ನಿಮಗೆ ಸರ್ಪದೋಷ ತೊಂದರೆಗಳಿದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳುವಂತಹ ಏಕೈಕ ಗರುಡ ದೇವಾಲಯವು ಇದಾಗಿದೆ

Recent Posts

ನಿಮಗೆ ಸರ್ಪದೋಷ ತೊಂದರೆಗಳಿದ್ದರೆ ಅದನ್ನು ನಿವಾರಣೆ ಮಾಡಿಕೊಳ್ಳುವಂತಹ ಏಕೈಕ ಗರುಡ ದೇವಾಲಯವು ಇದಾಗಿದೆ

ನಮಸ್ಕಾರ ಸ್ನೇಹಿತರೆ, ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸರ್ಪದೋಷವು ನಿಮ್ಮನ್ನು ಕಾಡುತ್ತಿದ್ದರೆ, ಅದನ್ನು ನಿವಾರಣೆ ಮಾಡುವ ಏಕೈಕ ದೇವಾಲಯ ಇದಾಗಿದೆ. ಸರ್ಪದೋಷಗಳು ನಿಮ್ಮಲ್ಲಿ ಇದ್ದರೆ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ, ಇದಕ್ಕಾಗಿ ಹಲವಾರು ರೀತಿಯ ಶಾಂತಿಹೋಮಗಳನ್ನು ಕೂಡ ಮಾಡಿಸಬೇಕಾಗುತ್ತದೆ, ಆದರೆ ಗರುಡನ ದೇವಾಲಯವು ಇರುವ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು, ಎಂಟು ರೀತಿಯ ಸರ್ಪ ದೋಷಗಳು ಪರಿಹಾರವಾಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಸಂತಾನ ಭಾಗ್ಯ, ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ವೈದ್ಯಕೀಯ ಸಮಸ್ಯೆ, ಈ ಕ್ಷೇತ್ರದಲ್ಲಿ ಗುಣಪಡಿಸಲಾಗುತ್ತದೆ, ಎಂತಹ ಸಮಸ್ಯೆಗಳಾದರು ಕೂಡ ಈ ದೇವಾಲಯಕ್ಕೆ ಭೇಟಿನೀಡಿ ನಮಸ್ಕರಿಸಿದರೆ ಸಾಕು, ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ, ಹಾಗಾದರೆ ಈ ಒಂದು ದೇವಾಲಯದ ವಿಶೇಷತೆಯೇನು ಎಂಬುದರ ಬಗ್ಗೆ ನೋಡೋಣ


ಈ ಇತಿಹಾಸದ ಪುಣ್ಯ ಸ್ಥಳವಿರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ “ಕೊಲದೇವಿ ಎಂಬ ಗ್ರಾಮ”ದಲ್ಲಿ ಇದೆ. ಈ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಇದ್ದು ಆಂಜನೇಯ ಸ್ವಾಮಿಯ ದರ್ಶನವನ್ನು ಕೂಡ ಪಡೆಯಬಹುದಾಗಿದೆ, ಮತ್ತೊಂದು ವಿಶೇಷವೆಂದರೆ ಮೂಲ ವಿಗ್ರಹದಲ್ಲಿ ಗರುಡನ ಒಂದು ಭುಜದ ಮೇಲೆ “ವಿಷ್ಣು” ಮತ್ತು ಇನ್ನೊಂದು ಭುಜದ ಮೇಲೆ “ಲಕ್ಷ್ಮಿ” ಇರುವುದನ್ನು ಕಾಣಬಹುದು. ಹಾಗಾಗಿ ಗರುಡನ ಜೊತೆಗೆ ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದಾಗಿದೆ. ಇನ್ನು ಈ ದೇವಾಲಯವು ಎರೆಡು ದಂತ ಕಥೆಗಳ ಪುರಾಣದ ಕಥೆಯನ್ನು ಹೊಂದಿದೆ

ಮೊದಲನೆಯದು:- ಪುರಾಣಗಳ ಪ್ರಕಾರ ದ್ವಾಪರಯುಗದಲ್ಲಿ ಅರ್ಜುನ ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ಉತ್ಸಾಹದಲ್ಲಿ ಬಿಟ್ಟ ಉಗ್ರ ಬಾಣಗಳು ಬೆಂಕಿಯನ್ನು ಸೃಷ್ಟಿಸಿದ್ದಲ್ಲದೆ ಆ ಅಗ್ನಿಯಲ್ಲಿ ಹಲವಾರು ಸರ್ಪಗಳು ಸಹ ಕೊಲ್ಲಲ್ಪಡುತ್ತದೆ. ಇದರಿಂದ ಅರ್ಜುನನು ಸತ್ತ ಹಾವುಗಳಿಂದ ಶಾಪಗ್ರಸ್ತನಾಗಿರುತ್ತಾನೆ, ಈ ಶಾಪದಿಂದ ಮುಕ್ತನಾಗಲು ಪಂಡಿತರು ಅರ್ಜುನನಿಗೆ ಗರುಡನಿಗೆ ಪ್ರಾರ್ಥಿಸಲು ಸಲಹೆಯನ್ನು ನೀಡುತ್ತಾರೆ. ಇದರಿಂದ ಅರ್ಜುನನು ಕೊಲದೇವಿ ಗರುಡ ದೇವಸ್ಥಾನದಲ್ಲಿ ಗರುಡ ದೇವತೆಯನ್ನು ಸ್ಥಾಪಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ

ಇನ್ನು ಎರಡನೆಯದು:- ರಾಮಾಯಣದಲ್ಲಿ ರಾವಣನು ಸೀತೆಯನ್ನು ಅಪಹರಿಸಿ, ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋಗುವಾಗ ಜಟಾಯು ಅಂದರೆ ಗರುಡ ಸೀತೆಯನ್ನು ರಕ್ಷಿಸಲು ಬರುತ್ತದೆ ಆಗ ರಾವಣನ ಕೈಯಿಂದ ಕೊಲ್ಲಲ್ಪಡುತ್ತದೆ. ಆಗ ಈ ಸ್ಥಳದಲ್ಲಿ ಜಟಾಯು ಕುಸಿದುಬಿದ್ದಿತ್ತು ಎಂದು ನಂಬಲಾಗಿದೆ. ಆದ್ದರಿಂದ ಈ ಊರಿಗೆ ಕೊಲದೇವಿ ಎಂಬ ಹೆಸರು ಬಂದಿದೆ, ಜಟಾಯುವಿನ ಪ್ರಯತ್ನಗಳಿಂದ ಸಂತೋಷಗೊಂಡ ವಿಷ್ಣು ಜಟಾಯುವನ್ನು ಆಶೀರ್ವದಿಸುತ್ತಾನೆ. ಇದರಿಂದ ಗರುಡ ಮತ್ತೆ ಈ ಸ್ಥಳಕ್ಕೆ ದೇವರಾಗಿ ಬಂದಿದ್ದಾನೆ ಎಂದು ಹೇಳಲಾಗುತ್ತದೆ..
ಧನ್ಯವಾದಗಳು

Leave a Reply

Your email address will not be published. Required fields are marked *