ಎಷ್ಟೇ ಹಣವಿದ್ದರೂ ನೀನು ಸಂತೋಷವನ್ನು ಅನುಭವಿಸಲು ಇದು ಚೆನ್ನಾಗಿರಲೇಬೇಕು
ಜೀವನದಲ್ಲಿ ಆರ್ಥಿಕ ಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಕೂಡ ಜೀವನದ ನಿಜವಾದ ಸಂತೋಷವನ್ನು ಅನುಭವಿಸುವುದಕ್ಕೆ ಮಾನಸಿಕ ಸ್ಥಿತಿ ಚೆನ್ನಾಗಿರುವುದು ಅಷ್ಟೇ ಅವಶ್ಯಕತವಾಗಿದೆ. ಒಂದು ಮಾತನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ
ಈ ಮುಖ ಈ ಸೌಂದರ್ಯ ಈ ದೇಹ ಎಲ್ಲವೂ ನಾವು ಸಾಲದಲ್ಲಿ ಪಡೆದಿದ್ದೇವೆ ಸಮಯ ಬಂದಾಗ ಇವುಗಳ ಮಾಲೀಕನಿಗೆ ನಾವು ಎಲ್ಲವನ್ನು ಹಿಂದಿರುಗಿಸಲೇಬೇಕು ಇದೆ ಜಗದ ನಿಯಮ ಒಬ್ಬ ವ್ಯಕ್ತಿ ಕೆಟ್ಟದಾಗಿ ಗೌರವವಿಲ್ಲದೆ ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ ಅಂಥವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡ ಅದು ಎಂದು ಅವರ ರಕ್ಷಣೆ ಮಾಡಲಾರದು ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸ ಇರುವುದಿಲ್ಲ ಸ್ಮಶಾನ ಯಾತ್ರೆಗು ದೇವರ ಜಾತ್ರೆಗು ಮದುವೆ ಸಂಭ್ರಮಕ್ಕೂ ಅದೇ ಶಾಮಿಯಾನ ಅದೇ ಕುರ್ಚಿಗಳು ಆದರೆ ಕುಳಿತವರ ಭಾವ ಸನ್ನಿವೇಶ ಮಾತ್ರ ಬೇರೆ ಮನುಷ್ಯ ಸಮಯದ ಗೊಂಬೆ
ಈ ಪ್ರಪಂಚದಲ್ಲಿ ಏನೇ ನಡೆದರೂ ಅದಕ್ಕೊಂದು ಕಾರಣ ಅಂತ ಇದ್ದೇ ಇರುತ್ತದೆ ಪರಮಾತ್ಮನ ಅನುಮತಿ ಇಲ್ಲದೆ ಒಂದು ಧೂಳಿನ ಕಣವು ಅಲುಗಾಡದು ಹೀಗಿರುವಾಗ ನಾವು ಯಾವುದಕ್ಕೂ ಚಿಂತೆ ಮಾಡದೆ ಅವನನ್ನು ಆಶ್ರಯಿಸುವುದು ಒಂದೇ ನಮ್ಮ ಗುಳಿದಿರುವ ಮಾರ್ಗ ಕಣ್ಮುಚ್ಚಿ ಬಿಡುವುದರೊಳಗೆ ಮುಗಿದೆ ಬಿಡುವುದು ಈ ಬದುಕು ಶಾಶ್ವತವಲ್ಲದ ಈ ಬದುಕು ಇರುವಷ್ಟು ದಿನ ಯಾರನ್ನು ನೋಯಿಸಬೇಡ ಸಾಧ್ಯವಾದರೆ ಪ್ರೀತಿಸುತ್ತಾ ಬದುಕು ಸುಗಂಧವು ದುರ್ಗಂಧವು ಭೇದವಿಲ್ಲದೆ ಹೊತ್ತು ತರುವುದಲ್ಲವೇ ಗಾಳಿ, ಅರಮನೆಯು ಗುಡಿಸಲೋ ಸೂರ್ಯ ಬೆಳಕು ನೀಡುವುದಿಲ್ಲವೇ ಬಡವನು ಪಾಪಾತ್ಮನು ಹೊತ್ತು ನಿಂತಿಲ್ಲವೇ
ಈ ಭೂಮಿ,ಒಳ್ಳೆಯವರು ಕೆಟ್ಟವರು ನನಗೆ ನಿನಗೆ ಯಾಕೆ ಚಿಂತೆ ನೀನು ನಿನ್ನ ಅರಿತು ಬಾಳಿದರೆ ಸಾಕಲ್ಲವೇ ನಮಗೆ ಎಷ್ಟೇ ಜ್ಞಾನವಿದ್ದರೂ ಕೆಲವೊಮ್ಮೆ ನಮ್ಮ ಲೆಕ್ಕಾಚಾರಗಳು ತಪ್ಪಿ ಬಿಡುತ್ತವೆ ಯಾಕೆಂದರೆ ನಾವು ಕೂಡಿಸಿ ಗುಣಿಸುವ ಅಷ್ಟರಲ್ಲಿ ಮೇಲಿರುವವನು ನಮ್ಮನ್ನೇ ಭಾಗಿಸಿ ಕಳೆದಿರುತ್ತಾನೆ. ಯಾಕೆಂದರೆ ನಮ್ಮ ಲೆಕ್ಕಾಚಾರಕ್ಕಿಂತ ಅವನ ಲೆಕ್ಕಾಚಾರವೇ ಸರಿಯಾಗಿರುತ್ತದೆ. ನಿಮಗೆ ಎಷ್ಟೇ ಧನ ಬಲ ಇದ್ದರೂ ಆಗಲ್ಲ ಎಷ್ಟೇ ಜನ ಬಲ ಇದ್ದರೂ ಆಗಲ್ಲ ದೈವ ಬಲವು ಬೇಕು ದೈವಬಲದ ಮುಂದೆ ಯಾವ ಬಲವು ದೊಡ್ಡದಲ್ಲ ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡಲು ಸಾಧ್ಯವಿಲ್ಲ ಆದ್ದರಿಂದ ನೀನು ಅಹಂಕಾರದಿಂದ ಮೆರೆಯುವುದನ್ನು ಬಿಟ್ಟು ಅರಿತು ಬಾಳಿದರೆ ಜೀವನ ಸುಲಭವಾಗಿರುತ್ತದೆ.