ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ ಜೀವನ ಸುಂದರ

Featured Article

1) ಸೂರ್ಯ ಹುಟ್ಟುವ ಮೊದಲೇ ಎದ್ದು Active ಆಗಿ 2) ಬೆಳಗ್ಗೆ ಎದ್ದ ತಕ್ಷಣ mobile ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ 3) ಏಳುತ್ತಲೇ ಗೊಣಗಾಟ ಜಗಳ ಮಾಡದೆ ನಗು ಮುಖದಿಂದ ದಿನವನ್ನು ಆರಂಭಿಸಿ 4) ಎದ್ದ ನಂತರ walking ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿ .

5) ದಿನ 5 ನಿಮಿಷವಾದರೂ ಬಿಸಿಲಿಗೆ ಮೈ ಒಡ್ಡುವುದನ್ನು ಮರೆಯಬೇಡಿ 6) ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಒಂದು ಲೀಟರ್ ಅಂದರೆ ಸುಮಾರು ಮೂರರಿಂದ ನಾಲ್ಕು ಗ್ಲಾಸ್ ನೀರು ಕುಡಿಯಿರಿ 7)ಬೆಳಗ್ಗೆ ಯಾವಾಗಲೂ healthy Breakfast ಮಾಡಿ ಆದರೆ Diet ಅಂತ ಹೇಳಿ ಬೆಳಗಿನ ತಿಂಡಿಯನ್ನು ಯಾವತ್ತೂ ಮಾಡದೇ ಇರಬೇಡಿ .

8) ಆದಷ್ಟು junk food Fast food ಮತ್ತು ಹೊರಗಿನ ತಿಂಡಿಗಳಿಂದ ದೂರವಿರಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ 9) ನೀವು ಹೊರಗೆ ಹೋಗಿ ಕೆಲಸ ಮಾಡುವವರಾದರೆ ಎಷ್ಟೇ busy ಇದ್ದರೂ ಮನೆಯವರಿಗೆ ಒಂದು call ಮಾಡಿ ವಿಚಾರಿಸಿ 10) ಮನಸ್ಸಿಗೆ ಖುಷಿ ಕೊಡುವ ಒಂದು ಕೆಲಸವನ್ನು ಆದರೂ ಪ್ರತಿ ದಿನ ಮಾಡಿ

11) Negative ಮನೋಭಾವ ಇರುವವರ ಸಂಪರ್ಕ ಕಡಿಮೆ ಮಾಡಿ 12) ಇನ್ನೊಬ್ಬರ ಬಗ್ಗೆ ಹಿಂದಿನಿಂದ ಮಾತನಾಡುವುದನ್ನು ನಿಲ್ಲಸಿ.13) ರಾತ್ರಿ ವೇಳೆ ಭಾರಿ ಭೋಜನ ಮಾಡದೆ ಹಗುರವಾಗಿ ಊಟ ಮಾಡಿ 14) ಊಟ ಮಾಡಿದ ತಕ್ಷಣವೇ ನೀರು ಕುಡಿಯಬೇಡಿ ಊಟದ 45 ನಿಮಿಷ ಮೊದಲು ಅಥವಾ ಊಟದ 45 ನಿಮಿಷದ ನಂತರ ನೀರು ಕುಡಿಯಿರಿ

15) ರಾತ್ರಿ ಮಲಗುವ ಮೊದಲು ಮನಸ್ಸಿಗೆ ಹಿತ ಕೊಡುವಂತಹ music ಅಥವ ಪುಸ್ತಕ ಓದಿ 16) ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ 17) ಒಬ್ಬ ಮನುಷ್ಯನಿಗೆ ಕನಿಷ್ಠ 6 ಗಂಟೆಗಳ ನಿದ್ದೆ ಬೇಕೇ ಬೇಕು ಮತ್ತು ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಬಾರದು 18) ಯಾವುದೇ ರೀತಿಯ Tension ಇಲ್ಲದೆ ತೃಪ್ತಿಕರವಾಗಿ ನಿದ್ದೆಯನ್ನು ಮಾಡಿ ನಿದ್ದೆ ಚೆನ್ನಾಗಿ ಆದರೆ ದಿನವೆಲ್ಲ

ತುಂಬಾ Active ಆಗಿ ಇರಬಹುದು ಮತ್ತು ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.19) ದಿನದಲ್ಲಿ 10 ನಿಮಿಷವಾದರೂ ನಿಮಗೇ ಅಂತ ಮೀಸಲಿಡಿ.20) ಅದೆಂತಹುದೇ ಕಷ್ಟದ ಸಮಯದಲ್ಲೂ ಧನಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಕಾಣದ ಶಕ್ತಿ.ಕಾಣದ ಶಕ್ತಿ ನಮ್ಮನ್ನು ಸದಾ ಕಾಯುತ್ತಿದೆ

ಎಂಬುದನ್ನು ನಂಬಿ ಒಟ್ಟಿನಲ್ಲಿ ದಿನವನ್ನು ಸಿಡಿಮಿಡಿ ಸಿಟ್ಟಿನಿಂದ ಕಳೆಯದೆ ಆದಷ್ಟು ಖುಷಿಯಿಂದ ಕಳೆಯಿರಿ ನೀವು ಖುಷಿಯಾಗಿದ್ದರೆ ನಿಮ್ಮ ಸುತ್ತಮುತ್ತಲಿರುವ ಜನರು ಸಹ ಖುಷಿಯಿಂದ ಇರುತ್ತಾರೆ ಮುಖದಲ್ಲಿ ಒಂದು ಸಣ್ಣ ಮುಗುಳುನಗೆ ಇರಲಿ ಮನಸ್ಸಿನಲ್ಲಿ ಸಾಧಿಸುವ ಛಲ ಇರಲಿ

Leave a Reply

Your email address will not be published. Required fields are marked *