ಸುಖ ಸಂಸಾರಕ್ಕೆ ಕಿವಿ ಮಾತುಗಳು

Featured Article

ಪತಿ office ಇಂದ ಮನೆಗೆ ಬಂದಾಗ ಮುಖವನ್ನು ಗಂಟು ಹಾಕಿಕೊಂಡು ಇರುವುದು ಅಥವಾ phone ಅಲ್ಲಿ ಮಾತನಾಡುವುದು busy ಯಾಗಿ ಇರುವುದು TV ಮುಂದೆ ಕುಳಿತಿರುವುದು ಹೀಗೆ ಯಾವುದಾದರೊಂದು ಕೆಲಸದಲ್ಲಿ ಬಿಜಿಯಾಗಿ ಇರಬೇಡಿ ಅವರು ಬಂದ ತಕ್ಷಣ ಒಂದು glass ನೀರು ಕೊಟ್ಟು ನಗುನಗುತ್ತಾ ಮಾತನಾಡಿಸಿ.ಹಣ, ಆಸ್ತಿ, ಒಡವೆ, ಕಾರು, ಬಂಗಲೆ ಇವೆಲ್ಲ ಜೀವನಕ್ಕೆ ಬಹಳ ಮುಖ್ಯ ಆದರೆ ಜೀವನಕ್ಕೆ ನೆಮ್ಮದಿ ಇದಕ್ಕಿಂತ ಮುಖ್ಯ

ಇದು ನಿಮ್ಮಿಬ್ಬರಿಗೂ ನೆನಪಿರಲಿ ಪತಿಯ ಸಂಪಾದನೆಗೆ ಪತ್ನಿಯಾದವಳು ಬೆಲೆ ಕೊಡಬೇಕು ಇತಿ ಮಿತಿಯಲ್ಲಿ ಖರ್ಚು ಮಾಡಬೇಕು friends, family ಅಕ್ಕ ಪಕ್ಕದವರು ಒಡವೆ ತಗೆದುಕೊಂಡಿದ್ದಾರೆ ಅಥವಾ ಹೊರಗಡೆ ಸುತ್ತಾಡಲು ಹೋಗುತ್ತಿದ್ದಾರೆ Shopping ಮಾಡಿದ್ದಾರೆ ಎಂದ ಮಾತ್ರಕ್ಕೆ ನಾವು ಕೂಡ ಅದನ್ನೇ ಮಾಡಬೇಕು ಅದನ್ನೇ ಖರೀದಿಸಬೇಕು ಎಂಬುವ ಬಯಕೆ ಇಟ್ಟುಕೊಳ್ಳಬೇಡಿ ಏಕೆಂದರೆ,

ಇದರಿಂದಲೇ ಸಂಸಾರದಲ್ಲಿ ಇಲ್ಲದ ಕಲಹಗಳು ಉಂಟಾಗುತ್ತದೆ ನಿಮಗೆ ಅವಶ್ಯಕತೆ ಇದೆ ಮತ್ತು ತೆಗೆದುಕೊಳ್ಳುವ ಶಕ್ತಿ ಇದೆ ಎಂದರೆ ಖಂಡಿತ ತೆಗೆದುಕೊಳ್ಳಿ ಅತಿ ಆಸೆ ಇರಬಾರದು ಮತ್ತು

ಬೇರೆಯವರ ಬದುಕನ್ನು ನಿಮ್ಮ ಬದುಕಿಗೆ ಯಾವತ್ತಿಗೂ ಹೋಲಿಸಬಾರದು ಪತ್ನಿಯ ಮನೆಯವರ ಬಗ್ಗೆ ಪತಿ ಪತಿಯ ಮನೆಯವರ ಬಗ್ಗೆ ಪತ್ನಿ ಚರ್ಚಿಸುವ ಅವಶ್ಯಕತೆ ಇಲ್ಲ. ಮಾತನಾಡಬೇಕಾದ ವಿಷಯದ ಬಗ್ಗೆ ಮಾತನಾಡಿ ಹೀಯಾಳಿಸುವ ಅಥವಾ ವೈಯಕ್ತಿಕ ಮಾತುಗಳು ಬೇಡ ಇಲ್ಲದ ಸಲ್ಲದ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡಬೇಡಿ.ಸಂಸಾರ ಎಂದ ಮೇಲೆ ಮನೆ, ಮಕ್ಕಳು, ವ್ಯವಹಾರ ಮತ್ತು ಆರೋಗ್ಯದ ಮಾತುಗಳೇ ತುಂಬಾ ಇರುತ್ತವೆ ಇದರ ಹೊರತು ಬೇರೆಯವರ ಬಗ್ಗೆ ಇಲ್ಲದ ಸಲ್ಲದ ಮಾತಿನ ಚರ್ಚೆ ಇಬ್ಬರಿಗೂ ಬೇಡ

ಅದರ ಅವಶ್ಯಕತೆಯೂ ಇಲ್ಲ ಪತಿ.ಪತ್ನಿಯ ನಡುವೆ ಜಗಳ ಬರಲು ಇದೇ ಕಾರಣ ಒಬ್ಬರಿಗೊಬ್ಬರ ಮೇಲೆ ಪ್ರೀತಿ ವಿಶ್ವಾಸ ಗೌರವವಿರಲಿ ಆದರೆ ಸಂಶಯ ಚುಚ್ಚು ಮಾತುಗಳು ಜಗಳ ಮನಸ್ತಾಪ ಅಪಮಾನಿಸುವ ಮಾತುಗಳು ಬೇಡ ನೀವಿಬ್ಬರೂ job ಮಾಡುತ್ತಿದ್ದೀರಿ ಎಂದರೆ ಇದು ನನ್ನ ದುಡ್ಡು,ಅದು ನಿನ್ನ ದುಡ್ಡು ನನ್ನದು ನಿನ್ನದು ಎಂಬ ಮನೋಭಾವ ಇರಬಾರದು ಗಂಡ ಹೆಂಡತಿ ಎಂದರೆ ಒಂದೇ ಎಂದರ್ಥ ಮತ್ತು,

ಅವರ ದುಡಿಮೆಗೆ ಮಾತ್ರ ನಿನ್ನದು ನನ್ನದು ಎಂಬ ಮಾತು ಯಾಕೆ? ಇತ್ತೀಚೆಗೆ ಗಂಡ ಹೆಂಡತಿಯಲ್ಲಿ ಬಿರುಕು ಬರಲು ಇದು ಕೂಡ ಒಂದು ಮುಖ್ಯವಾದ ಕಾರಣ ಎನ್ನಬಹುದು ಈ ಜಗತ್ತಿನಲ್ಲಿ ಅದೃಷ್ಟವಂತ ಯಾರೆಂದರೆ ಕಷ್ಟಕಾಲದಲ್ಲೂ ಗಂಡನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ ಮತ್ತು ಸಾವಿರಾರು ಸಮಸ್ಯೆಗಳು ಇದ್ದರೂ ಹೆಂಡತಿಯ ಮುಖದಲ್ಲಿ ಪುಟ್ಟ ನಗು ತರುವುದು ಗಂಡ ಮಾತ್ರ

Leave a Reply

Your email address will not be published. Required fields are marked *