ಶೃಂಗೇರಿ ಶಂಕರ ಮಠ ಶಂಕರಪುರ ಬೆಂಗಳೂರು

ಶೃಂಗೇರಿ ಶಂಕರ ಮಠ ಶಂಕರಪುರ ಬೆಂಗಳೂರು .

ಬೆಂಗಳೂರಿನ ಬಸವನಗುಡಿ ಸಮೀಪವಿರುವ ಶಂಕರಪುರ ಎಂಬಲ್ಲಿರುವ ಶೃಂಗೇರಿಯ ಶಂಕರಮಠ ಶಂಕರಪುರ ಬೆಂಗಳೂರಿನ ಒಂದು ಹಳೆಯ ಪ್ರದೇಶವಾಗಿದೆ ಈ ನಗರಕ್ಕೆ ಶಂಕರಪುರ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಶಂಕರ ಮಠ ಸಾವಿರದ ಒಂಬೈನೂರ ಏಳರಲ್ಲಿ ಶೃಂಗೇರಿ ಶಾರದಾ ಮಠದ 33ನೇ ಪೀಠಾಧಿಪತಿಗಳಾದ ಶ್ರೀ ನರಸಿಂಹಭಾರತಿ ಸ್ವಾಮೀಜಿಯವರು ನಾಲ್ವಡಿ ಕೃಷ್ಣರಾಜರ ಮಂಜೂರು ಮಾಡಿದ ಜಾಗದಲ್ಲಿ ಶಂಕರ ಮಠವನ್ನು ಸ್ಥಾಪಿಸಿದರು ಚಾಮರಾಜಪೇಟೆ ಮತ್ತು ಬಸವನಗುಡಿಯ ಮಧ್ಯದಲ್ಲಿರುವ ಈ ಪ್ರದೇಶದಲ್ಲಿ ಶಂಕರ ಮಠ ಸ್ಥಾಪನೆ ಆಯಿತು ಆದ್ದರಿಂದ ಈ ಪ್ರದೇಶಕ್ಕೆ ಶಂಕರಪುರ ಎಂದು ಹೆಸರು ಬಂದಿತು ಮೊದಲು ಈ ಮಠದಲ್ಲಿ ಶಂಕರಾಚಾರ್ಯರ ಅಮೃತ ಮೂರ್ತಿಯನ್ನು ಸ್ಥಾಪಿಸಲಾಯಿತು

1939 ರಲ್ಲಿ ಶಾರದಾ ದೇವಿ ವಿಗ್ರಹವನ್ನು ಎಲ್ಲಿ ಸ್ಥಾಪಿಸಲಾಯಿತು ಇದರಿಂದ ಈ ಮಠದ ಜೀರ್ಣೋದ್ಧಾರ ಇನ್ನಷ್ಟು ಹೆಚ್ಚಾಯಿತು ನಂತರ 2007ರಲ್ಲಿ ಶಂಕರಪುರದ ಶಂಕರಮಠವೂ ಶತಮಾನೋತ್ಸವವನ್ನು ಆಚರಿಸಿದೆ ಈ ಶತಮಾನೋತ್ಸವವನ್ನು ಶೃಂಗೇರಿ ಪೀಠಾಧಿಪತಿಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರು ನಲವತ್ತೆಂಟು ದಿನಗಳಕಾಲ ಬಹು ವಿಜ್ರಂಭಣೆಯಿಂದ ಆಚರಿಸಲಾಗಿದೆ ಶೃಂಗೇರಿ ಶಾರದಾ ಮಠದ ಶಾಖಾ ಮಠವಾದ ಈ ಮಠವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ದೇವಾಲಯದ ಪ್ರವೇಶದ ನಂತರ ದೊಡ್ಡ ಆಲಯವು ಕಾಣಿಸುತ್ತದೆ ಅಲ್ಲಿ ಎಡಗಡೆ ಆದಿಶಂಕರರ ದೇವಾಲಯವಿದೆ ಈ ದೇವಾಲಯದಲ್ಲಿ ಶ್ರೀ ಆದಿ ಶಂಕರರ ಅಮೃತ ಶಿಲೆಯ ವಿಗ್ರಹ ಇದೆ ಈ ದೇವಾಲಯದ ಎದುರು ಭಾಗದಲ್ಲಿ ಶಾರದಾದೇವಿಯ ದೇವಾಲಯವೂ ಇದೆ ದೇವಾಲಯದ ಆಲಯದ ಮುಂದೆ ಬೃಹತ್ತಾದ ಧ್ಯಾನ ಮಂದಿರವಿದೆ ಭಕ್ತಾದಿಗಳು ಇಲ್ಲಿ ಅಕ್ಷರಭ್ಯಾಸ ಜ್ಞಾನ ಪ್ರಧಾನಕ್ಕೆ ಮೊರೆ ಇಡುತ್ತಾರೆ ಪರೀಕ್ಷೆಯ ಸಂದರ್ಭದಲ್ಲಿ ಈ ದೇವಾಲಯದಲ್ಲಿ ವಿದ್ಯಾರ್ಥಿಗಳ ದಂಡೇ ಹರಿದು ಬಂದಿರುತ್ತದೆ ಈ ದೇವಾಲಯದಲ್ಲಿ 12 ಪ್ರದಕ್ಷಿಣೆ ಹಾಕಿ ಅರ್ಚನೆ ಮಾಡಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ

ಮಂಗಳವಾರ ಮತ್ತು ಶುಕ್ರವಾರ ಈ ದೇವಾಲಯಕ್ಕೆ ಅಪಾರ ಪ್ರಮಾಣದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ ಈ ಮಂಗಳವಾರ ಶುಕ್ರವಾರ ದೇವಿಯ ಸಂತೃಪ್ತಿಗಾಗಿ ನಿಂಬೆಹಣ್ಣಿನ ದೀಪವನ್ನು ಬೆಳಗುವುದನ್ನು ಇಲ್ಲಿ ನೋಡಬಹುದು ಈ ಮಠವು ವೇದಪಾಠಶಾಲೆಯ ನ್ನು ಸಹ ನಡೆಸುತ್ತದೆ ಈ ಮಠದಲ್ಲಿ ವರ್ಷದಲ್ಲಿ ಹಲವಾರು ಸಾಂಸ್ಕೃತಿಕ ಸಂಗೀತ ಸಮಾರಂಭಗಳು ನಡೆಯುತ್ತದೆ ಈ ದೇವಾಲಯದಲ್ಲಿ ಪ್ರತಿ ನಿತ್ಯವೂ ತ್ರಿಕಾಲ ಪೂಜೆಗೆ ನಡೆಯುತ್ತದೆ ನವರಾತ್ರಿಯ ಸಂದರ್ಭದಲ್ಲಿ 18 ದಿನಗಳ ಕಾಲ ವಿವಿಧ ರೀತಿಯ ಹೋಮ-ಹವನಗಳು ಇಲ್ಲಿ ನಡೆಯುತ್ತದೆ ಮತ್ತು ಸಂಗೀತ ಕಾರ್ಯಕ್ರಮಗಳು ಈ ದೇವಾಲಯಕ್ಕೆ ಭೇಟಿ ನೀಡಿದಾಗ ಜೀವನದ ಜಂಜಾಟಗಳನ್ನು ಮರೆತು ನೆಮ್ಮದಿಯ ಮೂಡುತ್ತದೆ ಈ ಮಠವು ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ ಮೆಜೆಸ್ಟಿಕ್ ನಿಂದ ಚಾಮರಾಜಪೇಟೆಗೆ ಅನೇಕ ಬಸ್ಸುಗಳು ಇದೆ ಚಾಮರಾಜ ಪೇಟೆ ಬಸ್ ನಿಲ್ದಾಣದಿಂದ ಈ ಮಟ್ಟಕ್ಕೆ ನಡೆದುಕೊಂಡೇ ತೆರಳಬಹುದಾಗಿದೆ ಮೆಟ್ರೋ ಮೂಲಕ ತೆರಳುವುದಾದರೆ ನ್ಯಾಷನಲ್ ಕಾಲೇಜ್ ಸ್ಟಾಪ್ ಬಳಿ ಇಳಿದು ಈ ಶಂಕರಪುರದ ಶಂಕರ ಮಠಕ್ಕೆ ನಡೆದುಕೊಂಡು ತೆರಳಬಹುದು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (9916852606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.