ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಿರಿ ಇದರಿಂದ ದೊರೆಯುವ ಲಾಭಗಳು ಎಷ್ಟು ಗೊತ್ತಾ

Recent Posts

ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯದಿರಿ ಇದರಿಂದ ದೊರೆಯುವ ಲಾಭಗಳು ಎಷ್ಟು ಗೊತ್ತಾ

ನಮಸ್ಕಾರ ಸ್ನೇಹಿತರೆ, ನಿಂಬೆ ಹಣ್ಣನ್ನು ನಾವು ಯಾವ ಯಾವ ರೀತಿಯಲ್ಲೂ ಬಳಸಿಕೊಂಡರು ಅದರಲ್ಲಿ ಇರುವಂತಹ ಔಷಧೀಯ ಗುಣಗಳು ಹಾಗೂ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತದೆ, ಅಡುಗೆಯಿಂದ ಹಿಡಿದು ಪಾನೀಯದವರೆಗೂ ಪ್ರತಿಯೊಂದಕ್ಕೂ ನಿಂಬೆರಸವನ್ನು ಬಳಸಲಾಗುತ್ತದೆ. ನಾವು ನಿಂಬೆರಸವನ್ನು ಮಾತ್ರ ಬಳಸಿ ನಂತರ ಸಿಪ್ಪೆಯನ್ನು ಹಾಗೆ ಕಸದ ಬುಟ್ಟಿಗೆ ಎಸೆಯುತ್ತೇವೆ ಆದರೆ ನಿಂಬೆಯ ಸಿಪ್ಪೆಯನ್ನು ಕೂಡ ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು. ಬನ್ನಿ ಹಾಗಾದರೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಹೇಗೆಲ್ಲ ಬಳಸಬಹುದು ಎಂದು ತಿಳಿಯೋಣ


“ಮೊದಲನೆಯದಾಗಿ ಕೈಯ ದುರ್ವಾಸನೆಯನ್ನು ತೆಗೆದುಹಾಕುತ್ತದೆ” : ನೀವು ಈರುಳ್ಳಿ ಅಥವಾ ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದರೆ ಆಗ ಆದರಿಂದ ಕೈಯಲ್ಲಿ ಗಾಟು ಹಾಗೆ ಉಳಿಯುತ್ತದೆ, ಅದೇ ರೀತಿ ಮೀನು ಮಾಂಸದ ವಾಸನೆ ಕೂಡ ಉಳಿಯುತ್ತದೆ, ಇಂತಹ ವಾಸನೆಯನ್ನು ದೂರಮಾಡಲು ಬೆರಳು ಮತ್ತು ಅಂಗೈಗೆ ಸರಿಯಾಗಿ ನಿಂಬೆಹಣ್ಣಿನ ಸಿಪ್ಪೆಯನ್ನು ಉಜ್ಜಬೇಕು ಇದರಿಂದ ವಾಸನೆ ದೂರವಾಗುತ್ತದೆ


“ಎರಡನೆಯದಾಗಿ ಬಟ್ಟೆಯಿಂದ ಕಲೆಗಳನ್ನು ತೆಗೆದುಹಾಕುತ್ತದೆ” : ಊಟ ಮಾಡುವ ವೇಳೆ ನೀವು ತಿನ್ನುವಂತಹ ಆಹಾರ ಬಟ್ಟೆಯ ಮೇಲೆ ಬೀಳಬಹುದು, ಅದಕ್ಕೆ ಬಳಸಿರುವಂತಹ ಅರಿಶಿನವು ತುಂಬಾ ಗಾಢ ಕಲೆಯನ್ನು ಉಂಟುಮಾಡುತ್ತದೆ, ಇದನ್ನು ಸೋಪು ಹಾಕಿ ತೆಗೆಯುವುದು ಕಷ್ಟ, ಅದಕ್ಕಾಗಿ ಕೆಲವು ಹನಿ ನಿಂಬೆರಸವನ್ನು ಕಲೆಯಿರುವ ಭಾಗಕ್ಕೆ ಹಿಂಡಿ ಸ್ವಲ್ಪ ಉಪ್ಪು ಹಾಕಿಕೊಂಡು ನಿಂಬೆ ಸಿಪ್ಪೆಯ ಒಳಭಾಗದಿಂದ ಉಜ್ಜಬೇಕು ಬಳಿಕ ನೀರಿನಿಂದ ತೊಳೆಯಿರಿ, ಕಲೆ ತುಂಬಾ ಗಾಢವಾಗಿದ್ದರೆ ಎರಡರಿಂದ ಮೂರು ಬಾರಿ ಈ ರೀತಿ ಮಾಡಿದರೆ ಕಲೆ ದೂರವಾಗುತ್ತದೆ


“ಮನೆಯನ್ನು ಸುವಾಸನೆ ಭರಿತವಾಗಿರಿಸುತ್ತದೆ” : ಮನೆಯಲ್ಲಿ ಸುವಾಸನೆಯೂ ಬರುತ್ತಿದ್ದರೆ ಅದು ಮನಸ್ಸಿಗೆ ಖುಷಿ ನೀಡುತ್ತದೆ ಇದಕ್ಕಾಗಿ ನೀವು ಬೇಡ ಎಂದು ಕಸಕ್ಕೆ ಎಸೆಯುವ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು, ಎರಡರಿಂದ ಮೂರು ನಿಂಬೆ ಹಣ್ಣಿನ ಸಿಪ್ಪೆಯನ್ನು 1 ಕಪ್ ನಲ್ಲಿ ಹಾಕಿ ಹಾಗೆ ಮನೆಯ ಒಂದು ಭಾಗದಲ್ಲಿ ಇಡಿ ಇದರಿಂದ ತುಂಬಾ ಸುವಾಸನೆ ಹರಡುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಸುವಾಸನೆಗಿಂತಲೂ ಇದು ಒಳ್ಳೆಯದು


“ತಾಮ್ರ ಹಿತ್ತಾಳೆ ಪಾತ್ರೆಯ ಹೊಳಪನ್ನು ಹೆಚ್ಚಿಸುತ್ತದೆ” : ಕೆಲವೊಂದು ಲೋಹದ ಪಾತ್ರೆ ಮತ್ತು ಮೂರ್ತಿಗಳಲ್ಲಿ ಬೇಗನೆ ಕಲೆಗಳು ಉಂಟಾಗುತ್ತದೆ, ಇದನ್ನು ತೆಗೆಯುವುದು ತುಂಬಾ ಕಷ್ಟ. ಇದನ್ನು ನಿವಾರಣೆ ಮಾಡಲು ನೀವು ನಿಂಬೆ ಸಿಪ್ಪೆಯ ಒಳಭಾಗದಿಂದ ಮೂರ್ತಿಯನ್ನು ಅಥವಾ ತಾಮ್ರದ ಅಥವಾ ಹಿತ್ತಾಳೆ ಪಾತ್ರೆಗಳನ್ನು ಉಜ್ಜಿರಿ ಇದರ ಬಳಿಕ ಎರಡರಿಂದ ಮೂರು ಗಂಟೆಗಳ ಕಾಲ ಇದನ್ನು ಬಿಸಿಲಿನಲ್ಲಿ ಇಡಬೇಕು ನಿಂಬೆಯು ಬಿಸಿಲಿಗೆ ಪ್ರತಿಕ್ರಿಯಿಸಿ ಲೋಹಕ್ಕೆ ಕಾಂತಿ ಬರುತ್ತದೆ. ಗಾಜಿನ ಪಾತ್ರೆಗಳನ್ನು ಶುಚಿಮಾಡಿ ಕೆಲವೊಮ್ಮೆ ಗಾಜಿನ ಪಾತ್ರೆಗಳು ಕಾಂತಿಯನ್ನು ಕಳೆದುಕೊಳ್ಳುತ್ತದೆ, ಇದನ್ನು ನಿವಾರಣೆ ಮಾಡಲು ನಿಂಬೆಹಣ್ಣಿನ ಸಿಪ್ಪೆ ತುಂಬಾ ಪರಿಣಾಮಕಾರಿ

ನಿಂಬೆ ಸಿಪ್ಪೆಗೆ ಅರ್ಧ ಚಮಚ ಅಡುಗೆ ಸೋಡಾವನ್ನು ಹಾಕಿಕೊಂಡು ಪಾತ್ರೆಯನ್ನು ಉಜ್ಜಿರಿ ಸರಿಯಾಗಿ ಸ್ಕ್ರಬ್ ಆದ ಬಳಿಕ 30 ನಿಮಿಷಗಳ ಕಾಲ ಹಾಗೆ ಬಿಡಿ, 30 ನಿಮಿಷಗಳ ಬಳಿಕ ಇದನ್ನು ಸೋಪು ಹಾಕಿಕೊಂಡು ತೊಳೆಯಿರಿ, ಆಗ ಪಾತ್ರೆಗಳು ಹೊಸದರಂತೆ ಕಾಣುತ್ತದೆ, ನೋಡಿದಿರಲ್ಲ ಇನ್ನು ಮುಂದೆ ನಿಂಬೆರಸವನ್ನು ಹಿಂಡಿ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯದಿರಿ
ಇನ್ನೂಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *