ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಕಳೆದುಕೊಂಡಿದ್ದನ್ನು ಮರಳಿ ನೀಡುವ ತಾಯಿ ಈ ಕ್ಷೇತ್ರದ ಮಹಿಮೆ ನೋಡಿ

Recent Posts

ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಕಳೆದುಕೊಂಡಿದ್ದನ್ನು ಮರಳಿ ನೀಡುವ ತಾಯಿ ಈ ಕ್ಷೇತ್ರದ ಮಹಿಮೆ ನೋಡಿ

ನಮಸ್ಕಾರ ಸ್ನೇಹಿತರೆ,ಜೀವನದಲ್ಲಿ ಕಳೆದುಕೊಂಡದ್ದನ್ನು ಮರಳಿ ಪಡೆಯಲು ಅಥವಾ ನಿಮ್ಮ ಜೀವನದಲ್ಲಿ ನೀವು ಕಳೆದುಕೊಂಡಿದ್ದರೂ ಸಹ ಈ ಪುಣ್ಯಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ನೀವು ಕಳೆದುಕೊಂಡಿದ್ದನ್ನು ಮರಳಿ ಪಡೆಯುವಂತೆ ಮಾಡುತ್ತಾಳೆ ಇಲ್ಲಿ ನೆಲೆಸಿರುವ ತಾಯಿಯು ಆ ಪುಣ್ಯಕ್ಷೇತ್ರ ಯಾವುದು ಆ ಪುಣ್ಯಕ್ಷೇತ್ರದ ಇತಿಹಾಸ ವೇನ್ನು ಅಲ್ಲಿನ ವಿಶೇಷ ಮಾಹಿತಿಯನ್ನು ನಾನು ನಿಮಗೆ ಹೇಳುತಿನಿ
ಹೌದು ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವoತಹ ಪುಣ್ಯಕ್ಷೇತ್ರ ನಮ್ಮ ಕರ್ನಾಟಕದಲ್ಲಿದೆ ಅದೇ ನಮ್ಮ ಹೆಮ್ಮೆಯ ಸಂಗತಿ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವ ಪುಣ್ಯ ಪವಿತ್ರವಾದ ಕ್ಷೇತ್ರ ಇದು ಇಲ್ಲಿನ ಮೂರ್ತಿಯನ್ನು ವಿಶೇಷವಾದಂತಹ ಔಷಧೀಯ ಗುಣಗಳುಳ್ಳ ಮರಗಳ ರಸವನ್ನು ತೆಗೆದು ಅದನ್ನು ಮಣ್ಣಿನಲ್ಲಿ ಬೆರೆಸಿ ಆದ್ದರಿಂದ ಕಲ್ಲಿನಷ್ಟೇ ಗಟ್ಟಿಯಾಗಿರುವಂತೆ ಮಾಡಿರುವ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ

ಈ ಕ್ಷೇತ್ರದ ಮಹಿಮೆ ಅಪಾರ ನಂಬಿ ಬಂದ ಭಕ್ತರ ಪಾಲಿಗೆ ಆಶಾಕಿರಣ ಇಲ್ಲಿಗೆ ದೇಶ-ವಿದೇಶದಿಂದ ಭಕ್ತರು ತಮ್ಮ ಕಷ್ಟಗಳನ್ನು ತಾಯಿ ಯ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ವನ್ನ ಕಂಡುಕೊಂಡಿದ್ದಾರೆ ಯಾರಿಗೆ ಶತ್ರುಭಯ ಜೀವನದಲ್ಲಿ ಹಣಕಾಸಿನಲ್ಲಿ ಏಳಿಗೆಯಾಗದೇ ಕಷ್ಟ ಪಡುತ್ತಿರುತ್ತಾರೆ ಹಾಗೂ ಕೆಲಸದಲ್ಲಿ ವ್ಯಾಪಾರದಲ್ಲಿ ನಷ್ಟ ಬಂದಿ ಜೀವನವೇ ಬೇಡ ಎಂದು ಒಮ್ಮೆ ಈ ಮಹಿಮಾ ಮೃತ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಾಕು ನಿಮ್ಮ ಕಷ್ಟಗಳು ಕಳೆಯುತೆಂದು ತಿಳಿದುಕೊಳ್ಳಿ ಇನ್ನು ಈ ಮಹಾ ಪವಿತ್ರ ಪುಣ್ಯಕ್ಷೇತ್ರ ಇರುವುದು ಕರ್ನಾಟಕದಲ್ಲಿ ಎನ್ನುವುದು ಹೆಮ್ಮೆಯ ವಿಷಯ ಆ ದಿವ್ಯ ಪುಣ್ಯಕ್ಷೇತ್ರವೆ ಶ್ರೀ ಪೊಳಲಿ ರಾಜರಾಜೇಶ್ವರಿಯ ದೇವಾಲಯ ಇಲ್ಲಿ ಅಮ್ಮನವರು ನೆಲೆಸಿ ಬಂದ ಭಕ್ತರನ್ನು ಸಲಹೆ ಜೀವನಕ್ಕೆ ಬೆಳಕ್ ಆಗುತ್ತಿದ್ದಾರೆ

ಅಮ್ಮನ ಇತಿಹಾಸ ಕೇಳಿದರೆ ಸಾಕು ಜನ್ಮ ಜನ್ಮಗಳ ಪಾಪವೇ ಕಳೆದು ಜೀವನದಲ್ಲಿ ಮಹಾಯೋಗ ಕೂಡಿಬರುತ್ತದೆ ಪೊಳಲಿ ರಾಜರಾಜೇಶ್ವರಿ ಅಮ್ಮನವರು ಎಷ್ಟು ಶಕ್ತಿ ಶಾಲಿ ಹಾಗೂ ಕರುಣಾಮಯಿ ಅಂತ ತಿಳಿಯಬೇಕಾದರೆ ಈ ಕಥೆಯನ್ನು ಒಮ್ಮೆ ಕೇಳಿ ಸುಮಾರು ಎಂಟನೆಯ ಶತಮಾನದಲ್ಲಿ ಸುರತ ಎಂಬ ಮಹಾರಾಜನು ತನ್ನ ಸ್ವಂತ ಮಂತ್ರಿಯ ಕುತಂತ್ರಕ್ಕೆ ಬಲಿಯಾಗಿ ಸಕಲವನ್ನು ಕಳೆದುಕೊಂಡು ಸುಮೇಧ ಎಂಬ ಋಷಿ ಆಶ್ರಯದಲ್ಲಿ ಜೀವನ ಕಳೆಯುವಂತೆ ಆಗುತ್ತದೆ ಸುಮೇಧ ಋಷಿಗಳ ಮಾತಿನಂತೆ ಸುರತ ರಾಜರು ತಪಸ್ಸನ್ನು ಮಾಡಿ ಅಮ್ಮನವರು ಕನಸಿನಲ್ಲಿ ಬಂದು ತಿಳಿಸಿದಂತೆ ಮಣ್ಣಿನಿಂದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಆರಾಧಿಸಲು ಶುರುಮಾಡುತ್ತಾರೆ ಆಗ ದೇವಿ ಪ್ರಸನ್ನಳಾಗಿ ಸುರತ ಮಹಾರಾಜರು ಭೋಗಭಾಗ್ಯ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂದು ಉಲ್ಲೇಖವಾಗಿದೆ

ಸುರತ ಮಹಾರಾಜರು ದೇವಿಯ ಮೂರ್ತಿಯನ್ನು ಮಣ್ಣಿನಿಂದ ಅಂದರೆ ಇದಕ್ಕೆ ವಿಶೇಷ ವಾದಂತಹ ಔಷಧೀಯ ಗುಣವುಳ್ಳ ಮರದ ರಸವನ್ನು ಹಾಕಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಹಾಗೂ ಇದರ ದೇವಿಯ ಕಣ್ಣನ್ನು ಮಾಣಿಕ್ಯ ದಿಂದ ಮಾಡಿದ್ದಾರೆ ಎಂಬ ಉಲ್ಲೇಖವಿದೆ ಇಡೀ ಭಾರತಕ್ಕೆ ಇದೊಂದೇ ಅತಿ ಎತ್ತರವಾದ ಮಣ್ಣಿನಿಂದ ಮಾಡಿದಂತಹ ಮೂರ್ತಿ ಯಾಗಿದ್ದು ಈ ಮೂರ್ತಿಗೆ ವಿಶೇಷವಾದಂತಹ ಶಕ್ತಿ ಇದೆ ಈ ಮೂರ್ತಿಗೆ ವಿಶೇಷವಾದ ಶಕ್ತಿ ಇದ್ದು ಇಲ್ಲಿ ನಡೆಯುವಂತ ಉತ್ಸವವು ಬಹಳನೇ ಜಗತ್ಪ್ರಸಿದ್ಧವಾಗಿದೆ ಇಲ್ಲಿಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಅದಕ್ಕೆ ಪರಿಹಾರವನ್ನೂ ಸಹ ಕಂಡುಕೊಂಡಿದ್ದಾರೆ ಇಡೀ ಭಾರತಕ್ಕೆ ಇದೊಂದೇ ಅತಿ ಮಣ್ಣಿನ ವಿಗ್ರಹ ಎಂಬ ಹೆಗ್ಗಳಿಕೆಗೆ ನಮ್ಮ ಪೊಳಲಿ ರಾಜರಾಜೇಶ್ವರಿಯ ದೇವಿಯ ಮೂರ್ತಿಯು ಪ್ರಖ್ಯಾತಿ ಆಗಿದೆ ಈಗಲೂ ಸಹಾಯ ವಿಗ್ರಹಕ್ಕೆ ಹಲವು ವರ್ಷಗಳ ಹಿಂದೆ ಬಳೆಸಿದಂತೆ ಅಂದರೆ ಮರದ ರಸಗಳಿಂದ ಮಾಡಿದಂತಹ ಮಣ್ಣುನ್ನ ಲೇಪನವನ್ನು ಈ ಮೂರ್ತಿಗೆ ಲೇಪಿಸಲಾಗುತ್ತದೆ ಯಾರು ತಾಯಿಯನ್ನು ನೆನೆದು ಆಕೆಯನ್ನು ಆರಾಧಿಸುತ್ತಾರೆ ಅವರ ಕಷ್ಟಗಳು ಅಂದಿಗೆ ಕೊನೆಗೊಳ್ಳುತ್ತವೆ ಇಂತಹ ಪವಿತ್ರ ವಾದ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ

Leave a Reply

Your email address will not be published. Required fields are marked *