ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿಗೆ ಸ್ಥಳ ಬಿಡಬೇಕು ಅಂದ್ರೆ ನಿಮ್ಮ ಪ್ಲೇಟ್ ನ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಹೆಚ್ಚಿನ ಸ್ಥಳವನ್ನು ಬಿಡಬೇಕು. ಮನೆ ಕಟ್ಟುವುದ ನ್ನ ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು ಅಂದ್ರೆ ಶುಕ್ಲ ಪಕ್ಷದಲ್ಲಿ ಚಂದ್ರನು ಇರ್ತಾನೆ. ಅದು ಅಭಿವೃದ್ಧಿಯ ಸಂಕೇತ ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯಲ್ಲಿ ಈಶ್ವರನ ವಾಸ. ಆ ಮೂಲೆಯಲ್ಲಿ ಪೂಜಾ ಕೋಣೆಯನ್ನು ಕಟ್ಟಬೇಕು.
ಜಾಸ್ತಿ ಸ್ಥಳ ವಿಲ್ಲದಿದ್ದರೆ ಒಂದು ಮಂಟಪವನ್ನು ಇಟ್ಟು ಪೂಜಿಸಬೇಕು. ದೇವರ ಮುಖ ವನ್ನು ಉತ್ತರ ಪೂರ್ವ ಅಥವಾ ಪಶ್ಚಿಮದಲ್ಲಿ ಇಡ ಬಹುದು. ಆದರೆ ದಕ್ಷಿಣ ಮುಖವಾಗಿ ದೇವರನ್ನು ಸ್ಥಾಪಿಸಬಾರದು.ಅಂದ್ರೆ ದಕ್ಷಿಣಕ್ಕೆ ಮುಖ ವಾಗಿ ಸ್ಥಾಪಿಸ ಬಾರದು. ದೇವರನ್ನು ಪೂಜಿಸುವ ವ್ಯಕ್ತಿ ಪೂರ್ವಾಭಿಮುಖ ವಾಗಿದ್ದರೆ ಒಳ್ಳೆಯದು ಅಂದರೆ ಪೂರ್ವ ಕ್ಕೆ ಮುಖ ಮಾಡಿ ಪೂಜೆ ಮಾಡಬೇಕು.
ಶೌಚಾಲಯ ವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು. ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟ ಬೇಕು. ಈಶಾನ್ಯ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಕಟ್ಟ ಬಾರದು. ಪ್ರವೇಶ ದ್ವಾರಕ್ಕೆ ಹೊಂದಿಕೊಂಡು ಶೌಚಾಲಯ ಕಟ್ಟಬಾರದು. ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳು ಭಾಗವು ತಗ್ಗು ಅಥವಾ ಇಳಿಜಾರು ಇದ್ದರೆ ಶುಭಕರ.
ಆಗ್ನೇಯ ಭಾಗದಲ್ಲಿ ಅಡುಗೆ ಮನೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ವಾಯುವ್ಯ ದಲ್ಲಿ ಅಡುಗೆಮನೆ ಮಾಡಬಹುದು. ಈಶಾನ್ಯದ ಲ್ಲಿ ಅಡುಗೆ ಮನೆ ಇರಬಾರದು. ಮುಖ್ಯದ್ವಾರದ ನೇರವಾಗಿ ಅಡುಗೆ ಮನೆ ಇರಬಾರದು.ಪೂರ್ವ ಉತ್ತರ ಈಶಾನ್ಯ ದಲ್ಲಿ ತುಳಸಿ ಕಟ್ಟೆ ಬೃಂದಾವನ ವನ್ನು ಕಟ್ಟಬಾರದು. ದಿಕ್ಕುಗಳಲ್ಲಿ ತುಳಸಿ ಗಿಡಗಳ ಕುಂಡ ಗಳನ್ನು ಸಹಿತ ಇಡ ಬಾರದು.
ದಕ್ಷಿಣ ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯ ದಲ್ಲಿ ತುಳಸಿ ಬೃಂದಾವನ ವನ್ನು ಕಟ್ಟ ಬಹುದು ಅಥವಾ ಕುಂಡಗಳನ್ನು ಇಡಬಹುದು. ಭಾಮಿ ಬೋರ್ವೆಲ್ ನೀರಿನ ಸಂಪು ಇತ್ಯಾದಿ ನೀರಿನ ಮೂಲ ಗಳನ್ನು ಈಶಾನ್ಯ ದಿಕ್ಕಿನಲ್ಲಿ ತೆಗೆ ಸಬೇಕು ಅಥವಾ ಹಾಕಿಸ ಬೇಕು. ಮನೆಯ ಮೇಲೆ ಇರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಇರುವಂತೆ ಇರಬೇಕು.
ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು.ವಿದ್ಯಾರ್ಥಿಗಳು ಪೂರ್ವ ಈಶಾನ್ಯ ಅಥವಾ ಉತ್ತರ ಅಭಿಮುಖ ವಾಗಿ ನೇರವಾಗಿ ಕುಳಿತು ಅಭ್ಯಾಸ ಮಾಡಬೇಕು. ಪೂರ್ವ ಅಥವಾ ಉತ್ತರದ ಗೋಡೆಗೆ ಬರೆಯುವ ಹಲಗೆಯನ್ನು ಅಳವಡಿಸಬೇಕು.