ಕಡೆ ಕಾರ್ತಿಕ ಸೋಮವಾರದ ದಿನ ಯಾವ ರೀತಿ ಪೂಜೆ ಮಾಡಬೇಕು, ಯಾವ ರೀತಿ ಉಪವಾಸ ವನ್ನು ಕೈಗೊಳ್ಳ ಬೇಕು ಹಾಗೆ ವಿಶೇಷವಾಗಿ ಅವತ್ತಿನ ದಿನ ಯಾವ ಕೆಲಸ ಗಳನ್ನು ಮಾಡಿದ್ರೆ ತುಂಬಾ ಒಳ್ಳೇದು ಅಂತ ತಿಳಿಸ ಕೊಡ್ತಾ ಇದೀನಿ. ಹಾಗಾದರೆ ಬನ್ನಿ ನೋಡೋಣ, ಶುರು ಮಾಡೋಣ.
ಈ ವರ್ಷ ಕಡೆ ಕಾರ್ತಿಕ ಸೋಮವಾರ ಡಿಸೆಂಬರ್ ಹನ್ನೊಂದ ನೇ ತಾರೀಖು ಸೋಮವಾರದ ದಿನ ಬಂದಿದೆ. ಕಾರ್ತಿಕ ಮಾಸದಲ್ಲಿ ಬರುವಂತಹ ಪ್ರತಿ ಯೊಂದು ಸೋಮವಾರವೂ ಕೂಡ ಬಹಳ ವಿಶೇಷ. ಅದರಲ್ಲೂ ಶಿವನಿಗೆ ಅರ್ಪಿತವಾದ ಈ ದಿನದಂದು ಶಿವನನ್ನ ವಿಶೇಷವಾಗಿ ಪೂಜೆ ಮಾಡುವಂತದ್ದು, ಅರ್ಚನೆ ಮಾಡುವಂತದ್ದು,
ಅಭಿಷೇಕ ಮಾಡುವಂತದ್ದು ಅಥವಾ ಶಿವನಿಗೆ ಪ್ರಿಯ ವಾಗಿರುವಂತಹ ಬೆಲ್ಲದ ದೀಪ ಹಚ್ಚುವುದು ಅಥವಾ 365 ಬತ್ತಿಗಳನ್ನು ಹಾಕಿ ಶಿವಾಲಯದಲ್ಲಿ ಅಥವಾ ಮನೆಗಳಲ್ಲಿ ದೀಪ ಹಚ್ಚುವುದು ವಿಶೇಷ. ಇನ್ನು ಉಳಿದಿರುವಂತಹ ಕೊನೆಯ ಒಂದು ಸೋಮವಾರ ಇದೆ. ಅದನ್ನು ಕೂಡ ಬಹಳ ವಿಶೇಷವಾಗಿ ಮಾಡಲಾಗುತ್ತೆ.
ಈ ದಿನ ಉಪವಾಸ ಮಾಡುವುಕ್ಕೆ ತುಂಬಾನೇ ಸೂಕ್ತವಾದಂತಹ ದಿನ ಯಾರಾದ್ರು ಕಡೆ ಕಾರ್ತಿಕ ಸೋಮವಾರ ದಿನ ಉಪವಾಸ ಇರಬೇಕು ಅಂತ ಅಂದ್ಕೊಂಡಿದ್ರೆ ಶಿವನಲ್ಲಿ ಸಂಕಲ್ಪ ಮಾಡಿಕೊಂಡು ಇವತ್ತಿನ ದಿನ ನಾನು ಉಪವಾಸವನ್ನು ಇರ್ತೀನಿ ಅಂತ ಹೇಳ್ಕೊಂಡು ದೇವರ ಹತ್ರ ಉಪವಾಸವನ್ನ ಇರಬಹುದು. ಅಥವಾ ಹಣ್ಣು ಹಾಲು ನೀರನ್ನು ಕುಡಿದು ಕೊಂಡು ಉಪವಾಸವನ್ನ ಇರಬಹುದು.
ಬೆಳಗ್ಗೆ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ನಂತ್ರ ನೀವು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ವನ್ನು ಮಾಡಿಸಿ ನಿಮ್ಮ ಹೆಸರಲ್ಲಿ ಅರ್ಚನೆಯನ್ನು ಮಾಡಿಸಿಕೊಂಡು ದೇವರ ದೇವಸ್ಥಾನದಲ್ಲಿ ನೀವು ದೀಪವನ್ನು ಹಚ್ಚಿ ಬರಬೇಕು. ಅದು ಕೇವಲ ಮಣ್ಣಿನ ದೀಪದಲ್ಲಿ ದೀಪಾರಾಧನೆ ಹಚ್ಚಬಹುದು. 365 ಬತ್ತಿಗಳನ್ನು ಹಾಕಿ ದೀಪ ಹಚ್ಚ ಬಹುದು ಅಥವಾ ಬೆಲ್ಲದ ದೀಪಾರಾಧನೆ ಕೂಡ ನೀವು ದೇವಸ್ಥಾನ ದಲ್ಲಿ ಮಾಡಬಹುದು.
ಕೆಲವರು ತೆಂಗಿನ ಕಾಯಿ ಯಲ್ಲಿ ಕೂಡ ಆ ದೀಪಾರಾಧನೆ ಮಾಡಿದರೆ ಅದನ್ನು ಕೂಡ ಮಾಡಬಹುದು. ಇನ್ನು ಈ ಕಾರ್ತಿಕ ಮಾಸದಲ್ಲಿ ದೀಪಗಳ ದಾನ ವಿಶೇಷವಾದಂತಹದ್ದು ದೀಪಗಳನ್ನು ಕೂಡ ನೀವು ಬೇರೆಯವರಿಗೆ ದಾನವಾಗಿ ಕೊಡ ಬಹುದು ಅಥವಾ ನಿಮ್ಮ ಕೈಯಲ್ಲಿ ಏನು ಸಾಧ್ಯವಾಗುತ್ತದೋ ದುಡ್ಡು ಇರೋದು ದಾನ್ಯಗಳ ಆಗಿರಬಹುದು, ವಸ್ತ್ರ ಆಗಿರಬಹುದು.
ಬೇರೆಯವರಿಗೆ ದಾನವನ್ನ ಮಾಡಿದ್ರು ಕೂಡ. ಅವತ್ತಿನ ದಿನ ತುಂಬಾನೇ ಒಳ್ಳೆಯದಾಗುತ್ತೆ. ಇನ್ನು ಯಾವ ರೀತಿ ಮನೆಯಲ್ಲಿ ಪೂಜೆ ಮಾಡಬೇಕು ಅಂದ್ರೆ ಸರಳವಾಗಿ ನಿಮ್ಮ ಮನೆ ದೇವರ ಪೂಜೆ ಯನ್ನು ಮಾಡ್ಕೊಳ್ಳಿ. ಶಿವಲಿಂಗ ಅಥವಾ ಶಿವನ ಫೋಟೋ ಇದ್ರೆ ವಿಶೇಷವಾಗಿ ಬಿಲ್ವ ಪತ್ರೆಯಿಂದ ಅರ್ಚನೆ ಮಾಡುವಂತದ್ದು ಲಿಂಗ ಇದ್ರೆ ಅದಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡುವುದು ಅಥವಾ
ವಿಭೂತಿಯಿಂದ ಅರ್ಚನೆ ಮಾಡುವುದು ಕೂಡ ವಿಶೇಷವಾಗಿ ನೀವು ಮಾಡಬಹುದು. ಈ ರೀತಿ ಸರಳವಾಗಿ ಮನೆಯಲ್ಲೇ ನೀವು ಕಡೆ ಕಾರ್ತಿಕ ಸೋಮವಾರವನ್ನ ಅಂತ್ಯ ಮಾಡಬಹುದು.
ಉಪವಾಸವನ್ನು ಒಂದು ಇರೋರು ರಾತ್ರಿ ಬಾಳೆಎಲೆ ಮೇಲೆ ಊಟವನ್ನು ಬಡಿಸಿ ಕೊಂಡು ಅದಕ್ಕೆ ಪೂಜೆ ಮಾಡಿ ನಂತ್ರ ನೀವು ಉಪಹಾರಅನ್ನ ಸೇವನೆ ಮಾಡಬಹುದು.ಕಾರ್ತಿಕ ಸೋಮವಾರದ ದಿನ ಯಾವ ರೀತಿ ಪೂಜೆ ಮಾಡಬೇಕು? ಯಾವ ರೀತಿ ನಾವು ಪ್ರವಾಸ ವನ್ನ ಇರಬೇಕು. ದೇವಸ್ಥಾನ ದಲ್ಲಿ ಯಾವ ರೀತಿಯ ದಂತ ದೀಪಾರಾಧನೆ ಗಳನ್ನು ಮಾಡಬೇಕು ಅಂತ ತಿಳಿಸಿ ಕೊಟ್ಟಿದ್ದೀನಿ.