ವೃಷಭ ರಾಶಿ, ಸೆಪ್ಟೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ! ಹಣಕಾಸು, ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ

ವೃಷಭ ರಾಶಿ, ಸೆಪ್ಟೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ!
ಹಣಕಾಸು, ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ರಾಶಿಗೆ ಅನುಗುಣವಾಗಿ ಈ ತಿಂಗಳ ಭವಿಷ್ಯವನ್ನು ತಿಳಿಯೋಣ, ನಿಮ್ಮ ರಾಶಿ ಫಲಗಳನ್ನು ಐದು ಘಟ್ಟಗಳಾಗಿ ವಿಶ್ಲೇಷಿಸುತ್ತೇವೆ ಹಣಕಾಸು, ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ. ವೃಷಭ ರಾಶಿ ರಾಶಿ ಚಕ್ರದ ಎರಡನೇ ಜ್ಯೋತಿಷ್ಯ ಚಿಹ್ನೆ ಇದು ಕೃತಿಕ ನಕ್ಷತ್ರದ ಎರಡು ಮೂರು 4 ಪಾದ ರೋಹಿಣಿ ನಕ್ಷತ್ರದ ನಾಲ್ಕು ಮೃಗಶಿರ ನಕ್ಷತ್ರದ ಒಂದು ಎರಡು ಪಾದದ ಅಡಿಯಲ್ಲಿ ಜನಿಸಿದವರು ವೃಷಭ ರಾಶಿಯ ಅಡಿಯಲ್ಲಿ ಬರುತ್ತಾರೆ

ಈ ರಾಶಿಯ ಅಧಿಪತಿ ಶುಕ್ರ.
ಕುಟುಂಬ ಮತ್ತು ಸಂಬಂಧ, ಕುಟುಂಬದ ವಿಚಾರದಲ್ಲಿ ಈ ತಿಂಗಳು ಮಿಶ್ರವಾಗಿದೆ ನಿಮ್ಮ ಸಂಬಂಧಿಕರನ್ನು ನೀವು ಭೇಟಿ ಮಾಡಬಹುದು ಮತ್ತು ಕುಟುಂಬದ ಸಮಾರಂಭಕ್ಕೆ ಸಹ ಹಾಜರಾಗಬಹುದು ನಿಮ್ಮ ಜೀವನ ಸಂಗಾತಿ ಅವರ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಕುಟುಂಬದ ಎರಡನೇ ವಾರದ ನಂತರ ಸಂಗಾತಿಯ ಜೊತೆ ಕೆಲವು ವಾಗ್ವಾದಗಳು ನಡೆಯಬಹುದು ನಿಮ್ಮಿಬ್ಬರ ನಡುವಿನ ಜಗಳದ ಲಾಭವು ಮತ್ತೊಬ್ಬರು ಪಡೆಯಲು ಬಿಡಬೇಡಿ ಕುಟುಂಬದೊಂದಿಗೆ ಕುಲ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ನಿಮ್ಮ ತಪ್ಪು ತಿಳುವಳಿಕೆಗಳನ್ನು ಸರಿ ಮಾಡಿಕೊಳ್ಳಿ

ಕೊನೆಯ ವಾರದಲ್ಲಿ ತಂದೆಯ ಕಡೆಯಿಂದ ಆರ್ಥಿಕ ಸಹಾಯ ಮತ್ತು ವ್ಯವಹಾರದಲ್ಲಿನ ಒಳ್ಳೆಯ ಮಾರ್ಗಸೂಚಿಯನ್ನು ಪಡೆಯುತ್ತೀರಿ ವಧು-ವರ ಅನ್ವೇಷಣೆಯವರು ಮೊದಲು ಎರಡು ವಾರಗಳಲ್ಲಿ ಪ್ರಯತ್ನ ಪಡುವುದು ಉತ್ತಮ.
ಶಿಕ್ಷಣ, ಈ ರಾಶಿ ಚಕ್ರದ ವಿದ್ಯಾರ್ಥಿಗಳಿಗೆ ಈಗಲೇ ಬಹಳ ತಡವಾಗಿದೆ ಆದರೂ ನೀವು ಬಯಸಿದ ವಿದ್ಯಾಲಯಗಳಲ್ಲಿ ಅತ್ಯುತ್ತಮ ತರಗತಿಗಳಲ್ಲಿ ಪ್ರವೇಶ ಸಿಗುತ್ತದೆ ಇದು ಕೊನೆಯ ಭಾಗ ಆಗಿರುವುದರಿಂದ ಉಳಿದ ವಿದ್ಯಾರ್ಥಿಗಳೊಂದಿಗೆ ನೀವು ಸರಿದೂಗಿಸಿಕೊಂಡು ಹೋಗುವ ವಿಚಾರದಲ್ಲಿ ಹಿಂದೆ ಬೀಳಬಹುದು ಇದೆ ಕಾರಣದಿಂದಾಗಿ ಪದೇಪದೇ ನೀವು ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕಾಗುತ್ತದೆ ಇದೆಲ್ಲದರ ಪರಿಣಾಮವಾಗಿ ಸ್ವಲ್ಪ ಕಿರಿಕಿರಿ ಅನ್ನು ಅನುಭವಿಸುತ್ತೀರಿ ಇಷ್ಟೇ ಅಲ್ಲದೆ ವಿಷಯಗಳಲ್ಲಿ ಏಕಾಗ್ರತೆಯ ಕೊರತೆಯೂ ಕೂಡ ನಿಮ್ಮನ್ನು ಕಾಡುತ್ತದೆ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತಹ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅಪೇಕ್ಷಿತ ಸಂಸ್ಥೆಗಳಲ್ಲಿ ಪ್ರವೇಶವನ್ನು ಸಹ ಪಡೆಯುತ್ತಾರೆ ಈ ತಿಂಗಳ ಮೂರನೇ ವಾರದಿಂದ ಅಧ್ಯಯನಗಳಲ್ಲಿ ಏಕಾಗ್ರತೆಯ ಕೊರತೆ ಇರುವುದರಿಂದ ಅವರು ಜಾಗರೂಕರಾಗಿರಬೇಕು ಅವರು ಅಪೇಕ್ಷಿಸಿದ ಸಂಸ್ಥೆಗಳಲ್ಲಿ ಸಿಟು ಸಿಕ್ಕರೂ ಕೂಡ ಹಣದ ಕೊರತೆ ಕೂಡ ನಿಮ್ಮನ್ನು ಕಾಣಬಹುದು

ಆರೋಗ್ಯ, ಈ ತಿಂಗಳು ಆರೋಗ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಹಿಂದೆ ಕಾಡುತ್ತಿರುವಂತಹ ಆರೋಗ್ಯ ಸಮಸ್ಯೆಗಳು ಸ್ವಲ್ಪ ಉಲ್ಬಣಿಸಿ ಮೊದಲೆರಡು ವಾರ ನಿಮ್ಮನ್ನು ಕಾಡಬಹುದು ಸರಿಯಾದ ವೈದ್ಯಕೀಯ ಚಿಕಿತ್ಸೆ ಮಾಡಿಸುವುದು ಮತ್ತು ವೈದ್ಯರ ಸಲಹೆಯನ್ನು ಅನುಸರಿಸುವುದರಿಂದ ಶೀಘ್ರದಲ್ಲೇ ಗುಣಮುಖರಾಗಬಹುದು ವಯಸ್ಕರಲ್ಲಿ ಚರ್ಮದ ಅಥವಾ ಕಿವಿ ತೊಂದರೆಯಿಂದ ಬಳಲುತ್ತಿರುವಂತಹ ಕಾರಣ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಮಧುಮೇಹ ರಕ್ತದೊತ್ತಡದಂತಹ ಕಾಯಿಲೆಯಿಂದ ಬಳಲುತ್ತಿರುವವರು ಕುಟುಂಬಸ್ಥರ ಪ್ರೀತಿ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರೆ ಚಾಲನೆ ಮಾಡುವಾಗ ನೀವು ಜಾಗರೂಕರಾಗಿರಬೇಕು

ವೃತ್ತಿಜೀವನ, ನೀವು ನಿಮ್ಮ ಕಾರ್ಯಗಳಲ್ಲಿ ಉತ್ತಮ ಸಮಯ ಮತ್ತು ಯಶಸ್ಸನ್ನು ಹೊಂದಿರುತ್ತೀರಿ ನಿಮ್ಮ ಉನ್ನತ ಅಧಿಕಾರಿಗಳಿಂದಲೂ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ ಕೆಲಸ ಅಥವಾ ಸ್ಥಳವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವವರು ಈ ತಿಂಗಳಲ್ಲಿ ಅವರು ಬಯಸಿದ ಫಲಿತಾಂಶವನ್ನು ಪಡೆಯುತ್ತಾರೆ ನಿಮ್ಮ ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಏಕೆಂದರೆ ಅವರೊಂದಿಗೆ ಕೆಲವು ಸಮಸ್ಯೆಗಳಿರಬಹುದು ಶಿಕ್ಷಕ ವೃತ್ತಿಯಲ್ಲಿರುವಂತಹ ಮಹಿಳೆಯರು ಕೆಲಸದಲ್ಲಿ ಒತ್ತಡವನ್ನು ಅನುಭವಿಸಬೇಕಾಗುತ್ತದೆ

ನಿಗದಿತ ಸಮಯದಲ್ಲಿ ಅಂದುಕೊಂಡಂತೆ ಕೆಲಸಗಳನ್ನು ಮುಗಿಸಲು ತೀವ್ರ ಒತ್ತಡ ಉಂಟಾಗುತ್ತದೆ ಗೆಳತಿಯರೊಂದಿಗೆ ಸೇರಿ ಮಾಡುತ್ತಿದ್ದ ವ್ಯಾಪಾರದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಹೆಚ್ಚಾಗುತ್ತದೆ ಉದ್ಯಮಿಗಳಿಗೆ ಉತ್ತಮ ಸಮಯವಿರುತ್ತದೆ ಏಕೆಂದರೆ ಸ್ವಲ್ಪ ವಿಸ್ತರಣೆ ಅಥವಾ ಸ್ಥಳ ಬದಲಾವಣೆ ಸೂಚಿಸಲಾಗಿದೆ ಈ ಬದಲಾವಣೆ ಅಥವಾ ವಿಸ್ತರಣೆ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ ನೀವು ಈ ತಿಂಗಳು ಪ್ರಮುಖ ಒಪ್ಪಂದಕ್ಕೆ ಸಹ ನೀವು ಸಹಿ ಹಾಕಬಹುದು ಪಾಲುದಾರಿಕೆ ಪತ್ರಗಳಿಗೂ ಸಹ ಸಹಿ ಮಾಡುವುದು ಈ ತಿಂಗಳಲ್ಲಿ ಒಳ್ಳೆಯದಾಗುತ್ತದೆ.
ಹಣಕಾಸು, ಆರ್ಥಿಕವಾಗಿ ಈ ತಿಂಗಳು ಸರಿಯಾಗಿದೆ ನೀವು ಉತ್ತಮ ಆದಾಯವನ್ನು ಹೊಂದುತ್ತೀರಿ ಆದರೆ ಅದೇ ಸಮಯದಲ್ಲಿ ಈ ತಿಂಗಳು ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ

ನೀವು ಈ ತಿಂಗಳು ಆಸ್ತಿ ಅಥವಾ ವಾಹನವನ್ನು ಸಹ ಖರೀದಿಸಬಹುದು ನೀವು ಈ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಅನಿರೀಕ್ಷಿತ ಖರ್ಚು ಮಾಡಬೇಕಾಗಬಹುದು ಮಕ್ಕಳ ವಿಚಾರದಲ್ಲಿ ಸ್ವಲ್ಪ ಖರ್ಚುಗಳು ಹೆಚ್ಚುತ್ತವೆ ಆದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ ಖರ್ಚಿಗೆ ತಕ್ಕ ಪ್ರತಿಫಲ ಲಭಿಸುತ್ತದೆ ವಿದೇಶ ಪ್ರಯಾಣಕ್ಕಾಗಿ ಹೆಚ್ಚಿನ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗುತ್ತದೆ ನಿರ್ವಿಘ್ನವಾಗಿ ಪ್ರಯಾಣ ಬೆಳೆಸುತ್ತೀರಿ ಆದರೆ ನಿಮ್ಮ ಕಾಗದ ಪತ್ರಗಳ ವಿಚಾರದಲ್ಲಿ ಎಚ್ಚರಿಕೆವಹಿಸಿ ಆಸ್ತಿ ವಿಚಾರವಾಗಿ ಹೆಚ್ಚಿನ ಮಾತು ಕಥೆಗಳು ಈ ತಿಂಗಳು ನಡೆಯಲಿದೆ ಇದರಿಂದ ನಿಮಗೆ ಧನಪ್ರಾಪ್ತಿಯಾಗುವ ಬಲವಾದ ಸಾಧ್ಯತೆ ಇದೆ ವ್ಯಾಪಾರದಲ್ಲಿ ಸಾಲ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತದೆ ಅವರಿಗೆ ಸಾಲ ಕೊಟ್ಟರೆ ನಿಮ್ಮ ಲಾಭದ ಲೆಕ್ಕಾಚಾರ ಏರುಪೇರು ಆಗುತ್ತದೆ.

Leave A Reply

Your email address will not be published.