ಅರಳಿ ಮರದ ಉಪಯೋಗಗಳು

Recent Posts

ಅರಳಿ ಮರದ ಉಪಯೋಗಗಳು

ನಮಸ್ಕಾರ ಸ್ನೇಹಿತರೇ ಅರಳೀ ಮರ ಅಥವಾ ಅಶ್ವತ್ಥ ಮರ ಇದು ನಮ್ಮ ಭಾರತೀಯರೆಲ್ಲರಿಗೂ ಪವಿತ್ರವಾದ ಮರ ಎಂದು ಪರಿಗಣಿಸಲಾಗಿದೆ.ಈ ಅರಳಿಮರದಿಂದ ನಮಗೆ ತುಂಬಾ ಉಪಯೋಗವಿದೆ.ಇದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಜೊತೆಗೆ ಅರಳಿಮರದ ಗಾಳಿಯನ್ನು ತೆಗೆದುಕೊಂಡರೆ ಆರೋಗ್ಯವು ಕೂಡ ತುಂಬ ಚೆನ್ನಾಗಿರುತ್ತದೆ.
ಹಿಂದಿನ ಕಾಲದ ಜನರು ಇದರಿಂದ ರೋಗವನ್ನು ಬಗೆಹರಿಸಿಕೊಳ್ಳುತ್ತಿದ್ದರು ಆದರೆ ಈಗ ಅದರ ಮಹತ್ವ ತಿಳಿಯದೆ ಮರವನ್ನು ಕಡಿದು ನಾಶ ಮಾಡುತ್ತಿದ್ದಾರೆ

ಹಿಂದಿನ ಕಾಲದಲ್ಲಿ ಈ ಅರಳಿ ಮರಕ್ಕೆ ಕೊಡಲಿ ಹಾಕಲು ಬಿಡುತ್ತಾ ಇರಲಿಲ್ಲ ಅದಕ್ಕೆ ಕಾರಣ ಏನೆಂದರೆ ಅರಳಿಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮತ್ತು ಅರಳಿ ಮರದ ಎಲೆಗಳಲ್ಲಿ ಮುಕ್ಕೋಟಿ ದೇವಾನು ದೇವತೆಗಳು ಇರುತ್ತಾರೆ ಎಂದು ಹೇಳುತ್ತಾ ಇದ್ದರು ಹಾಗಾಗಿ ಸಾಮಾನ್ಯವಾಗಿ ಜನರು ಅರಳಿಮರವನ್ನು ಪೂಜೆ ಮಾಡುತ್ತಾರೆ ಮತ್ತು ಎಲ್ಲಾ ದೇವಸ್ಥಾನಗಳ ಬಳಿಯಿರುವ ಅರಳಿ ಮರವನ್ನು ಪ್ರದಕ್ಷಿಣೆ ಹಾಕುವುದನ್ನು ಕೂಡ ನೀವು ಗಮನಿಸಿರಬಹುದು


ಇನ್ನೂ ಈ ಅರಳಿ ಮರವು ಕೇವಲ ಪೂಜೆ ಮತ್ತು ಪುನಸ್ಕಾರಗಳೂ ಅಷ್ಟೇ ಅಲ್ಲದೆ ಇದರ ಎಲೆಗಳಾಗಿರಬಹುದು ಅದರ ತೊಗಟೆಯ ರೆಂಬೆ ಸೇರಿದಂತೆ ಎಲ್ಲಾ ಭಾಗಗಳು ಕೂಡ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಇದನ್ನು ಬಳಸಲಾಗುತ್ತದೆ


ಈ ಅರಳಿ ಮರವನ್ನು ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಗೆ ಬಳಕೆ ಮಾಡುತ್ತಾರೆ. ಅದಕ್ಕಾಗಿ ಈ ಮರದ ತೊಗಟೆಯ ಒಳ ಭಾಗವನ್ನು ತೆಗೆದು ಅದನ್ನು ಒಣಗಿಸಿ ಅದಾದ ನಂತರ ಈ ಒಣಗಿದ ಭಾಗದ ಪುಡಿಯನ್ನು ಮಾಡಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಇದಷ್ಟೇ ಅಲ್ಲದೆ ಇದರ ಎಲೆಯನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಅಸ್ತಮಾ ಸಮಸ್ಯೆ ಕೂಡ ಬೇಗ ನಿವಾರಣೆ ಆಗಲು ಸಹಾಯ ಮಾಡುತ್ತದೆ


ಇನ್ನೂ ಚರ್ಮದ ಸಮಸ್ಯೆ ತಲೆ ತುರಿಕೆ ಇದ್ದರೆ ಗಾಳಿ ಮರದ ತೊಗಟೆ ತುಂಬ ಉಪಯುಕ್ತವಾಗಿದೆ ಈ ತೊಗಟೆಯನ್ನು ಪುಡಿಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ ಇನ್ನೂ ಗಾಯವಾಗಿದ್ದರೆ ಈ 2ಎಲೆಗಳನ್ನು ಪೇಸ್ಟ್ ಮಾಡಿ ಆ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ನಿವಾರಣೆಯಾಗಲು ಸಹಾಯವಾಗುತ್ತದೆ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಜಂಕ್ ಫುಡ್ ಫಾಸ್ಟ್ ಫುಡ್ ಮತ್ತು ಬೀದಿ ಬದಿಯ ಆಹಾರ ಸೇವನೆ ಹೆಚ್ಚು ಮಾಡುತ್ತಾ ಇದ್ದರೆ ಇದರಿಂದ ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆ ಜಾಸ್ತಿಯಾಗುತ್ತಿದೆ ಇಂದೂ ಕೂಡ ಏನಾದ್ರೂ ಗ್ಯಾಸ್ ಸಮಸ್ಯೆ ಇದ್ರೆ ಮತ್ತು ಮಲಬದ್ಧತೆ ಸಮಸ್ಯೆಯಿದ್ದರೆ ಈ ಅರಳಿ ಮರದ ಎಲೆಗಳನ್ನು ತಂದು ಇದನ್ನು ಔಷಧಿಯಾಗಿ ಬಳಕೆ ಮಾಡಬಹುದು.ಅದಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ಅರಳಿ ಮರದ ಎಲೆಯ ರಸವನ್ನು ಕುಡಿಯುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿದಿನ ಒಂದೊಂದು ಟೀ ಸ್ಪೂನಿನಷ್ಟು ಅರಳಿ ಎಲೆಯ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆ ನಿವಾರಣೆ ಮಾಡಬಹುದು

Leave a Reply

Your email address will not be published. Required fields are marked *