ಹಸ್ತರೇಖೆ ಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತೆ

Recent Posts

ಹಸ್ತರೇಖೆ ಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತೆ.

ನಮಸ್ಕಾರ ಸ್ನೇಹಿತರೆ, ಹಸ್ತರೇಖೆಗಳನ್ನು ನೋಡಿ ಭವಿಷ್ಯ ತಿಳಿದುಕೊಳ್ಳಬಹುದು ಹೌದು ಆತ್ಮೀಯರೇ ನಾನು ಹೇಳುತ್ತಿರುವುದು ಸುಳ್ಳಲ್ಲ ನಿಜ ಹಸ್ತರೇಖೆ ಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತೆ ಅಂತ ಬಹಳ ಸುಲಭವಾಗಿ ಹೇಳಬಹುದು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈಯಲ್ಲಿನ ರೇಖೆಯನ್ನು ನೋಡಿ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದೆಂದು ಹೌದು ಆದರೆ ಕೈಯಲ್ಲಿನ ರೇಖೆ ಮಾತ್ರ ಭವಿಷ್ಯತ್ತನ್ನು ಸೂಚಿಸುದಿಲ್ಲವಾದರೂ ಮುಂಬರುವ ದಿನಗಳಲ್ಲಿ ಆಗುವ ಬದಲಾವಣೆಗಳನ್ನು ಮುಂಚಿತವಾಗಿ ತಿಳಿಸುತ್ತದೆ ಅನ್ನುತ್ತಾರೆ ಜ್ಯೋತಿಷ್ಯರು.

ಇನ್ನು ಜೀವನದಲ್ಲಿ ನಡೆಯಬಹುದಾದ ಅನೇಕ ಘಟನೆಗಳ ಮೇಲೆ ಪ್ರಭಾವವಿರುತ್ತದೆ ಪುರಾತನ ಕಾಲದಲ್ಲಿ ಕೈಗಳುು, ಕೈಬೆರಳುಗಳು, ಕೈ ರೇಖೆಗಳು ಅವುಗಳ ಪರಿಮಾಣ ಉದ್ದ ಮೊದಲಾದವುಗಳಿಂದ ಭವಿಷ್ಯತ್ತನ್ನು ಅಳೆಯಲಾಗಿದೆ ಹೀಗಾಗಿ ಸಾಮುದ್ರಿಕ ಶಾಸ್ತ್ರವನ್ನು ಮಾರ್ಗದರ್ಶಿಯಾಗಿ ತೆಗೆದುಕೊಳ್ಳುತ್ತಿದ್ದಾರೆ ಕೈಯಲ್ಲಿರುವ ವಿವಿಧ ರೇಖೆಗಳು ಜೀವನದಲ್ಲಿ ಜರಗುವ ವಿವಾಹ, ಸಂತಾನ, ಉದ್ಯೋಗ, ಆರೋಗ್ಯ ಮೊದಲಾದವುಗಳನ್ನು ತಿಳಿಸುತ್ತದೆ ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ, ಈ ರೇಖೆಯಿಂದ ನಿಮಗೆ ಯಾವಾಗ ಮದುವೆಯಾಗುತ್ತದೆ ಅಂತ ನಿಖರವಾಗಿ ಹೇಳಬಹುದು ವಿವಾಹ ರೇಖೆ ಕಿರುಬೆರಳು ಹಾಗೂ ಹೃದಯ ರೇಖೆ ಮಧ್ಯೆ ಇರುತ್ತದಂತೆ ಪ್ರಧಾನ ರೇಖೆಯಾನ್ನು ಹೊಂದುಕೊಂಡು ಸಣ್ಣ ರೇಖೆಗಳು ಇದ್ದಲ್ಲಿ ಅನೇಕ ಜನರೊಂದಿಗೆ ಸಂಬಂಧಗಳು ವ್ಯವಹಾರಗಳ ಇಲ್ಲವೇ ನಿಶ್ಚಿತಾರ್ಥದ ನಂತರ ರದ್ದು ಮಾಡಿಕೊಳ್ಳುವುದು ಸಂಭವಿಸುತ್ತದೆ.

ಇನ್ನು ಮದುವೆ ರೇಖೆ ಆಕಾರಗಳು ವಿವಾಹ ಸಮಾನ ಜೀವನ ಭಾಗ ಸ್ವಭಾವ ಆರೋಗ್ಯ ಹಾಗೂ ವ್ಯಕ್ತಿತ್ವವನ್ನು ತಿಳಿಸುತದಂತೆ ಹೃದಯ ರೇಖೆ ಹಾಗೂ ವಿವಾಹ ರೇಖೆ ನಡುವೆ ಅಂತರ ಹೆಚ್ಚಾಗಿರುವ ವ್ಯಕ್ತಿಗಳಿಗೆ ಮದುವೆ ಸ್ವಲ್ಪ ತಡವಾಗಿ ಆಗುತ್ತೆ ಅರ್ಥ ಪುರುಷರಿಗೆ 32 ವರ್ಷಗಳ ನಂತರ ಹಾಗೂ ಮಹಿಳೆಯರಿಗೆ 27 ವರ್ಷಗಳ ನಂತರ ವಿವಾಹ ಯೋಗ ಇರುತ್ತದೆ ಎಂದು ಹಸ್ತ ಸಾಮುದ್ರಿಕ ಸಾಂಪ್ರದಾಯಿಕ ಪಂಡಿತರು ತಿಳಿಸುತ್ತಾರೆ ಈ ರೇಖೆ ಉದ್ದವಾಗಿದ್ದರೆ ಅಂತವರಿಗೆ 25 ವರ್ಷದಲ್ಲಿ ಮದುವೆಯಾಗಿ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರಂತೆ.

ಚಿಕ್ಕದಾಗಿ ಅಸ್ಪಷ್ಟವಾಗಿದ್ದರೆ ಚಿಕ್ಕ ವಯಸ್ಸಿನಲ್ಲಿ ಮದುವೆ ಆಗ್ತಾರಂತೆ ಒಂದು ವೇಳೆ ಆಫ್ ಲೈನ್ ಇಲ್ಲದೆ ಇತರ ರೇಖೆಗಳ ಜೊತೆ ಕೂಡಿ ಕೊಂಡಿದ್ದರೆ 23 ವಯಸ್ಸು ವರ್ಷದಲ್ಲಿ ಮದುವೆಯಾಗುತ್ತದೆ ಇನ್ನು ಕಿರುಬೆರಳಿಗೆ ಹತ್ತಿರ ಇರುವ ರೇಖೆಗೆ ಮಾತ್ರಾ ತಡವಾಗಿ ಮದುವೆಯಾಗುತ್ತದೆ ಅಷ್ಟೇ ಅಲ್ಲದೆ ಜೀವನಪೂರ್ತಿ ಬ್ರಹ್ಮಚಾರಿ ಯಾಗಿ ಉಳಿಯುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ ಇಂದು ಹೇಳ್ತಾರೆ ಇನ್ನು ವಾ ರೇಖೆಯು ತುಂಡಗಿದ್ದರೆ ಮದುವೆ ನಂತರ ಗಂಡ ಹೆಂಡತಿ ಬೇರೆ ಬೇರೆ ಆಗುತ್ತಾರೆ ಇಲ್ಲವೆಂದರೆ ವಿಚ್ಛೇದನ ವಿವಾಹವನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತೆ ಇನ್ನು ವಿವಾಹ ರೇಖೆ ಪಕ್ಕದಲ್ಲಿ ಸಣ್ಣ ಸಣ್ಣ ರೇಖೆಗಳು ಇದ್ದರೆ ಒಂದೇ ಸಲ ಇಬ್ಬರ ಪ್ರೇಮ ಬಂಧನಕ್ಕೆ ಸಿಲುಕಿಕೊಳ್ಳುತ್ತಾರೆ ಅಂತೆ ಇಂಥವರು ಮದುವೆ ಮಾಡಿಕೊಳ್ಳದೆ ಇರುವುದು ಉತ್ತಮವಂತೆ ಆದರೆ ಇದೆಲ್ಲವು ನಂಬಿದವರಿಗೆ ಮಾತ್ರ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *