ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ?

Featured Article

ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ ?ಇತ್ತೀಚಿನ ದಿನಗಳಲ್ಲಿ ವಿವಾಹಕ್ಕೂ ಮೊದಲು ಸ್ತ್ರೀ/ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಟ ವಿವಾಹದ ನಂತರವಾದರೂ ನಮ್ಮಂತೆ ನಡೆದು ಕೊಳ್ಳಲೆಂದು ಬಯಸುತ್ತೇವೆ ಸ್ನೇಹಿತರೆ ಪ್ರೇಮ ನಿಸ್ವಾರ್ಥ ಆದರೆ ಪ್ರೀತಿಸುವ ವ್ಯಕ್ತಿತ್ವಗಳು ಸ್ವಾರ್ಥವಾಗುತ್ತವೆ.

ಯಾಕೆ ಹೀಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.ಇದು ನನ್ನದು ಈಕೆ ನನ್ನವಳು ನನಗೆ ಸೇರಿದವಳು ನನಗೆ ಮಾತ್ರ ಸ್ವಂತ ಬೇರೆಯವರು ಕಣ್ಣೆತ್ತಿ ನೋಡಬಾರದು ಬೇರೆಯವರು ಮುಟ್ಟಬಾರದು ಇಂತ ಭಾವನೆ ನಮ್ಮಲ್ಲಿ ಹುಟ್ಟುತ್ತದೆ ಅದೆ ರೀತಿ ನಮ್ಮ ಪ್ರೇಯಸಿಯ ಮನಸಿನಲೂ ಇದೇ ಭಾವನೆಗಳು ಹುಟ್ಟುತ್ತವೆ.

ನೀವು ಪ್ರೀತಿಸಿದ ಯಾವುದೇ ವ್ಯಕ್ತಿಯಾಗಿರಲಿ ಕಾಲ ಕ್ರಮೇಣ ಅವರು ಮತ್ತೊಬ್ಬರನ್ನು ನೋಡುತ್ತಾರೆ ಇಷ್ಟ ಪಡುತ್ತಾರೆ ಮಾತನಾಡಿಸುತ್ತಾರೆ ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ.ನಮಗೆ ಅಸೂಯೆ ಕಾಡುತ್ತದೆ ಮನಸ್ಸಿನಲ್ಲಿ ಗೊಂದಲ ಗದ್ದಲ ಗಲಾಟೆಗಳು ಅನುಮಾನಗಳು ಉದ್ಭವಿಸುತ್ತದೆ ಯಾಕೆ ಹೀಗೆ ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸಿ

ಪ್ರೇಮ ಕರ್ತವ್ಯವಲ್ಲ ಕರ್ತವ್ಯ ಒಂದು ಹೊರೆ ಪ್ರೀತಿ ಅನ್ನೋದು ಬಹಳ ಪವಿತ್ರವಾದದ್ದು ಅದನ್ನು ತಪ್ಪು ಸರಿ ಅನ್ನೊ ಅಧಿಕಾರ ಯಾರಿಗೂ ಇಲ್ಲ ಹೌದು ಪ್ರತಿಯೊಬ್ಬರ ಪ್ರೀತಿ ಮಾಡುವ ರೀತಿ ವಿಭಿನ್ನವಾಗಿರುತ್ತದೆ ನಿಜ.ಹೇಳೋಕು ಅಂದರೆ ಪ್ರೀತಿ ಒಂದು ಮಾಯ ಲೋಕ ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಪರಿಪೂರ್ಣ ವ್ಯಕ್ತಿ ಯಾರೂ ಇಲ್ಲ ಇರುವುದಕ್ಕೆ ಸಾಧ್ಯವೇ ಇಲ್ಲ.

ಹಾಗಾಗಿ ಮದುವೆಯಾದ ನಂತರ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಲು ಸಹಜವಾಗಿ ಮಾನಸಿಕವಾಗಿ ಸಿದ್ಧರಾಗಿರಬೇಕು ಅದನ್ನು ಬಿಟ್ಟು ಹೊರಗಿನ ಸಂಬಂಧಗಳಿಗೆ ಕೈಚಾಚಬಾರದು.ಇದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡಸರಿಗೂ ಕೂಡ ಅನ್ವಹಿಸುತ್ತದೆ.ದಾಂಪತ್ಯ ಅನ್ನೋ ವಾಹನಕ್ಕೆ ಎರಡು ಚಕ್ರದಂತಿರುವ ಪತಿ ಪತ್ನಿ ಎಂಬುವವರಲ್ಲಿ ಒಬ್ಬರು ಅಲುಗಾಡಿದರೂ ಸಂಸಾರ ಅನ್ನೋ ಗಾಯನದಲ್ಲಿ ಲಯತಪ್ಪಿ ಅಪಸ್ವರ ಕಾಣಿಸಿಕೊಳ್ಳುತ್ತದೆ.

Leave a Reply

Your email address will not be published. Required fields are marked *