ರಾಯರ ಮಂತ್ರದಿಂದ ಪವಾಡ ಖಂಡಿತವಾಗಿ ರಾಘವೇಂದ್ರ ಸ್ವಾಮಿ ಭಕ್ತರು ಓದಲೇ ಬೇಕು

Recent Posts

ರಾಯರ ಮಂತ್ರದಿಂದ ಪವಾಡ ಖಂಡಿತವಾಗಿ ರಾಘವೇಂದ್ರ ಸ್ವಾಮಿ ಭಕ್ತರು ಓದಲೇ ಬೇಕು

ನಮಸ್ಕಾರ ಸ್ನೇಹಿತರೆ, ಮಂತ್ರಾಲಯಧೀಶ, ಕಲಿಯುಗ ಕಲ್ಪವೃಕ್ಷ, ಗುರುಸಾರ್ವಭೌಮರಾದ ರಾಯ ರಾಘವೇಂದ್ರ ಸ್ವಾಮಿ ನಂಬಿದವರನ್ನು ಎಂದು ಕೈ ಬಿಡುವುದಿಲ್ಲ ಎಂಬ ಮಾತಿದೆ, ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತು ರಾಯರಿದ್ದಾರೆ ಕಾಪಾಡುತ್ತಾರೆ ಎಂದು, ಯಾಕೆಂದರೆ ರಾಯರನ್ನು ನಂಬಿ ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗೆ ಅಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ, ಅಂತಹ ಭಕ್ತರಿಗಾಗಿ ನಾವು ಈ ದಿನ ಒಂದು ಮಂತ್ರವನ್ನು ಹೇಳಲಿದ್ದೇವೆ, ಈ ಮಂತ್ರವನ್ನು ನೀವು ಪ್ರತಿದಿನ ಹೇಳಿದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಶಾಂತಿ ನಿಮ್ಮ ಬಾಳಿನಲ್ಲಿ ನೆಲೆಸುತ್ತದೆ, ನಾವು ಈ ದಿನ ರಾಯರ ಗಾಯತ್ರಿ ಮಂತ್ರವನ್ನು ನಿಮಗೆ ಹೇಳಿ ಕೊಡಲಿದ್ದೇವೆ, ಈ ಮಂತ್ರವನ್ನು ಹೇಳಲು ಕೆಲವು ವಿಧಾನಗಳನ್ನು ನೀವು ಅನುಸರಿಸಬೇಕಾಗುತ್ತದೆ

ಗುರುವಾರದ ದಿನ ಈ ಮಂತ್ರವನ್ನು ಹೇಳಲು ಶುರುಮಾಡಿದರೆ ಉತ್ತಮ ಗುರುವಾರದ ದಿನ ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ಈ ಒಂದು ಮಂತ್ರವನ್ನು ಹೇಳಬೇಕು, ಈ ಮಂತ್ರವನ್ನು ಹೇಳುವಾಗ ನಿಮ್ಮ ಬಳಿ ರಾಯರ ಮೂರ್ತಿ ಅಥವಾ ರಾಯರ ಫೋಟೋ ಇರಲೇಬೇಕು ಅದಕ್ಕೆ ಪೂಜೆ ಮಾಡಲೇಬೇಕು ಅಂತೇನಿಲ್ಲ ಬದಲಾಗಿ ನೀವು ಭಕ್ತಿಯಿಂದ ಈ ಒಂದು ಮಂತ್ರವನ್ನು ಹೇಳಿದರೆ ಸಾಕು, ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ, ಮೂರು ಬಾರಿ, 9 ಬಾರಿ, 11 ಬಾರಿ 108 ಬಾರಿ ಅಥವಾ ಸಾವಿರದ ಎಂಟು ಬಾರಿ ಹೇಳಬೇಕು, ನಿಮಗೆ ಎಷ್ಟು ಬಾರಿ ಹೇಳಲು ಸಾಧ್ಯವೋ ಅಷ್ಟು ಬಾರಿ ನೀವು ಈ ಮಂತ್ರವನ್ನ ಹೇಳಬಹುದು ಆದರೆ ಈ ಮಂತ್ರವನ್ನು ಹೇಳುವಾಗ ಕೆಲವು ನಿಯಮಗಳಿವೆ.

ಹೆಣ್ಣುಮಕ್ಕಳು ಮುಟ್ಟಾದಾಗ ಈ ಮಂತ್ರವನ್ನು ಹೇಳಬಾರದು, ಸೂತಕದ ಸಮಯದಲ್ಲಿ ಈ ಒಂದು ಮಂತ್ರವನ್ನು ಹೇಳದಿರುವುದು ಉತ್ತಮ, ಹಾಗಾಗಿ ಈ ಒಂದು ಮಂತ್ರವನ್ನು ಹೇಳುವಾಗ ಶುದ್ಧವಾಗಿರಬೇಕು, ರಾಯರ ಗಾಯತ್ರಿ ಮಂತ್ರ ಹೀಗಿದೆ:
“ಓಂ ವೆಂಕಟನಾಥಾಯ ವಿದ್ಮಹೇ ಸಚಿದಾನಂಧಾಯ ಧೀಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್ ಓಂ ವೆಂಕಟನಾಥಯ ವಿದ್ಮಹೇ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೊ ರಾಘವೇಂದ್ರಾಯ ಪ್ರಚೋದಯಾತ್
ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜರಾಯ ಧೀಮಹಿ ತನ್ನೋ ರಾಘವೇಂದ್ರಾಯ ಪ್ರಚೋದಯಾತ್ “
ಈ ಮಂತ್ರವನ್ನು ಪ್ರತಿದಿನ ಹೇಳಿದರೆ ಉತ್ತಮ ರಾಯರ ದಿನವಾದ ಗುರುವಾರದೊಂದು ಈ ಮಂತ್ರವನ್ನು ಹೇಳಲು ಪ್ರಾರಂಭಿಸಿ ಈ ಮಂತ್ರವನ್ನು ಹೇಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ, ರಾಯರ ಗಾಯತ್ರಿ ಮಂತ್ರದ ಪಟನೆಯಿಂದ ಸಕಲ ಕಾರ್ಯಗಳು ಸಿದ್ಧಿಯಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *