ಜನರು ಒಳ್ಳೆಯವರ ? ಹುಲಿ ಮತ್ತು ಬೇಟೆಗಾರನ ಕಥೆ

ಒಮ್ಮೆ ಒಬ್ಬ ಬೇಟೆಗಾರ ಬೇಟೆಯಾಡಲು ಕಾಡಿಗೆ ಬಂದಿದ್ದ ಆ ಬೇಟೆಗಾರನ ಒಳ್ಳೆಯ ನುರಿತ ಬೇಟೆಯಾಡುವುದರಲ್ಲಿ ಪ್ರವೀಣನಾಗಿದ್ದ ಆ ಬೇಟೆಗಾರನ ಬೇಟೆಯಾಡಲು ಹುಡುಕುತ್ತಿದ್ದಾಗ ಅವನ ಕಣ್ಣಿಗೆ ಹೆಬ್ಬುಲಿಯೊಂದು ಕಾಣಿಸಿತು. ಬೇಟೆಗಾರನ ಕಣ್ಣುಗಳು, ಕೈಗಳು ಚುರುಕಾಯಿತು. ಹುಲಿಗೂ ಬೇಟೆಗಾರ ತನ್ನ ಮೇಲೆ ಕಣ್ಣಿಟ್ಟಿದ್ದು ಗೊತ್ತಾಯಿತು.

ಕೂಡಲೇ ಹುಲಿ ತಪ್ಪಿಸಿಕೊಳ್ಳಲು ಗಿಡ ಮರಗಳ ಸಂದಿಯಲ್ಲಿ ಓಡತೊಡಗಿತ್ತು. ಬೇಟೆಗಾರನು ಹುಲಿಯ ಬೆನ್ನಟ್ಟಿದ ಹುಲಿಯು ಚೂರುಗೆ ಬೇಟೆಗಾರನು ಓಡುತ್ತ ಓಡುತ್ತ ಹುಲಿ ಒಂದು ನದಿಯ ದಡಕ್ಕೆ ಬಂದಿತ್ತು. ಇದ್ದಕ್ಕಿದ್ದಂತೆ ಗುಡುಗು ಸಿಡಿಲು ಸಮೇತ ಮಳೆ ಸುರಿಯತೊಡಗಿತು. ಭಯದ ಸ್ಥಿತಿಯಲ್ಲಿದ್ದ ಹುಲಿ ನದಿಗೆ ಹಾರಿತು ಹುಲಿಯನ್ನು ಅಟ್ಟಿಸಿಕೊಂಡು ಬರುತ್ತಿದ್ದ ಬೇಟೆಗಾರ ಆಯಾತಪ್ಪಿ ನದಿಗೆ ಬಿದ್ದ.

ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿತ್ತು. ಇನ್ನೊಂದೆಡೆ ಭೋಳೆ ಎಂದು ಆರ್ಭಟಿಸುತ್ತ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ನದಿಗೆ ಹಾರಿದ ಹುಲಿ ಮತ್ತು ಬೇಟೆಗಾರನ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗತೊಡಗಿದರು. ಹುಲಿ ಪ್ರಾಣದ ಆಸೆಯಿಂದ ಬದುಕಲು ಸಹಾಯಕ್ಕಾಗಿ ಅಂಗಲಾಚುತ್ತ ಇತ್ತು. ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಕೂಗುತ್ತಿತ್ತು. ಬೇಟೆಗಾರನ ಸ್ಥಿತಿ ಕೂಡ ಅದೇ ಆಗಿತ್ತು. ಅವನು ಬದುಕುಳಿಯಲು ಈಜುತ್ತಿದ್ದ. ಆದರೆ ಪ್ರವಾಹದ ಭೀಕರತೆಗೆ ಅಸಹಾಯಕನಾಗಿದ್ದ.

ಮಳೆಯ ರಭಸ ಮತ್ತು ಪ್ರವಾಹದ ಜೋರು ಎಷ್ಟಿತ್ತೆಂದರೆ ನದಿಯ ದಡದಲ್ಲಿದ್ದ ಮರವೊಂದು ಉರುಳಿ ನದಿಯಲ್ಲಿ ತೇಲಿಬರುತ್ತಿತ್ತು. ಹುಲಿ ಮತ್ತು ಬೇಟೆಗಾರರು ಸಾಹಸಪಟ್ಟು ಆ ತೇಲಿ ಬರುತ್ತಿದ್ದ ಮರದ ಕೊಂಬೆಯನ್ನು ಹಿಡಿದು ಅದರ ಮೇಲೆ ಹತ್ತಿದರು. ಆದರೂ ಆ ನೀರಿನ ಪ್ರವಾಹದ ವೋಟ್ಕ್ಕೆ ಬದುಕುಳಿಯುವ ಆಸೆ ಬಿಟ್ಟುಬಿಟ್ಟಿದ್ದರು. ಹುಲಿಯು ಬೇಟೆಗಾರರಿಗೆ ದೀನತೆಯಿಂದ ಹೇಳಿದ್ದು ಬೇಟೆಗಾರನನ್ನು ಸಾಯಿಸಲು ನೀನು ಅಷ್ಟು ದೂರದಿಂದ ಓಡಿಸಿಕೊಂಡು ಬಂದೆ.

ನಾನು ಜೀವ ಉಳಿಸಿಕೊಳ್ಳಲು ಬಹಳ ಸಾಹಸ ಪಟ್ಟೆ. ಆದರೆ ಬದುಕು ಎಷ್ಟೊಂದು ಕ್ಷಣಿಕ ಎನ್ನುವುದು ಗೊತ್ತಾಗಿದೆ.ನೀನುನ್ನು ಭೇಟಿಯಾಡುವ ಬದ್ಲೆ ನಾನು ನಿನಗೆ ಶರಣಾಗಿದ್ದೇನೆ ಎಂದು 

ಆಗ ಬೇಟೆಗಾರ ಅಯ್ಯೋ ಹುಲಿಯೇ ನಾನು ಬದುಕುವುದೇ ಕಷ್ಟ. ನನ್ನ ಜೀವನದಲ್ಲಿ ಎಷ್ಟೊಂದು ಪ್ರಾಣಿಗಳನ್ನು ಭೇಟಿ ಮಾಡಿದ್ದೇನೆ. ಎಷ್ಟು ಜೀವಗಳನ್ನು ಬಲಿ ತೆಗೆದುಕೊಂಡಿದ್ದೇನೆ. ಆ ಪಾಪದ ಫಲವೇ ಇಂದು ಈ ಪ್ರವಾಹದಲ್ಲಿ ಸಿಲುಕಿದ್ದೇನೆ ಎಂದು ವೇದಾಂತಿಯಂತೆ ಮಾತನಾಡಿದ . ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave A Reply

Your email address will not be published.