ಈ ದೇವಾಲಯ ವರ್ಷಕ್ಕೊಮ್ಮೆ 12 ದಿನಗಳು ಮಾತ್ರ ತೆಗೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಹೋಗಿ ಕಳ್ಳರು ಕಲ್ಲಾಗಿದ್ದಾರೆ ಎನ್ನುವ ನಿಗೂಢ ಕಥೆ ಇದೆ. ದೇವಿಯ ಗರ್ಭಗುಡಿಯ ಬಾಗಿಲು ಹಾಕುವ ಮೊದಲು ದೇವಿಗೆ ದೀಪ ವನ್ನು ಉರಿಸಿ ಹೂವು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲು ಮುಚ್ಚಲಾಗುತ್ತದೆ.
ಮುಂದಿನ ವರ್ಷ ಮತ್ತೆ ದೀಪಾವಳಿ ಸಂದರ್ಭದಲ್ಲಿ ಗರ್ಭಗುಡಿಯ ಬಾಗಿಲು ತೆಗೆದಾಗ ಕಳೆದ ವರ್ಷ ಉರಿಸಿದ ದೀಪ ಹಾಗೆಯೇ ಉರಿಯುತ್ತಿರುತ್ತದೆ ಹಾಗೂ ಹೂಗಳು ಸಹ ಹಾಗೆ ಆರು ಇರುತ್ತವೆ. ದೇವಸ್ಥಾನ ಬಾಗಿಲು ತೆರೆದ ನಂತರ ಈ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ.
ಹೌದು, ಇಂತಹ ಹಲವಾರು ಸಂಶಯಗಳನ್ನು ತನ್ನ ಗರ್ಭದಲ್ಲಿ ಹೊಂದಿರುವ ದೇವಸ್ಥಾನವೇ ಹಾಸನದ ಹಾಸನಾಂಬ ದೇವಸ್ಥಾನ ಹಾಸನ ಎಂದಾಕ್ಷಣ ನೆನಪಿಗೆ ಬರೋದೇ ಈ ಊರಿನ ದೇವತೆ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ದರ್ಶನ ಇದೆ ಎನ್ನುವ ಕಾರಣದಿಂದ ಈ ದೇಗುಲ ಸಾಕಷ್ಟು ಪ್ರಸಿದ್ಧಿಯನ್ನುಗಳಿಸಿದೆ.
ಅಷ್ಟೇ ಅಲ್ಲದೆ ತನ್ನ ನಂಬಿ ಬಂದವರನ್ನ ಎಂದೂ ಕೈಬಿಡದ ಈ ತಾಯಿ ಗೆ ಕೋಟಿ ಕೋಟಿ ಭಕ್ತರಿದ್ದಾರೆ. ಸಪ್ತಮಾತ್ರಿಕೆ ಎಂದು ಕರೆಯಲ್ಪಡುವ ಹಾಸನಾಂಭ ದೇವಾಲಯ ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ವಿಶಿಷ್ಟ ಪದ್ಧತಿಯಿಂದ ಅತ್ಯಂತ ಪ್ರಸಿದ್ಧಿಯಾಗಿದ್ದು, ದೀಪಾವಳಿ ಸಂದರ್ಭದಲ್ಲಿ ದೇಶ ವಿದೇಶ ದಿಂದ ಪ್ರವಾಸಿಗರು ಭಕ್ತಾದಿಗಳು,
ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಅಪರೂಪದ ದೇವಿಯ ದರ್ಶನ ಪಡೆಯುತ್ತಾರೆ. ಈ ಅದ್ಭುತ ಶಕ್ತಿ ದೇವಿಗೆ ಸಮರ್ಪಿಸ ಲಾಗಿರುವ ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸ ಲಾಗಿತ್ತು ಎಂದು ಇತಿಹಾಸ ಸಾರುತ್ತದೆ. ಪುರಾಣದ ಪ್ರಕಾರ ಹಿಂದೆ ಅಂಧ ಕಾಸುರ ಎಂಬ ರಾಕ್ಷಸನಿದ್ದನು ಕಠಿಣ ತಪಸ್ಸಿನ ನಂತರ ಅಜಯ್ನಾಗಲು ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ.
ಹೊಸದಾಗಿ ಸ್ವಾಧೀನಪಡಿಸಿ ಕೊಂಡ ಶಕ್ತಿಯಿಂದ ವನ್ನು ಎಲ್ಲೆಡೆ ಹಾನಿಯನ್ನುಂಟು ಮಾಡಲು ಪ್ರಾರಂಭಿಸುತ್ತಾನೆ. ಶಿವ ನು ಅವನನ್ನು ಕೊಲ್ಲ ಲು ಪ್ರಯತ್ನಿಸಿದಾಗಲೂ ರಾಕ್ಷಸನ ದೇಹದ ಪ್ರತಿಯೊಂದು ಹನಿ ನೆಲಕ್ಕೆ ಬೀಳುತ್ತಿದ್ದಂತೆ ಅದರಿಂದ ರಾಕ್ಷಸರು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ