ತೆಂಗಿನಕಾಯಿಯ ಸಂಕೇತದ ಬಗ್ಗೆ ಗೊತ್ತಿಲ್ಲದ ಸೀಕ್ರೆಟ್ ವಿಷಯ

ತೆಂಗಿನಕಾಯಿಯ ಸಂಕೇತದ ಬಗ್ಗೆ ಗೊತ್ತಿಲ್ಲದ ಸೀಕ್ರೆಟ್ ವಿಷಯ

ನಮಸ್ಕಾರ ಸ್ನೇಹಿತರೆ, ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಗೆ ಅದರದೇ ಆದ ಪ್ರಮುಖ ಸ್ಥಾನವಿದೆ ತೆಂಗಿನಕಾಯಿಯನ್ನು ನಾವು ದೇವರ ಪೂಜೆಗೆ ಬಳಸುತ್ತೇವಿ, ಮುಖ್ಯವಾಗಿ ಶುಭಕಾರ್ಯಗಳಿಗೂ ಕೂಡ ತೆಂಗಿನಕಾಯಿಯನ್ನು ಬಳಸುತ್ತೇವೆ, ಅದೇ ರೀತಿ ಅಶುಭಕಾರ್ಯಗಳಿಗೂ ಕೂಡ ತೆಂಗಿನಕಾಯಿಯನ್ನು ಬಳಸುತ್ತೀವಿ . ಈ ಒಂದು ತೆಂಗಿನಕಾಯಿಯನ್ನ ಒಂದು ಕಾರ್ಯಕ್ರಮಗಳಲ್ಲಿ , ಶುಭ ಸಮಾರಂಭದಲ್ಲಿ ಆಗಿರಬಹುದು ಅಥವಾ ನಾವು ಪೂಜೆ ಮಾಡುವ ಸಂದರ್ಭದಲ್ಲಿ ಆಗಿರಬಹುದು ತೆಂಗಿನಕಾಯನ್ನು ನಾವು ಹೊಡೆದಾಗ ಸಿಗುವಂತಹ ಸೂಚನೆ ಏನ್ ಕೊಡುತ್ತೆ ಆ ಒಂದು ತೆಂಗಿನಕಾಯಿಯನ್ನ ಹೊಡೆದಾಗ ಸೂಚನೆಗೆ ಏನೇನೋ ಒಂದು ಒಳ್ಳೇದಾಗುತ್ತಾ , ಕೆಟ್ಟದಾಗುತ್ತಾ ಅಥವಾ ಆ ಸಮಸ್ಯೆಗಳು ಎನ್ನುವುದು ಯಾವ ರೀತಿ ಬರುತ್ತದೆ ಇದರ ಒಂದು ಸೂಚನೆ ಏನೋ ಮುಖ್ಯವಾಗಿ ತೆಂಗಿನಕಾಯಿ ಹೊಡೆಯುವಾಗ ಸಿಗುವಂತ ಸೂಚನೆ ಏನು ಹೇಳುತ್ತೆ ಅದರ ಅರ್ಥವೇನು ,ಅದರ ಹಿನ್ನೆಲೆ ಏನು ತಿಳಿಸಿಕೊಡುತ್ತೇವೆ.

ತೆಂಗಿನಕಾಯಿಯನ್ನ ನಾವು ಹೊಡೆದಾಗ ಅದು ಕೊಳೆತ್ತಿದ್ದರೆ ಅಥವಾ ಹಾಳಾಗಿದ್ದರೆ ಅದು ಅಶುಭಶಕುನ ಎಂದು ಹೇಳಲಾಗುತ್ತೆ. ಹಾಗಾದರೆ ಇದಕ್ಕೆ ಕಾರಣ ಇದು ಒಳ್ಳೆಯದ್ದ ಕೆಟ್ಟದ್ದ ಎಂದು ಎಲ್ಲು ಕೂಡ ಹೇಳಿಲ್ಲ , ಆದ್ರೆ ಅದರ ಬಗ್ಗೆ ನಮಗೆ ಅಗಾತ ಇದ್ದೇ ಇರುತ್ತೆ ಆದರೆ ತೆಂಗಿನಕಾಯಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಹೊಡೆದಾಗ ಅದು ಏನಾದರೂ ಕೊಳ್ತೋಗಿದ್ರೆ ಅದರಿಂದ ಏನು ತೊಂದರೆ ಆಗುವುದಿಲ್ಲ ಅದು ಕೂಡ ಪ್ರಕೃತಿಯ ನಿಯಮ ಬದಲಾಗಿ ಕೆಲವೊಂದು ಸಂದರ್ಭದಲ್ಲಿ ಮಾತ್ರ ಹೀಗೆ ತೆಂಗಿನಕಾಯಿ ಕೊಳ್ತೋಗಿದ್ರೆ ಮಾತ್ರ ಅಶುಭ ಎಂದರೆ ಎಲ್ಲಿಗಾದರೂ ದೂರ ಪ್ರಯಾಣ ಬಳಸುವಾಗ ವಾಹನಕ್ಕೆ ಪೂಜೆ ಮಾಡಿ ತೆಂಗಿನಕಾಯಿಯನ್ನ ಹೊಡೆದು ಹಣ್ಣು ಒಂದು ಹಿಡುವ ಪದ್ಧತಿ ರೂಡಿಯಲ್ಲಿದೆ ಹೀಗೆ ಮಾಡುವಾಗ ಏನಾದರೂ ಕಾಯಿ ಹಾಳಾಗಿದ್ದರೆ ಮಾತ್ರ ಅದು ಯೋಚಿಸುವಂತಹ ವಿಷಯ.

ಏಕೆಂದರೆ ನಾವು ಹೋಗುವಂತ ಮಾರ್ಗದಲ್ಲಿ ಏನಾದರೂ ತೊಂದರೆ ಆಗಬಹುದೇ ಎಂಬುವುದು ಒಂದು ಸಂಕೇತವಾಗಿದೆ. ಅದರಿಂದ ನೀವು ಅಂದರೆ ಒಂದು ತೆಂಗಿನಕಾಯಿಯನ್ನು ಹೊಡೆದಾಗ ಪುನಹ ಸ್ಥಾನ ಮಾಡಿ ವಾಹನ ಮತ್ತೆ ತೊಳೆದು ಮುಂದೆ ಸಾಗಬೇಕಾಗುತ್ತದೆ ಎಲ್ಲಾದರೂ ಪ್ರಯಾಣ ಮಾಡಬೇಕು, ದೂರದ ಪ್ರಯಾಣ ಮಾಡಬೇಕು, ಮಾಡಬೇಕು ಅನ್ಕೊಂಡಿದ್ದ ಆ ಸಂದರ್ಭದಲ್ಲಿ ಪೂಜೆ ಮಾಡುವಾಗ ತೆಂಗಿನಕಾಯಿಯನ್ನ ಏನಾದರೂ ಕೊಳ್ತೋಗಿದ್ರೆ ನಾವು ಹೇಳಿರುವಂತಹ ಕೆಲಸವನ್ನು ಮಾಡಿ ಕಂಡಿತವಾಗಿಯೂ ಒಳ್ಳೆದಾಗುತ್ತದೆ.

ಅದೇ ರೀತಿ ಇನ್ನೊಂದು ವಿಚಾರ ಕೂಡ ನಮ್ಮ ಸಂಪ್ರದಾಯದಲ್ಲಿ ರೂಡಿಯಲ್ಲಿದೆ ಏನಪ್ಪಾ ಅಂದರೆ ಒಂದು ತೆಂಗಿನಕಾಯಿಯನ್ನ ದೃಷ್ಟಿಯನ್ನು ತೆಗೆಯುವುದಕ್ಕೆ ಬಳಸುತ್ತಾರೆ ಹಿರಿಯರು ಕಾಯಿಯ ಮೇಲೆ ಕರ್ಪೂರ ಹಚ್ಚಿ ದೃಷ್ಟಿ ತೆಗೆಯುತ್ತಾರೆ ಹೀಗೆ ದೃಷ್ಟಿ ತೆಗೆಯುವಂತಹ ಸಂದರ್ಭದಲ್ಲಿ ಕಾಯಿ ಅದು ಕೆಟ್ಟಿದ್ದರೆ ಅದು ಕೂಡ ಅಶುಭ ಎಂದು ಹೇಳಲಾಗುತ್ತೆ ಜೊತೆಗೆ ಇನ್ನೂ ಮನೆಯಲ್ಲಿ ಕಾಯಿ ಹೊಡೆದಾಗ ಅಥವಾ ದೇವಸ್ಥಾನದಲ್ಲಿ ಕಾಯಿ ಹೊಡೆದಾಗ ಆ ಕಾಯಿಯಲ್ಲಿ ಅಪರೂಪಕ್ಕೆ ಹೂವು ಎನ್ನುವುದು ಬರುತ್ತದೆ ಕಾಯಿ ಹೊಡೆದವರು ಕನ್ಯಾ ಹಾಗಿದ್ರೆ ಅವರಿಗೆ ಶ್ರೀಘ್ರದಲ್ಲೆ ಮದುವೆ ಸಿಹಿಸುದ್ದಿ ಬರುತ್ತೆ ಅಂತ ಹೇಳಲಾಗುತ್ತೆ.

ಹಾಗೆಯೇ ದಂಪತಿಗಳು ಕಾಯಿ ಹೊಡೆದಾಗ ಹೂವು ಬಂದಿದ್ರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತೆ ಅಂತ ಹೇಳಲಾಗುತ್ತೆ ಇದೇ ರೀತಿ ಒಳ್ಳೆಯ ಸುದ್ದಿ ಏನಾದರೂ ಸಿಗಬಹುದು ಮುಖ್ಯವಾಗಿ ದಂಪತಿ ಅದೇ ರೀತಿ ಕನ್ಯೆ ಏನಾದ್ರೂ ಈ ರೀತಿಯಾಗಿ ಮಾಡಿದರೆ ಅವರಿಗೆ ಈ ರೀತಿಯಾಗಿ ಶುಭಸೂಚನೆ ಸಿಗುತ್ತೆ ಅಂತ ಜ್ಯೋತಿಷ್ಯಶಾಸ್ತ್ರ ಹೇಳುತ್ತೆ. ಇನ್ನೊಂದು ವಿಷಯ ಏನಪ್ಪಾ ಎಂದರೆ ತೊಟ್ಟಿಲು ಕಾಯಿ ಹೊಡೆದಾಗಲೂ ಕೂಡ ಅವರಿಗೆ ಶೀಘ್ರದಲ್ಲೇ ಸಂತಾನ ಭಾಗ್ಯ ಸಿಗುತ್ತೆ ಅಂತ ಹೇಳಬಹುದು ಹಾಗೆ ಭೂಮಿಪೂಜೆ ಮಾಡುವಾಗಲೂ ಸಹ ಹೂ ಏನಾದ್ರೂ ಬಂದಿದ್ರೆ ನಿರ್ವಿಘ್ನವಾಗಿ ಮನೆಯ ಕಟ್ಟಡದ ಕಾರ್ಯ ಜರಗುತ್ತದೆ ಎಂದು ಅರ್ಥ.
ಜೊತೆಗೆ ನರದೃಷ್ಟಿ ದೋಷ ಏನಾದ್ರೂ ದೋಷಗಳು ಇದ್ರೆ ಅದು ಕೂಡ ನಿರ್ವಹಣೆ ಆಗುತ್ತೆ ಎಂದು ಹೇಳಲಾಗುತ್ತೆ ಆ ಸಂದರ್ಭದಲ್ಲಿ ಕಾಯಿ ಹೊಡೆದಾಗ ಕೆಟ್ಟಿದ್ದರೆ ಮನೆಯಲ್ಲಿ ಹೆಚ್ಚಾಗಿ ದೃಷ್ಟಿದೋಷಗಳು ಇದೆ ಎಂದು ಒಂದು ಅರ್ಥ ಕೂಡ ತಿಳಿಸುತ್ತೆ. ಮುಖ್ಯವಾಗಿ ಗಣಪತಿ ಮುಂದೆ ವ್ರತ ಮಾಡಿ ಮಂಡಲಗಳಲ್ಲಿ ತೆಂಗಿನ ಕಾಯಿ ಇಟ್ಟು ಪೂಜೆ ಮಾಡಿದಾಗ ಏನಾದರೂ ಕೆಟ್ಟು ಹೋಗಿದ್ದರೆ ಈ ಒಂದು ಕಾರ್ಯ ಅವರಿಗೆ ಒಳ್ಳೆಯದಲ್ಲ, ಏನಾದ್ರೂ ಅನ್ಕೊಂಡು ಅವರು ಪೂಜೆಯನ್ನು ನೆರವೇರಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಕಾಯಿ ಕೆಟ್ಟು ಹೋಗಿದ್ದರೆ ಆ ಕಾರ್ಯ ನೆರವೇರುವುದಿಲ್ಲ ಅಂತ ಅರ್ಥ. ಪ್ರತಿಯೊಬ್ಬರಿಗೂ ಗೊತ್ತಾಗಿರಬಹುದು. ತೆಂಗಿನಕಾಯಿ ಹೊಡೆದಾಗ ಕೊಡುವಂತಹ ಸೂಚನೆ ಅದರ ಒಂದು ಅರ್ಥವೇನು ಕೊಡುತ್ತೆ ತೆಂಗಿನಕಾಯಿ ಹೊಡೆದಾಗ ಕೆಟ್ಟು ಹೋಗಿದ್ದರೆ ಅಥವಾ ಹೂವು ಬಂದಿದ್ರೆ ಇದರ ಅರ್ಥವೇನು ಯಾರು ಹೊಡುದ್ರೆ ಏನಾಗುತ್ತೆ ಎಲ್ಲವೂ ಕೂಡ ನಿಮಗೆ ಗೊತ್ತಾಗಿರಬಹುದು.

Leave A Reply

Your email address will not be published.