ಈ ವರ್ಷದ ಕೊನೆಯ ಅಮಾವಾಸ್ಯೆ ದಿನ ಮರೆತು ಕೂಡ ಈ ಕೆಲಸಗಳನ್ನು ಮಾಡಬೇಡಿ
ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡುವುದಾದರೆ ಒಳ್ಳೆಯ ದಿನ, ಒಳ್ಳೆಯ ಮುಹೂರ್ತವನ್ನು ನೋಡೇ ನೋಡುತ್ತೇವೆ ಅಲ್ಲವೇ ಸ್ನೇಹಿತರೆ ಹೌದು ಯಾಕೆಂದರೆ ನಾವು ಮಾಡುವ ಕೆಲಸ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ನಿರ್ವಿಘ್ನವಾಗಿ ಮುಂದುವರಿಯಬೇಕು ಯಶಸ್ಸನ್ನು ಕಾಣಬೇಕು ಎನ್ನುವ ಒಂದು ಕಾರಣದಿಂದ. ಸಾಮಾನ್ಯವಾಗಿ ಉತ್ತಮ ದಿನವನ್ನು ನೋಡಿ ಒಳ್ಳೆಯ ಕಾರ್ಯಗಳನ್ನು ಆರಂಭ ಮಾಡುತ್ತೇವೆ ಆದರೆ ಅಮಾವಾಸ್ಯೆ ದಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಹಿರಿಯರು ಹೇಳುವುದುಂಟು. ಅದು ನಿಜ ಕೂಡ ಹೀಗಾಗಿ ಯಾವುದಾದರೂ ಒಂದು ಕೆಲಸವನ್ನು ಮಾಡುವುದಾದರೆ ಅಮಾವಾಸ್ಯೆ ದಿನ ಮಾತ್ರ ಮಾಡಬೇಡಿ ಎಂದು ಹಿರಿಯರು ಪದೇಪದೇ ನಮ್ಮನ್ನು ಎಚ್ಚರಿಸುತ್ತಿರುತ್ತಾರೆ, ಯಾಕೆಂದರೆ ಇದರಿಂದ ತೊಂದರೆಗಳು ವಿಘ್ನಗಳು ಸಾಕಷ್ಟು ಕಾಡುತ್ತವೆ ಕೆಲವರಿಗೆ ಕಾಡು ಬೆಟ್ಟ ತಿರುಗುವ ಅಭ್ಯಾಸ ಇರುತ್ತದೆ ಆದರೆ ಅಮಾವಾಸ್ಯೆಯ ದಿನ ಮುಖ್ಯವಾಗಿ ರಾತ್ರಿಹೊತ್ತು ಅಂತಹ ಪ್ರದೇಶಗಳಿಗೆ ಹೋಗಬಾರದು, ಇನ್ನು ಅಮಾವಾಸ್ಯೆ ದಿನ ಬೆಳಗ್ಗೆ ತುಂಬಾ ಹೊತ್ತಿನ ತನಕ ಮಲಗಬಾರದು ಇದರಿಂದ ದರಿದ್ರ ಕಾಡುತ್ತದೆ
ಇನ್ನು ಸಾಧ್ಯವಾದಷ್ಟು ಅಮವಾಸ್ಯೆ ದಿನ ಯಾರೊಂದಿಗೂ ಜಗಳ ಬೇಡ, ಅವಮಾನ ಮಾಡಲು ಹೋಗಬೇಡಿ ಹಾಗೆ ಆದಷ್ಟು ಶಾಂತವಾಗಿದ್ದರೆ ಒಳ್ಳೆಯದು ಇನ್ನು ಅಮಾವಾಸೆ ತಿಥಿ ಮುಖ್ಯವಾಗಿ ಪಿತೃಗಳಿಗೆ ಅರ್ಪಿತವಾದಂತಹ ತಿಥಿ. ಆದ್ದರಿಂದ ಸಾಧ್ಯವಾದಷ್ಟು ಆ ದಿನ ನಿಮ್ಮ ಮನೆಯ ಪಿತೃಗಳನ್ನು ಮತ್ತು ಹಿರಿಯರನ್ನು ನೆನಪಿಸಿಕೊಂಡು ಅವರ ಗೌರವಾರ್ಥ ದರ್ಪಣಾದಿಗಳನ್ನು ಬಿಡಿ ಹಾಗಾಗಿ ಆ ದಿನ ಹೊರಗಡೆ ಯಾರು ಹೆಚ್ಚು ಹೋಗಬಾರದು ಎಂದು ಹೇಳುತ್ತಾರೆ
ಅಮಾವಾಸ್ಯೆ ಎಂದರೇ ಉತ್ತಮ ಕಾರ್ಯಗಳನ್ನು ಮಾಡಲು ಒಳ್ಳೇ ದಿನ ಅಲ್ಲ ಎನ್ನುವ ಒಂದು ನಂಬಿಕೆ ಕೂಡ ಇದೆ ಹಾಗಾಗಿ ಆ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದು ಶ್ರೇಯಸ್ಕರವಲ್ಲ ಅನ್ನುವ ಮಾತು ಕೂಡ ಇದೆ ಮುಖ್ಯವಾಗಿ ಪೊರಕೆಯನ್ನು ಅಮವಾಸ್ಯೆಯ ದಿನ ಮನೆಗೆ ತರಬಾರದು, ಲಕ್ಷ್ಮಿಗೂ ಪೊರಕೆಗು ಸಂಬಂಧ ಇರುವ ಕಾರಣ ಅಮಾವಾಸ್ಯೆ ದಿನ ಪೊರಕೆಯನ್ನು ಮನೆಗೆ ತಂದರೆ ಲಕ್ಷ್ಮೀದೇವಿಗೆ ಅದು ಇಷ್ಟವಾಗುವುದಿಲ್ಲ ಎನ್ನುವ ನಂಬಿಕೆ ಕೂಡ ಇದೆ ಇನ್ನೂ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುವುದರಿಂದ ಅಮಾವಾಸ್ಯೆಯ ದಿನ ಅನಗತ್ಯ ವಸ್ತುಗಳ ಮೇಲೆ ಅನಾರೋಗ್ಯಗಳ ಮೇಲೆ ಖರ್ಚಾಗುವ ಸಾಧ್ಯತೆಗಳು ಇದೆ. ಆದ್ದರಿಂದ ಇಂತಹ ಕೆಲಸವನ್ನು ಅಂದರೆ ಪೊರಕೆ ತರುವ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡಬಾರದು
ಇನ್ನೂ ಸಾಧ್ಯವಾದರೆ ಗೋದಿಹಿಟ್ಟು ಹಾಗೂ ಉಪ್ಪನ್ನು ಕೂಡ ಅಮಾವಾಸ್ಯೆ ದಿನ ಮನೆಗೆ ತರಬಾರದು, ಇನ್ನು ತಲೆಗೆ ಅಮಾವಾಸ್ಯೆ ದಿನ ಎಣ್ಣೆಯನ್ನು ಹಚ್ಚಿಕೊಳ್ಳದೆ ಇರುವುದೇ ಉತ್ತಮ, ಅಮಾವಾಸ್ಯೆ ದಿನ ಎಣ್ಣೆಯನ್ನು ದಾನಮಾಡುವುದರಿಂದ ಶನಿಯ ಉತ್ತಮ ಪ್ರಭಾವ ಹೆಚ್ಚಾಗುತ್ತದೆ ಅಲ್ಲದೆ ಶನಿ ದೋಷ ನಿವಾರಣೆ ಕೂಡ ಆಗುತ್ತದೆ. ಸಾಮಾನ್ಯವಾಗಿ ಶುಭಕಾರ್ಯಗಳಿಗಾಗಿ ವಸ್ತುಗಳನ್ನು ಖರೀದಿಸಬೇಕು ಎಂದರೆ ಅಮಾವಾಸ್ಯೆ ಒಳ್ಳೆಯದಲ್ಲ ಆದರೆ ಪಿತೃ ಕರ್ಮಗಳಿಗೆ ಪಿತೃ ಗಳಿಗಾಗಿ ದಾನ ಧರ್ಮ ಮಾಡುವುದಾದರೆ ಅಮಾವಾಸ್ಯೆ ಶ್ರೇಷ್ಠವಾದ ದಿನ ಆ ದಿನ ಸಾಧ್ಯವಾದಷ್ಟು ನಿಮ್ಮ ಪಿತೃಗಳ ಹೆಸರಿನಲ್ಲಿ ದಾನ-ಧರ್ಮಧಿಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ
ಇನ್ನು ಸಾಧ್ಯವಾದಷ್ಟು ನಿಷಿದ್ದ ಪದಾರ್ಥಗಳನ್ನು ಅಮಾವಾಸ್ಯೆಯ ದಿನ ಸೇವಿಸಬಾರದು , ಅಂದರೆ ಮುಖ್ಯವಾಗಿ ಮಾಂಸ ಮತ್ತು ಮಧ್ಯ ಇನ್ನಿತರ ನಿಷಿದ್ಧ ಪದಾರ್ಥಗಳನ್ನು ಅಮಾವಾಸ್ಯೆ ದಿನ ಸೇವಿಸದೆ ಇರುವುದೇ ಶ್ರೇಯಸ್ಕರ, ಯಾಕೆಂದರೆ ಅಮಾವಾಸ್ಯೆ ಅದರಲ್ಲೂ ಕೂಡ ಇಂತಹ ನಿಸಿದ್ದ ಪದಾರ್ಥಗಳ ಸೇವನೆಯಿಂದ ಶರೀರದಲ್ಲಿ ಅಸಮತೋಲನ ಉಂಟಾಗಿ ಅನಗತ್ಯವಾದಂತಹ ಅನಾರೋಗ್ಯಗಳು ಇನ್ನೂ ನಕಾರಾತ್ಮಕ ಶಕ್ತಿಗಳ ಛಾಯೆ ನಿಮ್ಮ ಮೇಲೆ ಬೀಳುತ್ತದೆ ಎನ್ನುವ ಒಂದು ಕಾರಣದಿಂದ ಹೀಗಾಗಿ ಅಮಾವಾಸ್ಯೆಯ ದಿನ ಸಾಧ್ಯವಾದಷ್ಟು ಇಂತಹ ಕೆಲಸಗಳನ್ನು ಮಾಡಬಾರದು
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯಶಾಸ್ತ್ರ ನಿಮ್ಮ ಮನಸ್ಸಿನಲ್ಲಿ ಯಾವುದೇ ಅಡಚಣೆ ಉಂಟಾಗುತ್ತಿದ್ದರೆ ಅದಕ್ಕೆ ಪರಿಹಾರವನ್ನು ತಿಳಿಯಲು ಬಯಸುತ್ತಿದ್ದರೆ ಈ ಕೂಡಲೇ ಗುರುಗಳ ನಂಬರಿಗೆ ಕರೆ ಮಾಡಿ ಈಗಲೇ ಸಮಾಲೋಚನೆ ಪಡೆಯಿರಿ 9916852606