ಸ್ತ್ರೀಯರ ಹೆಸರು ಯಾವ ರೀತಿ ಇದ್ದರೆ ತುಂಬಾ ಒಳ್ಳೆಯದು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ಸಂಖ್ಯಾಶಾಸ್ತ್ರದ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಸ್ತ್ರೀಯರ ಹೆಸರು ಯಾವ ರೀತಿ ಇದ್ದರೆ ತುಂಬಾ ಒಳ್ಳೆಯದು ಎಂಬುದನ್ನು ತಿಳಿಯೋಣ ಬನ್ನಿ,
ಸಾಮಾನ್ಯವಾಗಿ ಹಿಂದಿನ ದಿನಗಳಲ್ಲಿ ನದಿಯ ಹೆಸರುಗಳು, ಪರ್ವತದ ಹೆಸರುಗಳು, ನೆರಳಿಗೆ ಸಂಬಂಧಪಟ್ಟ ಹೆಸರುಗಳನ್ನು ಇಡುತ್ತಿದ್ದರು ಇವುಗಳಿಗೆ ಸಂಬಂಧಪಟ್ಟ ಹೆಸರುಗಳನ್ನು ಇಡುವುದರಿಂದ ಹೆಣ್ಣು ಮಕ್ಕಳ ಜೀವನದಲ್ಲಿ ಸಾಕಷ್ಟು ಕಷ್ಟಗಳು ಮತ್ತು ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬೇಕಾಗುತ್ತದೆ
ಉದಾಹರಣೆಗೆ : ಗಂಗಾ, ಕಾವೇರಿ, ಸಿಂಧು, ವಿಂದ್ಯಾ, ಮಾಯ, ಛಾಯ ಇಂತಹ ಹೆಸರುಗಳನ್ನು ಸಾಧ್ಯವಾದಷ್ಟು ಇಡದೆ ಇರುವುದು ಒಳ್ಳೆಯದು ಆದರೆ ಈಗ ಈ ರೀತಿಯ ಹೆಸರುಗಳನ್ನು ಇಡುವುದು ಕಡಿಮೆಯಾಗಿದೆ ಹಾಗೆಯೇ ಸೀತಾ, ರಾಜೇಶ್ವರಿ, ಭುವನೇಶ್ವರಿ, ಭಾರತಿ, ಭಾಗ್ಯ, ಭವಾನಿ, ಬಾ ಅಕ್ಷರದಿಂದ ಬರುವ ಹೆಸರುಗಳನ್ನು ಇಡುವುದು ಒಳ್ಳೆಯದಲ್ಲ ನಿಮಗೆ ಈ ತರಹದ ಹೆಸರುಗಳನ್ನು ಇಟ್ಟಿದ್ದರೆ ಭಯಪಡುವ ಅವಶ್ಯಕತೆ ಇಲ್ಲ ನಿಮಗೆ ಅನುಕೂಲಕ್ಕೆ ತಕ್ಕಂತೆ ಹೆಸರು ಬದಲಾಯಿಸಿಕೊಳ್ಳಬಹುದು ಲಲಿತ ಸಹಸ್ರನಾಮದಲ್ಲಿ ಮತ್ತು ವಿಷ್ಣು ಸಹಸ್ರನಾಮದಲ್ಲಿ ಬರುವಂತಹ ಅಮ್ಮನವರ ಹೆಸರುಗಳನ್ನು ಇಟ್ಟರೆ ತುಂಬಾ ಒಳ್ಳೆಯದು.
S ಅಕ್ಷರ, R ಅಕ್ಷರ, V ಅಕ್ಷರ, J ಅಕ್ಷರಗಳಿಂದ ಬರುವಂತಹ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿರುವ ಜಾತಕದ ಪ್ರಕಾರ ಇಟ್ಟರೆ ತುಂಬಾ ಒಳ್ಳೆಯದು ಸ್ಪಷ್ಟವಾದ ಹೆಸರನ್ನು ಇಡುವುದರಿಂದ ಹೆಣ್ಣು ಮಕ್ಕಳ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ನೋಡಬಹುದು ಮೊದಲು ಶ್ರೀ ಎಂಬ ಅಕ್ಷರದಿಂದ ಆರಂಭವಾದರೆ ತುಂಬಾ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ.