ನೀವು ನಿಮ್ಮ ಆರೋಗ್ಯ ಹೇಗಿದೆ ಎಂದು ಮುಖ ಲಕ್ಷಣದಿಂದ ತಿಳಿಯಬಹುದು

Recent Posts

ನೀವು ನಿಮ್ಮ ಆರೋಗ್ಯ ಹೇಗಿದೆ ಎಂದು ಮುಖ
ಲಕ್ಷಣದಿಂದ ತಿಳಿಯಬಹುದು

ನಮಸ್ಕಾರ ಸ್ನೇಹಿತರೆ ವೈದ್ಯರ ಬಳಿಗೆ ನಾವು ಯಾವುದೇ ಅನಾರೋಗ್ಯ ಸಂಬಂಧಿ ವಿಚಾರವಾಗಿ ಹೋದಾಗ ಅವರು ನಮ್ಮ ಮುಖವನ್ನೇ ನೋಡಿಕೊಂಡು ಮಾತನಾಡುತ್ತಾರೆ. ಇದಕ್ಕೆ ಕಾರಣ ಏನು ಗೊತ್ತಾ..! ನಮ್ಮ ಮುಖ ನೋಡಿಕೊಂಡು ಅನಾರೋಗ್ಯದ ಚಿಹ್ನೆಯನ್ನು ಪತ್ತೆ ಹಚ್ಚುತ್ತಿರುತ್ತಾರೆ


ನಮ್ಮ ಮುಖ ಅನಾರೋಗ್ಯದ ಕೆಲವೊಂದು ಸೂಚನೆಗಳನ್ನು ನೀಡುತ್ತದೆ .ಕೆಲವು ಗುಣಲಕ್ಷಣಗಳಂತು ನೀವು ಇಂಥದ್ದೇ ಸಮಸ್ಯೆ ಎಲ್ಲಿದ್ದೀರಿ ,ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂಬ ಸೂಚನೆಯನ್ನು ನೀಡುವುದರಿಂದ ಸಮಸ್ಯೆ ಹೆಚ್ಚಾಗುವ ಮೊದಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು


ಒಣ ಎದ್ದು ಬಂದಿರುವ ಚರ್ಮ ಮತ್ತು ತುಟಿ. ಚಳಿಗಾಲದಲ್ಲಿ ತುಟಿಗಳು ಒಣಗುವುದು ಒಡೆಯುವುದು ಸಾಮಾನ್ಯ ಆದರೆ ಹವಾಮಾನ ಹೇಗೇ ಇದ್ದರೂ ನಿಮ್ಮ ತುಟಿ ಒಣಗುತ್ತಿದ್ದರೆ ಒಡೆಯುತ್ತಿದ್ದರೆ ಇದು ನಿರ್ಜಲೀಕರಣದ ಲಕ್ಷಣವಿರಬಹುದು .ಆದರೆ ನೀವು ಯಥೇಚ್ಛವಾಗಿ ನೀರು ಕುಡಿದರೂ ಕೂಡ ಒಣ ಚರ್ಮ ಹಾಗೂ ಒಣ ತುಟಿಯ ಸಮಸ್ಯೆ ಇದ್ದಕ್ಕಿದ್ದಂತೆ ಕಂಡುಬಂದರೆ. ಇದು ಹೈಪೊ ಥೈರಾಯ್ಡಿಸಂ ಅಥವಾ ಮಧುಮೇಹದ ಲಕ್ಷಣವಿರಬಹುದು .ಹೈಪೊಥೈರೈಡಿಸಮ್ ಇನ್ನೂ ಕೆಲವು ಲಕ್ಷಣಗಳೆಂದರೆ ತೂಕ ಹೆಚ್ಚಾಗೋದು ,ನಿಶ್ಯಕ್ತಿ ಇತ್ಯಾದಿ ಇನ್ನೂ ಮಧುಮೇಹದ ಕೆಲವೊಂದು ಲಕ್ಷಣಗಳೆಂದರೆ ಅತಿಯಾದ ಬಾಯಾರಿಕೆ ,ಪದೇ ಪದೇ ಮೂತ್ರವಿಸರ್ಜನೆ ,ಸುಸ್ತು ,ದೃಷ್ಟಿ ಮಂದವಾಗುವುದು, ಇತ್ಯಾದಿ ಇಂತಹ ಯಾವುದೇ ಲಕ್ಷಣಗಳು ನಿಮಗೆ ಕಾಣಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು


ಮುಖದಲ್ಲೇ ಅತಿಯಾಗಿ ಕೂದಲು ಬೆಳವಣಿಗೆ .ಕೆಲವರಿಗೆ ಮುಖದಲ್ಲಿ ಮೊದಲಿಗಿಂತ ಹೆಚ್ಚಾಗಿ ಕೂದಲು ಬೆಳೆಯಲು ಶುರುವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೆನ್ನೆ ತುಟಿಯ ಮೇಲ್ಭಾಗದಲ್ಲಿ ಕೂದಲು ಅತಿಯಾಗಿ ಬೆಳೆಯುತ್ತದೆ ಇದು ಪಿಸಿಒಡಿ ಯ ಲಕ್ಷಣವಿರಬಹುದು .ಹಾರ್ಮೋನ್ ಅಸಮತೋಲನದಿಂದ ಹೀಗೆ ಕೂದಲು ಬೆಳೆಯುತ್ತದೆ . ಮಹಿಳೆಯರಲ್ಲಿ ಪುರುಷರ ಹಾರ್ಮೋನ್ ಅಧಿಕವಾಗುತ್ತದೆ ಅಸಮಾನ್ಯ ಕೂದಲ ಬೆಳವಣಿಗೆಗೆ ಕಾರಣ .ನೀವಿಲ್ಲಿ ಒಂದನ್ನು ಗಮನಹರಿಸಬೇಕು. ನಿಮಗೆ ಮುಖದಲ್ಲಿ ಮೊದಲೇ ಕೂದಲಿದ್ದರೆ ಇದನ್ನು ಪರಿಗಣಿಸಬೇಡಿ ಇತ್ತೀಚೆಗೆ ಅತಿಯಾಗಿ ಮುಖದಲ್ಲಿ ಕೂದಲ ಬೆಳವಣಿಗೆಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ನೋಡುವುದು ಉತ್ತಮ


ಮುಖದ ಚರ್ಮ ಮಾಸುವುದು ಸೂರ್ಯನ ಕಿರಣದಿಂದ ಮುಖದ ಬಣ್ಣ ಕುಂದುವುದು ಸಾಮಾನ್ಯ ಆದರೆ ಕೆಲವೊಮ್ಮೆ ಮುಖಾಬಿಲೆ ,ರಕ್ತಹೀನತೆಯ ಲಕ್ಷಣ ,ಹಾಗೆಯೇ ಚರ್ಮವು ಹಳದಿಯಾಗುವುದು ಲಿವರ್ ಸಮಸ್ಯೆ ಲಕ್ಷಣಗಳು ಆದ್ದರಿಂದ ಮುಖದ ಬಣ್ಣದಲ್ಲಿ ವ್ಯತ್ಯಾಸ ಕಾಣಿಸಿದರೆ ವೈದ್ಯರ ಸಲಹೆ ಅಗತ್ಯ ್ಯಾಶಸ್ ಅಥವಾ ದದ್ದುಗಳು. ಜೀರ್ಣಕ್ರಿಯೆಯ ಕೆಲವೊಂದು ಸಮಸ್ಯೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು. ತುರಿಕೆಯೊಂದಿಗೆ ಕೆಲವು ದದ್ದುಗಳು ಕಾಣಿಸಿಕೊಂಡರೆ ಇದು ಹೊಟ್ಟೆಯ ಕಾಯಿಲೆಯ ಲಕ್ಷಣವಿರಬಹುದು .ಇನ್ನು ಕೆಲವೊಮ್ಮೆ ಫುಡ್ ಪಾಯ್ಸನ್ ನಿಂದ ಕೂಡ ಮುಖದಲ್ಲಿ ತುರಿಕೆ ಅಲರ್ಜಿಗಳು ಕಾಣಿಸಿಕೊಳ್ಳುತ್ತದೆ.ನಿಮಗೆ ಈ ರೀತಿಯ ಸಮಸ್ಯೆ ಕಂಡು ಬಂದಲ್ಲಿ ವೈದ್ಯರನ್ನು ಭೇಟಿಯಾಗಿ


ಮೊಡವೆಗಳು ಮೂಡುವುದು ,ಎಣ್ಣೆ ಚರ್ಮದವರಿಗೆ ಮೊಡವೆ ಸಮಸ್ಯೆ ಸಾಮಾನ್ಯ ಆದರೆ ಕೆಲವರಿಗೆ ವಿಪರೀತ ಮೊಡವೆಗಳು ಇದ್ದಕ್ಕಿದ್ದಂತೆ ಕಾಣಿಸಲು ಶುರುವಾಗುತ್ತವೆ .ಇದಕ್ಕೆ ಕಾರಣ ಜೀರ್ಣಕ್ರಿಯೆಯ ತೊಂದರೆ ,ಮಲಬದ್ಧತೆ ಇರಬಹುದು, ಅಥವಾ ಪಿಸಿಒಡಿ, ಪಿಸಿಒಎಸ್ ಹಾರ್ಮೋನ್ ಇಂಬ್ಯಾಲೆನ್ಸ್, ಕೂಡ ಹೆಣ್ಣುಮಕ್ಕಳಲ್ಲಿ ಮೊಡವೆ ಮೂಡಲು ಕಾರಣವಿರಬಹುದು ಆದ್ದರಿಂದ ಇದನ್ನು ನಿರ್ಲಕ್ಷ ಮಾಡದಿರಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿರಿ

ಇವೆಲ್ಲಾ ಕೆಲವು ಲಕ್ಷಣಗಳು ಮುಖದಲ್ಲಿ ಸಮ್ಮುಖದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಕಂಡುಬರುತ್ತದೆ ಇದನ್ನು ಗಮನಿಸಿ ಚಿಕಿತ್ಸೆಯನ್ನು ತಕ್ಷ ಣ ಪಡೆದುಕೊಂಡರೆ ಸಮಸ್ಯೆ ದೊಡ್ಡದಾಗುವುದನ್ನು ತಡೆಯಬಹುದು

Leave a Reply

Your email address will not be published. Required fields are marked *