ಕೌಟುಂಬಿಕ ವ್ಯವಹಾರಿಕ ಅಡೆತಡೆಗಳನ್ನು ನಿಭಾಯಿಸುವುದು ಹೇಗೆ ಚಾಣಕ್ಯನ ಸೂತ್ರ
ನಷ್ಟ ಅನುಭವಿಸುವ ವಿಚಾರಗಳಿಂದ ದೂರವಿರಿ ಆಚಾರ್ಯ ಚಾಣಕ್ಯರ ನೀತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಸಮಸ್ಯೆಗಳೆಲ್ಲವನ್ನು ಬಗೆಹರಿಸಬಹುದು ನಮಗೆ ತುಂಬಾ ಹತ್ತಿರವಾಗಿರುವವರ ಜೊತೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತೇವೆ ಎಲ್ಲರನ್ನು ನಂಬುವ ಮನಸ್ಥಿತಿ ನಮ್ಮದಿರುತ್ತದೆ ನಾವು ತಪ್ಪು ಮಾಡುವುದು ಅಲ್ಲಿಯೇ ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು ಯಾವುದನ್ನೂ ಹಂಚಿಕೊಳ್ಳಬಾರದು ಎಂದು ನಮಗೆ ತಿಳಿದಿರಬೇಕು
ಕೆಲವು ವಿಷಯಗಳನ್ನು ನಮ್ಮಲ್ಲಿ ಮುಚ್ಚಿಟ್ಟರೆ ಮುಂದೆ ಬರುವ ಸಂಕಷ್ಟಗಳು ದೂರವಾಗುತ್ತದೆ ಎಲ್ಲರನ್ನು ನಂಬಬೇಡಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ ಜೀವನದ ಮುಖ್ಯ ವಿಚಾರಗಳೆಂದರೆ ಸಂತೋಷ ಮತ್ತು ದುಃಖ ಈ ಎರಡು ವಿಷಯಗಳನ್ನು ಬ್ಯಾಲೆನ್ಸ್ ಮಾಡುವುದನ್ನು ಕಲಿತುಕೊಳ್ಳಲಿಲ್ಲ ಎಂದರೆ ಮುಂದೆ ನಮ್ಮ ಜೀವನ ಪಾತಳಕ್ಕೆ ತಳ್ಳಿದ ಹಾಗೆ ಎಂದು ಹೇಳುತ್ತಾರೆ ಆಚಾರ್ಯರು ಚಾಣಕ್ಯರು ನಿಮ್ಮ ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಅವರು ಬೇರೆಯವರೊಂದಿಗೆ ನಿಮ್ಮ ದುಃಖವನ್ನು ಪ್ರಸ್ತಾಪ ಮಾಡಿದಾಗ ನಿಮ್ಮ ಪ್ರತಿಷ್ಠೆ ಕುಗ್ಗುವ ಸಾಧ್ಯತೆ ಹೆಚ್ಚಾಗಿರುತ್ತದೆ ನಮ್ಮ ಕಷ್ಟಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡು ನಮ್ಮ ಪ್ರತಿಷ್ಠೆಯನ್ನು ಕಳೆದುಕೊಳ್ಳುವಂತಹ ಕೆಲಸಗಳನ್ನು ನಾವು ಮಾಡಬಾರದು ಇನ್ನು ನಿಮ್ಮ ವೈಯಕ್ತಿಕ ಮತ್ತು ಕುಟುಂಬದ ವಿಚಾರಗಳನ್ನು ಯಾರೆಂದಿಗೂ ಹೇಳಬಾರದು ಇಂತಹ ವಿಚಾರಗಳನ್ನು ಹಂಚಿಕೊಂಡರೆ ಇನ್ನೊಬ್ಬರ ಮುಂದೆ ಚಿಕ್ಕವರಾಗುತ್ತೀರಿ ಅಣ್ಣ,ತಮ್ಮಂದಿರು ಅಥವಾ ಗಂಡ,ಹೆಂಡತಿ ಮಕ್ಕಳು ಇಂತಹ ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರ ಮುಂದೆ ಹಂಚಿಕೊಳ್ಳಬಾರದು
ಹಣಕಾಸಿನ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಹಣಕಾಸಿನ ವಿಚಾರವನ್ನು ನೀವು ಹಂಚಿಕೊಂಡರೆ ನಿಮ್ಮ ಪ್ರತಿಷ್ಠೆಯನ್ನು ನೀವೇ ಕಳೆದುಕೊಳ್ಳುವಿರಿ ದಿನಕ್ಕೆ,ವಾರಕ್ಕೆ,ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತೇನೆ ಎಂಬುದು ನಿಮ್ಮೊಳಗೆ ಇರಬೇಕು ಕೆಲವು ವ್ಯಕ್ತಿಗಳು ನಿಮ್ಮೊಂದಿಗೆ ಚೆನ್ನಾಗಿರುವಂತೆ ನಟಿಸಿ ಇನ್ನೊಬ್ಬರ ಮುಂದೆ ಏನಾದರೂ ಮಾತನಾಡುವ ಸಾಧ್ಯತೆಗಳು ಇರುತ್ತದೆ
ಹಾಗಾಗಿ ಈ ಮೂರು ವಿಚಾರಗಳಲ್ಲಿ ಮೌನವಾಗಿದ್ದಷ್ಟು ನಿಮಗೆ ಬೆಲೆ ಜಾಸ್ತಿ ಮನಸ್ಸನ್ನು ಗಟ್ಟಿ ಮಾಡಿ ಕಷ್ಟಗಳನ್ನು ನಿಮ್ಮೊಳಗೆ ಅರಗಿಸಿಕೊಳ್ಳುವ ಹಾಗೆ ಇರಬೇಕು ಮೌನವಾಗಿರಿ ಕಷ್ಟ ಯಾರಿಗೆ ಬರುವುದಿಲ್ಲ ಹೇಳಿ ಆ ಕಷ್ಟವನ್ನು ಎದುರಿಸಿ ಆ ಕಷ್ಟದಿಂದ ಹೊರಬರಬೇಕು ಎಂದು ಚಾಣಕ್ಯರು ಹೇಳುತ್ತಾರೆ