ನಮಸ್ಕಾರ ಸ್ನೇಹಿತರೇ ಹೆಣ್ಣಿನ ಅಂದಕ್ಕೆ ಮೂಗುತಿಯೇ ಶೃಂಗಾರ ಹೆಣ್ಣಿನ ಅಂದವನ್ನು ಹೆಚ್ಚಿಸಲು ಅವಳು ಧರಿಸುವ ಕುಂಕುಮ, ಮೂಗುತಿ, ಓಲೆ ಸರಗಳೇ ಸಾಕು. ಇವು ಅವುಗಳ ಅಂದವನ್ನು ಹೆಚ್ಚಿಸುವ ಜೊತೆ ಗೆ ಅವರ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.ಹಿಂದಿನ ಕಾಲದಲ್ಲಿ ಮಹಿಳೆಯರು ಮೂಗಿನಿಂದ ಅವರು ಧರಿಸುತ್ತಿದ್ದ ಮೂಗುತಿಯೇ ಗಾತ್ರವೇ ದೊಡ್ಡದಾಗಿತ್ತು.
ಅಷ್ಟು ದೊಡ್ಡ ಮೂಗುತಿಯ ನ್ನು ಧರಿಸುತ್ತಿದ್ದರು. ಜೊತೆಗೆ ಹೆಣ್ಣು ಮಕ್ಕಳು ಜನಿಸಿದರೆ ಸಾಕು. ಅವರು ಸ್ವಲ್ಪ ದೊಡ್ಡವರಾದರೆ ಅಂದ ರೆ ಎರಡರಿಂದ ಮೂರು ವರ್ಷಗಳ ಆದ ತಕ್ಷಣ ಒಲೆಚ್ಚಿಸುವ ಜೊತೆಗೆ ಮೂಗುತಿನು ಕೂಡ ಧರಿಸುತ್ತಿದ್ದರು.ಆದರೆ ಕಾಲ ಬದಲಾದಂತೆ ಇಂದು ಮಹಿಳೆಯರಿಗೆ ಮೂಗುತಿಯನ್ನು ಹಾಕಿಸುವುದು ಅಂದರೆ ಅವರ ಮನೆಯಲ್ಲಿ ಹರಸಾಹಸ ಮಾಡ ಬೇಕಾಗುತ್ತದೆ.
ಅದರ ಲ್ಲೂ ಅವರ ಮನೆಯಲ್ಲಿ ಅಜ್ಜಿಯ ರು ಇದ್ದಾರೆ. ಅವರ ಬಲವಂತ ಕ್ಕಾಗಿ ಮೂಗುತಿಯನ್ನು ಚುಚ್ಚಿಸಿ ಕೊಳ್ಳುತ್ತಾರೆ. ಇಲ್ಲವಾದರೆ ಮದುವೆ ಸಂದರ್ಭದಲ್ಲಿ ಅಂದ ವಾಗಿ ಕಾಣಬೇಕೆಂಬ ಉದ್ದೇಶಕ್ಕೆ ಮಾತ್ರ ತಾತ್ಕಾಲಿಕವಾಗಿ ಮೂಗುತಿ ಹಾಕಿಕೊಂಡು ಮದುವೆ ಮುಗಿದ ತಕ್ಷಣ ತೆಗೆದು ಬಿಸಾಕುತ್ತಾರೆ.ಆದರೆ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತವೆ. ಮೂಗುತಿಯನ್ನು ಧರಿಸುವುದರಿಂದ ಹೆಣ್ಣು ಮಕ್ಕಳು ಅಂದವಾಗಿ ಲಕ್ಷಣವಾಗಿ ಕಾಣಿಸಿಕೊಳ್ಳುತ್ತಾರೆ.
ಮೂಗುತಿ ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಹೆಚ್ಚು ಒತ್ತಡವು ನಿರ್ಮಾಣವಾಗುತ್ತದೆ. ಅಲ್ಲಿ ಆಕ್ಯು ಪ್ರೆಷರ್ ಉಂಟಾಗಿ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ. ಯಾವುದೇ ರೀತಿಯ ಕೆಟ್ಟ ಶಕ್ತಿ ಗಳಿಂದ ಉಸಿರಾಟದ ಮಾರ್ಗದಲ್ಲಿ ಹಲ್ಲೆಯಾಗದಂತೆ ಮೂಗುತಿಯು ನಮ್ಮ ಮೂಗು ಮತ್ತು ಶ್ವಾಸ ಮಾರ್ಗವನ್ನು ರಕ್ಷಿಸುತ್ತದೆ.
ಹೋಗುತ್ತಿರುವ ಸಾತ್ವಿಕತೆ ಮತ್ತು ಚೈತನ್ಯ ದಿಂದ ಮೂಗಿನ ಸುತ್ತ ಲು ಚೈತನ್ಯದ ವಲಯ ವು ನಿರ್ಮಾಣ ವಾಗುತ್ತದೆ. ಮೂಗಿನ ಸುತ್ತ ಲೂ ಇರುವ ವಾಯುಮಂಡಲವು ಶುದ್ಧ ವಾಗಿರುತ್ತದೆ. ಇದರಿಂದ ಆ ಶ್ವಾಸ ಮಾರ್ಗ ದಿಂದ ಶುದ್ಧಗಾಳಿಯು ದೇಹವನ್ನು ಕೂಡ ಪ್ರವೇಶಿಸುತ್ತದೆ.
ಇದರ ಜೊತೆ ಗೆ ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಕೇವಲ ಮಹಿಳೆಯರು ಮಾತ್ರ ಯಾಕೆ ಧರಿಸ ಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಪುರಾಣಗಳ ಪ್ರಕಾರ ಶಾಸ್ತ್ರ ಗಳ ಪ್ರಕಾರ ಸ್ತ್ರೀಯರ ಮನಸ್ಸು ತುಂಬಾ ಬೇಗ ಹಾಗೂ ಹೆಚ್ಚಾಗಿ ಚಂಚಲತೆಗೆ ಒಳಗಾಗುತ್ತದೆ. ಆದ್ದರಿಂದ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರ ನಾಡಿ ಕಾರ್ಯ ನಿರತವಾಗಿ ಮನಸ್ಸು ಸ್ಥಿರವಾಗಿರುತ್ತದೆ ಸ್ರೀಯರು ಯಾವುದೇ ಕಾರ್ಯ ವನ್ನು ಮಾಡುವಾಗ ಯೋಗ್ಯ ನಿರ್ಣಯ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಮಹಿಳೆಯರು ಮಾತ್ರ ಮೂಗುತಿ ಧರಿಸಲು ಹೇಳುತ್ತಾರೆ.
ಮಹಿಳೆಯರು ಧರಿಸುವುದರಿಂದ ಋತುಚಕ್ರದ ಸಮಯದಲ್ಲಿ ಉಂಟಾಗುವ ನೋವು ಕೂಡ ಕಡಿಮೆಯಾಗುತ್ತದೆ. ಇದೇ ಕಾರಣ ಕ್ಕಾಗಿ ಹುಡುಗಿಯರು ಋತುಮತಿ ಯಾಗುತ್ತಿದ್ದಂತೆ ಅವರಿಗೆ ಮೂಗುತಿ ಚುಚ್ಚಿಸುತ್ತಾರೆ.
ಮಹಿಳೆಯರು ಮೂಗುತಿಯ ನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದರ ಕಾರಣ ನಿಮಗೆ ಗೊತ್ತಾ? ಸ್ನೇಹಿತರೆ ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗ ದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣ ದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ.ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ.
ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದ ವನ್ನು ಹೆಚ್ಚಿಸುವ ಜೊತೆ ಗೆ ಅವರ ಆರೋಗ್ಯವನ್ನು ಕೂಡ ಹತೋಟಿಯಲ್ಲಿಡುತ್ತದೆ. ಹೀಗಾಗಿ ಮೂಗುತಿ ಧರಿಸಲು ಮೂಗು ಮುರಿಯುವ ಎಲ್ಲ ಹೆಣ್ಣು ಮಕ್ಕಳು ತಪ್ಪದೇ ಮೂಗುತಿ ಧರಿಸಿ ತಮ್ಮ ಆರೋಗ್ಯವನ್ನ ತಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸಬಹುದು. ಈ ಮೂಲಕ ನಾವು ಹೇಳೋ ಪ್ರಯತ್ನ ಪಟ್ಟಿದ್ದೇವೆ.