ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು

Featured Article

ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೇ ಹೋದರೆ ನಮಗೆ ಕೆಡಕಾಗುತ್ತದೆ. ಒಂದು ಜೇಷ್ಠ ಮಾಸದಲ್ಲಿ ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು.

ಎರಡು ಒಂದೇ ವರ್ಷದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಿಯ ವಿವಾಹ ಮಾಡಬಾರದು.ಮೂರು ವಿವಾಹ ಉಪನಯನ ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ ಅಂದರೆ ದೇವರಿಗೆ ಮಾಡುವುದು ಸೂತಕ ಮೈಲಿಗೆ ಬರುವುದಿಲ್ಲ. ನಾಲಕ್ಕು ನಾಂದಿ ಶಾಸ್ತ್ರವನ್ನು ಸಾಧ್ಯವಾದರೆ ಮಂಗಳವಾರ ಮತ್ತು ಶನಿವಾರಗಳನ್ನು ಬಿಟ್ಟು ಬೇರೆ ವಾರ ಮಾಡಬೇಕು.

ಆರು ಒಂದೇ ವರ್ಷ ಮೂರು ಶುಭ ಕಾರ್ಯಗಳನ್ನು ಮಾಡಬಾರದು.ಏಳು ವಿವಾಹ ಮಾಡಿದ ಸ್ವಲ್ಪ ದಿನಗಳಲ್ಲಿಯೇ ಗೃಹ ಪ್ರವೇಶ ಮುಂಜಿ ಚೌಲ ಮಾಡಬಾರದು.ದಿನ ಶಿವ ಪೂಜೆ ಮಾಡಬೇಕು.ಎಂಟು ವಿವಾಹದಲ್ಲಿ ವಧುವಿಗೆ ಗುರು ಬಲ ಮತ್ತು ವರನಿಗೆ ರವಿ ಬಲವನ್ನು ಮುಖ್ಯವಾಗಿ ನೋಡ ಬೇಕು. ಆದರೆ ಇಬ್ಬರಿಗೂ ಚಂದ್ರ ಬಲವನ್ನು ನೋಡ ಬೇಕು.

ಒಂಬತ್ತು ಮನೆಯಲ್ಲಿ ಸ್ತ್ರೀಯರು ಗರ್ಭಿಣಿ ಇರುವಾಗ ಮನೆ ಕಟ್ಟುವುದು, ಬಾವಿ ತೆಗೆಯುವುದು ಇತ್ಯಾದಿ ಮಾಡ ಬಾರದು.10 ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ ತಂಗಿಯರ ನ್ನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮನಿಗೆ ಕೊಡ ಬಾರದು.

11. ಗುರು ಶುಕ್ರರು ಅಸ್ತ ಇರುವಾಗ ಯಾವುದೇ ಶುಭ ಕಾರ್ಯ ಮಾಡಬಾರದು.ಮನೆಯಲ್ಲಿ ಕುಲ ದೇವರ ಮೂರ್ತಿ ಇಟ್ಟು ಪೂಜಿಸುವುದು ತುಂಬಾ ಉತ್ತಮ.ಸಗೋತ್ರ ದಲ್ಲಿ ವಿವಾಹ ವನ್ನು ಮಾಡ ಬಾರದು. 15 ಮಂಗಳವಾರ ಮಗಳನ್ನು ಗಂಡನ ಮನೆಗೆ ಶುಕ್ರವಾರ ಸೊಸೆಯನ್ನು ತವರ ಮನೆಗೆ ಕಳಿಸಬಾರದು.ಮಂಗಳವಾರ ಶನಿವಾರ ಸಾಲ ತರ ಬಾರದು. ಶುಕ್ರವಾರ ಸಾಲ ಕೊಡ ಬಾರದು.

17 ಮಗುವಿಗೆ ಹಾಲುಣಿಸುವಾಗ ಅಡ್ಡ ಹಾಯಬಾರದು. 18 ಗಿಣ್ಣದ ಹಾಲು ಕೊಟ್ಟ ವರಿಗೆ ಮರಳಿ ಖಾಲಿ ಪಾತ್ರೆ ಕೊಡ ಬಾರದು. 19 ಸಂತಾನ ದೋಷಕ್ಕೆ ನಾಗ ಪೂಜೆ ಬನ್ನಿ ಪೂಜೆ ಮಾಡಬೇಕು.ಮನೆಯಲ್ಲಿ ಸೂತಕ ಇರುವಾಗ ಯಾವುದೇ ಪೂಜಾ ಕಾರ‌್ಯ ವನ್ನು ಶುಭ ಕಾರ್ಯ ವನ್ನು ಮಾಡ ಬಾರದು. 21 ಸ್ಮಶಾನ ದಿಂದ ತಿರುಗಿ ಬರುವಾಗ ಮತ್ತೆ ಹಿಂದ ಕ್ಕೆ ತಿರುಗಿ ನೋಡ ಬಾರದು. 22 ಅಮವಾಸೆ ಸಂಕ್ರಾತಿ ಗ್ರಹಣ ಕಾಲದಲ್ಲಿ ಯಾವುದೇ ಮುಖ್ಯ ಕಾರ್ಯದ ಸಲು ವಾಗಿ ಪ್ರಯಾಣ ಮಾಡ ಬಾರದು.

Leave a Reply

Your email address will not be published. Required fields are marked *