿದುಕೊಳ್ಳುವಂತಹ ವಿಚಾರಗಳಿವೆ .ರೈತನ ಹೊಲದಲ್ಲಿ ಒಂದೇ ಕಡೆ ಅವನ ಪರಿಶ್ರಮ ಒಂದೇ ಕಡೆ ಬೆಳೆ ಒಂದೇ ತರಹದ ಬೀಜವನ್ನು ಹಾಕಿದರೆ ಅವನ ಗಮನವೆಲ್ಲವೂ ಒಂದೇ ಕಡೆ ಇರುತ್ತದೆ ಇದರಿಂದ ಹೆಚ್ಚು ಲಾಭವನ್ನು ಮಾಡಬಹುದು.ಅದಕ್ಕೆ ರೈತ ಭೂಮಿಯಲ್ಲಿ ಒಂದೇ ರೀತಿಯ ಬೆಳೆಯನ್ನು ಬೆಳೆಯಲು ಇಷ್ಟಪಡುತ್ತಾನೆ.ನಮ್ಮ ಜೀವನದಲ್ಲಿ ಗುರಿ ಹಠ ಒಂದೇ ಆಗಿರಬೇಕು ನೂರಾರು ಕೆಲಸಕ್ಕೆ ಕೈಹಾಕಿ ಯಾವ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಮಾಡದಂತೆ ಅರ್ಥ ಮಾಡಿ ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳುವಂತಹ ಜಾಲವನ್ನು ನಾವೇ ಸೃಷ್ಟಿ ಮಾಡುತ್ತೇವೆ


ನೂರಾರು ಕಡೆ ಗಮನ ಕೊಡುವ ಬದಲು ಒಂದೇ ಕಡೆ ಕೆಲಸ ಮಾಡಿ ಒಂದೇ ಕಡೆ ಗಮನಕೊಟ್ಟು ಕಷ್ಟಪಟ್ಟು ಮೇಲೆ ಬರುವ ಪ್ರಯತ್ನವನ್ನು ನಾವು ಮಾಡಬೇಕು. ಇವತ್ತು ಒಂದು ಕೆಲಸ ಮಾಡುವುದು ನಾಳೆ ಹೊಂದಿ ಕೆಲಸ ಮಾಡುವುದು.ಇದು ಯಾವುದೋ ಜೀವನಕ್ಕೆ ಸರಿಹೊಂದುವುದಿಲ್ಲ.ಯಾವತ್ತು ನಮ್ಮ ಕೆಲಸ ಒಂದೇ ಆಗಿರಬೇಕು ನಮ್ಮ ಗುರಿ ಒಂದೇ ಆಗಿರಬೇಕು ನಾವು ತೆಗೆದುಕೊಳ್ಳುವ ನಿರ್ಧಾರವು ಅದೇ ರೀತಿ ಇರಬೇಕು.ಇದೇ ರೀತಿ ಚಾಣಕ್ಯನ ನೀತಿಗಳನ್ನೇ ಜೀವನದಲ್ಲಿ ಅರ್ಥೈಸಿಕೊಂಡು ಅಳವಡಿಸಿಕೊಂಡು ನಮ್ಮ ಜೀವನದ ಬದಲಾವಣೆ ನಾವೇ ಬೆಳೆಯಬೇಕು ಆಗ ಮಾತ್ರ ನಾವು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ

Leave a Reply

Your email address will not be published. Required fields are marked *