ನಾವು ಮದುವೆ ಮಾಡಬೇಕಾದರು. ಮನೆ ಕಟ್ಟಬೇಕಾದರೂ ತುಂಬಾನೇ ಕಷ್ಟ ಪಡುತ್ತೀವಿ.ಕೆಲವರ ಹತ್ತಿರ ಸುಮ್ಮನೆ ದುಡ್ಡು ಇರುತ್ತದೆ. ಆದರೆ ಮನೆ ಮಾತ್ರ ಕಟ್ಟುವುದು ಆಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನು ತಮ್ಮ ಜೀವಿತಾವಧಿಯಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಬೇಕು ಎಂಬ ಆಸೆ ಇದ್ದೇ ಇರುತ್ತದೆ.ಒಂದು ಮನೆ ಅಥವಾ ಭೂಮಿ ಅಥವಾ ಜಾಗವನ್ನು ಖರೀದಿ ಮಾಡುವಾಗ.
ಯಾವುದೇ ಕಷ್ಟಕಾರ್ಪಣ್ಯಗಳು ಅಥವಾ ತೊಂದರೆಗಳು ಆಗಬಾರದು ಅಂದ್ರೆ ಏನು ಮಾಡಬೇಕು ಅಂತ ಹೇಳ್ತೀನಿ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯರು ಅವರ ಪೂರ್ವಾರ್ಜಿತ ಕರ್ಮದಿಂದ ಫಲಾಫಲಗಳು ಬರುತ್ತವೆ. ಇನ್ನು ಅದರಲ್ಲಿ ಮನೆಗೆ ಸಂಬಂಧಪಟ್ಟಂತೆ ಅವರ ಜಾತಕದ ದೋಷಗಳು ಮತ್ತು ಸಂಚಿತ ಅಂದ್ರೆ ಹಿಂದಿನ ಕರ್ಮಗಳಿಂದ ಎಲ್ಲವೂ ಕೂಡ ವಿಳಂಬವಾಗುತ್ತಿರುತ್ತದೆ.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಹಾಗೂ ಶುಕ್ರ ಗ್ರಹ ನಿವೇಶನವನ್ನು ಪ್ರತಿನಿಧಿಸುತ್ತಾರೆ. ಇನ್ನು ಬುಧಗ್ರಹ ಕ್ರೂರವಾಗಿದ್ದರೆ ಅಥವಾ ಕ್ರೂರ ಗ್ರಹದ ಸಂಯೋಗವನ್ನು ಹೊಂದಿದಂತ ಪಕ್ಷದಲ್ಲಿ ಅಂತಹ ಜಾತಕದವರು ನಿವೇಶನವನ್ನು ಅಥವಾ ಮನೆ ಅಥವಾ ಜಾಗವನ್ನು ಖರೀದಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಇನ್ನು ನಿಮ್ಮ ಜಾತಕದಲ್ಲಿ ಶುಕ್ರಗ್ರಹ ಕ್ರೂರಿಯಾಗಿದ್ದರೆ ಸಿಟಿ ಇದ್ದರೂ ಸಹ ಅವರಿಗೆ ಮನೆ ನಿರ್ಮಾಣ ಮಾಡುವ ಕಾರ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅದೇ ವಿಧವಾಗಿ ಮಹಾಲಕ್ಷ್ಮಿಯು ಇಂದ್ರಾದಿ ದೇವತೆಗಳಿಂದ ಹಿಡಿದು ಮನುಷ್ಯರಿಗೂ ಸಕಲ ಪ್ರಾಣಿ ಕೋತಿಗಳಿಗೂ ಐಶ್ವರ್ಯಪ್ರದಾಯಕವಾಗಿರುತ್ತಾರೆ. ಸ್ವತಃ ಭೂಮಾತೆಯು ಕೂಡ ಲಕ್ಷ್ಮಿ ಅಂಶದಿಂದ ಕೂಡಿರುತ್ತಾರೆ. ಆದ್ದರಿಂದ ನಿರಾತಂಕವಾಗಿ ಮನೆಯನ್ನು ಕಟ್ಟಬೇಕಾದರೆ ಲಕ್ಷ್ಮೀನಾರಾಯಣರ ಅನುಗ್ರಹವು ಬೇಕಾಗುತ್ತದೆ.
ಪ್ರತಿ ಬುಧವಾರ ಲಕ್ಷ್ಮಿ ನಾರಾಯಣಹೃದಯ ಪಠಣ ಮಾಡಬೇಕು. ಜೊತೆಗೆ ಬುಧವಾರ ದಿನ ನಿಮ್ಮ ಮನೆ ಹತ್ತಿರದ ಲಕ್ಷ್ಮೀನಾರಾಯಣ ಅಥವಾ ವೆಂಕಟೇಶ್ವರ ಅಥವಾ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೋಗಿ ಒಂದು ಪೂಜೆ ಅಥವಾ ಅಭಿಷೇಕವನ್ನು ಮಾಡಿಸಿ ಕೊಂಡು ಒಳಿತು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಆದಾಯದ ಮೂಲವು ಹೆಚ್ಚಾಗುವುದಕ್ಕೆ ಶುಕ್ರವಾರದ ದಿನ ಶ್ರೀಸೂಕ್ತ ಕನಕದಾರ ಸ್ತೋತ್ರ ಮತ್ತು ಮಹಾಲಕ್ಷ್ಮೀ ಅಷ್ಟಕದಿಂದ ಜಗನ್ಮಾತೆಯಾದ ಮಹಾಲಕ್ಷ್ಮಿಯನ್ನು ಆರಾಧಿಸಬೇಕು. ಈ ರೀತಿ ಮಾಡುವುದರಿಂದ ಮನೆಯ ವಿಚಾರದ ಸಂಕಲ್ಪವೂ ತಪ್ಪದೆ ಈಡೇರುತ್ತದೆ.ಭುವರಹ ಸ್ವಾಮಿ ಮುಖದ ಮೇಲೆ ಭೂಮಿಯ ಚಿತ್ರ ಇರುವುದನ್ನು ನೀವು ನೋಡಿರಬಹುದು. ಶ್ರೀ ವಿಷ್ಣು ಭೂವರಹ ರೂಪ ತಾಳಿ ರಾಕ್ಷಸನಿಂದ ಭೂಮಿಯನ್ನು ರಕ್ಷಿಸಿದ ಎಂಬ ಪುರಾಣ ಕಥೆಯಿದೆ.
ಇನ್ನು ಸ್ವಾಮಿಗೆ ಹರಕೆ ಹೊತ್ತರೆ ಭೂ ವಿವಾದಗಳು ಇತ್ಯರ್ಥವಾಗುತ್ತದೆ ಎಂಬ ನಂಬಿಕೆ ಇದೆ. ಮರಳು ಅಥವಾ ಇಟ್ಟಿಗೆಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲಿ ಅದೇ ಸಾಮಗ್ರಿಗಳಿಂದ ಗೂಡು ಕಟ್ಟಿ ಆ ಇಟ್ಟಿಗೆ ಅಥವಾ ಮಣ್ಣನ್ನು ತೆಗೆದುಕೊಂಡು ಹೋಗಿ ನಮ್ಮ ನೂತನ ಗೃಹ ನಿರ್ಮಾಣ ಮಾಡುವ ಕಾರ್ಯದಲ್ಲಿ ಉಪಯೋಗಿಸಬೇಕು. ಈ ರೀತಿ ಮಾಡೋದ್ರಿಂದ ಅರ್ಧದಲ್ಲಿ ನಿಂತಿರುವ ಮನೆ ಕಟ್ಟುವ ಕೆಲಸ ಪೂರ್ಣಗೊಳ್ಳುವುದು ಭುವರಹ ಸ್ವಾಮಿ ಮಂತ್ರವನ್ನು ಪ್ರತಿನಿತ್ಯ ಆಗಿ 21 ಪಠಿಸಬೇಕು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ