ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ತನ್ನ ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನೋಡಿಕೊಳ್ಳುತ್ತಿದ್ದ. ಆ ರಾಜನಿಗೆ ಬೇಟೆಯಾಡುವ ಹವ್ಯಾಸವಿತ್ತು. ವಾರದಲ್ಲಿ 1 ದಿನ ತನ್ನ ಸೈನಿಕ ಪರಿವಾರದವರೊಂದಿಗೆ ಬೇಟೆಯಾಡಲು ಕಾಡಿಗೆ ಹೋಗುತ್ತಿದ್ದ ಬೆಳಗಿನಿಂದ ಸಂಜೆಯವರೆಗೂ ಬೇಟೆಯಾಡಿ ಕಾಡಿನಲ್ಲಿ ಕಾಲ ಕಳೆದು ಅರಮನೆಗೆ ಸಂತೋಷದಿಂದ ಮರಳುತ್ತಿದ್ದ 1 ದಿನ ರಾಜ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ತನ್ನ ಸೈನಿಕರಿಂದ ಬೇರ್ಪಟ್ಟನು ದಟ್ಟಕಾಡಿನಲ್ಲಿ ಯಾವ ಕಡೆಗೆ ಹೋಗಬೇಕು ಎಂದು ತಿಳಿಯದೆ ಗೊಂದಲಕ್ಕೊಳಗಾದ ಯಾರಾದರೂ ತನ್ನ ಸಹಾಯಕ್ಕೆ ಬರಬಹುದು ಎಂದು ಯಾರಿದ್ದೀರಿ? ಯಾರಿದ್ದೀರಿ? ನಾನು ಮಹಾರಾಜ ಯಾರಾದರೂ ಬಂದು ಸಹಾಯ ಮಾಡಿ ಎಂದು ಚೀರತೊಡಗಿದ.
ಬಹಳ ಸಮಯ ಹೀಗೆ ಚೀರಿದರು. ಯಾರಿಗೂ ಅದು ಕೇಳಲಿಲ್ಲ. ಆದರೆ ರಾಜನಿಗೆ ತುಂಬಾ ಬಾಯಾರಿಕೆಯಾಗತೊಡಗಿತ್ತು. ನೀರಿಗಾಗಿ ಸುತ್ತಮುತ್ತ ಎಲ್ಲ ಕಡೆ ಹುಡುಕಾಡಿದ. ಆದರೆ ಎಲ್ಲೂ ನೀರು ಸಿಗಲಿಲ್ಲ. ಏನು ಮಾಡುವುದೆಂದು ತಿಳಿಯದೆ ರಾಜ ಯೋಚಿಸತೊಡಗಿದ. ಸುತ್ತಮುತ್ತ ನೋಡಿದಾಗ ಒಂದು ಮರವು ತುಂಬಾ ಹಸಿರಿನಿಂದ ಕೂಡಿತ್ತು. ರಾಜ್ ಅದರ ಬಳಿಗೆ ಹೋಗಿ ನೋಡಿದ ಆ ಮರದ ಒಂದು ಟೊಂಗೆ ಎಲೆಯಿಂದ ಹನಿ ಹನಿಯಾಗಿ ನೀರು ಬೀಳುತ್ತಿತ್ತು.
ರಾಜ ತಕ್ಷಣ ಕೆಲವು ಎಲೆಗಳನ್ನು ಜೋಡಿಸಿ ನೀರಿನ ಹನಿಗಳನ್ನು ಸಂಗ್ರಹಿಸತೊಡಗಿದ ನೀರು ಹನಿಹನಿಯಾಗಿ ಬೀಳುತ್ತಿತ್ತು.ದೀರ್ಘ ಸಮಯದ ನಂತರ ಆ ಎಲೆಗಳ ದೊನ್ನೆ ತುಂಬಿತ್ತು. ರಾಜನಿಗೆ ತುಂಬ ಸಂತೋಷವಾಯಿತು. ಆದರೆ ಇನ್ನೇನು ಆ ನೀರನ್ನು ಕುಡಿಯಬೇಕು ಎನ್ನುವಷ್ಟರಲ್ಲಿ ಒಂದು ಗಿಳಿಯು ಹಾರಿ ಬಂದು ಆ ನೀರನ್ನು ಕೆಳಗೆ ಚೆಲ್ಲಿತು. ರಾಜನಿಗೆ ತುಂಬಾ ಕೋಪ ಬಂತು. ಆದರೂ ಸಹಿಸಿಕೊಂಡು ಮತ್ತೆ ಮರದ ಕೆಳಗೆ ಕುಳಿತು ನೀರಿನ ಹನಿಗಳನ್ನು ಸಂಗ್ರಹಿಸತೊಡಗಿದ ಮತ್ತೆ ಬಹಳ ಸಮಯದ ನಂತರ ನೀರು ತುಂಬಿತ್ತು.
ಆದರೆ ಈ ಬಾರಿಯೂ ರಾಜ ಅದನ್ನು ಕುಡಿಯಬೇಕು ಎನ್ನುವಷ್ಟರಲ್ಲಿ ಗಿಳಿಯು ಹಾರಿ ಬಂದು ನೀರನು ಕೆರೆಗೆ ಚೆಲ್ಲಿ ತ್ತು. ಈಗ ರಾಜನಿಗೆ ಸಹಿಸಲಾಗದಷ್ಟು ಕೋಪ ಬಂತು. ಆತ ತನ್ನ ಖಡ್ಗವನ್ನು ತೆಗೆದು ಒಂದು ಕೈಯಲ್ಲಿ ಖಡ್ಗ ಹಿಡಿದು ಇನ್ನೊಂದು ಕೈಯಲ್ಲಿ ನೀರು ತುಂಬಿದ. ಈ ಬಾರಿ ರಾಜ ನೀರು ಕುಡಿಯಲು ಯತ್ನಿಸಿದಾಗ ಗಿಳಿಯು ಮತ್ತೆ ಹಾರಿ ಬಂದು ನೀರನು ಕೆರೆಗೆ ಚೆಲ್ಲಿ ತ್ತು. ರಾಜ ಕೋಪದಲ್ಲಿ ತನ್ನ ಕೈಯಲ್ಲಿ ಹಿಡಿದಿದ್ದ ಖಡ್ಗದಿಂದ ಗಿಳಿಯನ್ನು ಕತ್ತರಿಸಿ ಹಾಕಿದ ಈಗ ಸಮಾಧಾನವಾಯಿತು.
ಆದರೆ ಮತ್ತೆ ಹನಿ ಹನಿಯಾಗಿ ಬರುತ್ತಿರುವ ನೀರನ್ನು ಸಂಗ್ರಹಿಸಿದರೆ ಬಹಳ ಸಮಯ ಹಿಡಿಯುತ್ತದೆ. ಈ ನೀರು ಎಲ್ಲಿಂದ ಬರುತ್ತಿದೆ ನೋಡೋಣ ಎಂದುರಾಜ ಮರವನ್ನೇರಿ ನೋಡಿದ. ಒಂದು ಎತ್ತರದ ಬೆಟ್ಟದಿಂದ ನೀರು ತೊಟ್ಟಿಕ್ಕುತ್ತಿತ್ತುರಾಜ ಬೆಟಗೇರಿ ನೋಡಿದ ಒಂದು ಚಿಕ್ಕ ಹೊಂಡ ಕಾಣಿಸಿತು. ಅದರಿಂದ ಬಸಿದ ನೀರು ಮರದ ಮೇಲೆ ತೊಟ್ಟಿ ಕೂತಿತ್ತು. ಆದರೆ ಆ ಹೊಂಡದಲ್ಲಿ ಒಂದು ವಿಷಸರ್ಪ ಸತ್ತು ಬಿದ್ದಿತ್ತು. ನೀರೆಲ್ಲ ಅದರ ವಿಷದಿಂದ ಹಸಿರಾಗಿತ್ತು.
ಎಲ್ಲವನ್ನು ಗಮನಿಸಿದ ರಾಜನಿಗೆ ಪಶ್ಚಾತ್ತಾಪವಾಯಿತು ಗಿಳಿಯು ತನ್ನ ಪ್ರಾಣ ಉಳಿಸಲು ನೋಡಿತ್ತು. ಆದರೆ ತಾನು ಕೋಪದ ಕೈಗೆ ಬುದ್ಧಿ ಕೊಟ್ಟು ತಪ್ಪು ಮಾಡಿಬಿಟ್ಟೆ ಎಂದು ರಾಜ ಪಶ್ಚಾತಾಪ ಪಟ್ಟ ಪ್ರೀತಿಯ ಬಂಧುಗಳೇ ನಮ್ಮ ಜೀವನದಲ್ಲೂ ಹೀಗೆ ಅಲ್ವಾ? ಒಂದು ಕ್ಷಣದ ಕೋಪ ಅಥವಾ ದುಡುಕು ಎಲ್ಲವನ್ನು ಹಾನಿ ಮಾಡುತ್ತೆ. ಕೋಪ ಅನ್ನೋದು ಕೇವಲ ಕೋಪ ಮಾಡಿಕೊಂಡವರನ್ನು ಅಷ್ಟೇ ಅಲ್ಲ, ಸುತ್ತ ಇರುವವರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತೆ. ಆ ವಾತಾವರಣವನ್ನೇ ಹಾಳು ಮಾಡುತ್ತೆ.
ಆ ಒಂದು ಕ್ಷಣ ದುಡುಕು ಕೆಲವೊಮ್ಮೆ ಯಾವತ್ತು ಸರಿ ಹೋಗದಷ್ಟು ನಾಶ ಮಾಡುತ್ತೆ, ಬಂಧುಗಳೇ ಕಾಲ ಕಾಲದಿಂದ ನಮ್ಮ ಹಿರಿಯರು ಒಂದು ಮಾತನ್ನ ಹೇಳ್ತಾ ಬಂದಿದ್ದಾರೆ.ನಮ್ಮ ಒಳಗಿನ ಕಿಚ್ಚು ಮೊದಲು ನಮ್ಮನ್ನಸುತ್ತೆ ಅಂತ ನಮಗೆ ಕೋಪ ಬರುತ್ತೆ ಅಥವಾ ನಾವು ದುಬೈ ಆ ಕಾರಣಕ್ಕೆ ನಮಗೆ ಶಿಕ್ಷೆ ಆಗಲ್ಲ. ಆ ಕೋಪ ಅನ್ನೋದು ನಮಗೆ ಒಂದು ಶಿಕ್ಷೆ. ಈಗ ಇಲ್ಲಿ ಹಂಚಿಕೊಂಡ ಕಥೆಯಿಂದ ಕೋಪದಲ್ಲಿ ದುಡುಕಿದರೆ ಏನಾಗುತ್ತೆ ಅಂತ ಅರ್ಥ ಆಯ್ತು. ಹಾಗಾದ್ರೆ ಈ ಕೋಪ ಎಲ್ಲಿ ಇರುತ್ತೆ? ಅದನ್ನ ಯಾವ ರೀತಿ ನೋಡಬೇಕು? ಇದನ್ನ ಇನ್ನೊಂದು ಕಥೆಯಲ್ಲಿ ಹಂಚಿಕೊಳ್ತೀನಿ.
ಸನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನ ಮಾಡಬೇಕು ಅಂತ ತನ್ನ ಆಶ್ರಮದಿಂದ ಹೊರಗೆ ಹೋಗಲು ನಿರ್ಧರಿಸುತ್ತಾನೆ. ಯಾಕಂದ್ರೆ ಆ ಸನ್ಯಾಸಿ ಬಹಳ ಕೋಪಿಷ್ಟ ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆ ಆಗ್ತಾ ಇರುತ್ತೆ.ಯಾರಾದರೂ ಬರೋದು ಹೋಗೋದು ಈತ ಅವರ ಮೇಲೆ ಕೋಪ ಮಾಡಿಕೊಳ್ಳುವುದು. ಇದು ನಿರಂತರವಾಗಿ ನಡೀತಿರುತ್ತೆ. ಆ ಸನ್ಯಾಸಿ ಒಂದು ಯೋಚನೆ ಮಾಡ್ತಾನೆ.
ದೋಣಿ ಮೇಲೆ ಕೂತು ಕೆರೆಯ ನಡುವೆ ಹೋಗಿ ದೋಣಿಯ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುತ್ತೆ. ಆದರೆ ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸನ್ಯಾಸಿಯ ದೋಣಿಗೆ ಢಿಕ್ಕಿ ಹೊಡೆದ ಅನುಭವವಾಗುತ್ತೆ. ಕಲ್ಲು ಮುಚ್ಚಿದ ಸನ್ಯಾಸಿಗೆ ತನ್ನ ಕೂಪ ಹೆಚ್ಚಾಗುತ್ತಿರುವ ಅನುಭವ ಆಗುತ್ತೆ. ಏಕಾಗ್ರತೆಗೆ ಭಂಗ ತಂದ ದೋಣಿಯ ತನ್ನ ಚೆನ್ನಾಗಿ ಬೈದು ಬಿಡಬೇಕು ಅಂತ ಆತ ಕೋಪದಿಂದ ಕಣ್ಣು ಬಿಡ್ತಾನೆ.ಆದರೆ ಎದುರಿನ ದೋಣಿ ಖಾಲಿ ಇರುತ್ತೆ. ನಾವಿಕನಿಲ್ಲದ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗೇ ತೇಲುತ್ತಾ ತೇಲುತ್ತಾ ಬಂದು ಆ ದೋಣಿಗೆ ಢಿಕ್ಕಿ ಹೊಡೆದು ಇರುತ್ತೆ.
ಆ ಕ್ಷಣಕ್ಕೆ ಆ ಸನ್ಯಾಸಿಗೆ ಜ್ಞಾನೋದಯವಾಗುತ್ತೆ. ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದು ಅಲ್ಲ. ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತವಾಗುತ್ತದೆ ಎಂಬ ಸತ್ಯವನ್ನರಿತನೆ ಆಗಿನಿಂದ ಆತ ಯಾರಾದರೂ ಕಿರಿಕಿರಿ ಆಗುವಂತೆ ವರ್ತಿಸಿದರೆ ಕೋಪ ಬರುವಂತೆ ನಡೆದುಕೊಂಡರೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ ಅವರೊಂದು ಖಾಲಿ ದೋಣಿ ಅಂಥವರು ಕೋಪ ತನ್ನೊಳಗೆ ಇದೆ ಅಂತ.ಇದು ಆ ಸನ್ಯಾಸಿಯ ಸಮಸ್ಯೆ ಮಾತ್ರ ಅಲ್ಲ. ನಮ್ಮೆಲ್ಲರ ಸಮಸ್ಯೆ .