ದೇವರಿಗೆ ಎಷ್ಟು ದೀಪ ಹಚ್ಚಿದರೆ ಶ್ರೇಷ್ಠ ? ಹೇಗೆ ಹಚ್ಚಬೇಕು ?

Featured Article

ತಿಲ ತೈಲ ಮತ್ತು ಮೃತ ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯವಾಗಿವೆ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ.ಇತರ ತೈಲಗಳು ವಾಮಾಚಾರ ಪುಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು (ಎಳ್ಳೆಣ್ಣೆ ) ಪಾಪ ಪರಿಹಾರಕ್ಕಾದರೆ, ಧೃತವು (ತುಪ್ಪ) ಮೋಕ್ಷದಾಯಕವಾಗಿದೆ.ಒಂದು ಸ್ತಂಬದಲ್ಲಿ ಒಂದೇ ದೀಪ ಉರಿಯಬೇಕು.

ದೀಪ ನಮಸ್ಕಾರ ಅಥವಾ ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪಗಳನ್ನ ಒಂದೇ ಸ್ಥಂಭದಲ್ಲಿ ಉರಿಸಬಹುದು.ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯವನ್ನು ಸೂಚಿಸುತ್ತದೆ. ಆ ಮನೆಯಲ್ಲಿ ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಇರುವುದಿಲ್ಲ. ಸದಾ ಒಬ್ಬರನ್ನು ಒಬ್ಬರು ಏನಾದರು ಟೀಕೆ ಮಾಡುತ್ತಲೇ ಇರುತ್ತಾರೆ.ಮೂರು ದೀಪ ಇದ್ದರೆ ಅದು ಅಪಾಯ ಸೂಚಕವಾಗಿದೆ.

ನಾಲ್ಕು ದೀಪ ಇದ್ದರೆ ದ್ವಂದ್ವ – ಗೊಂದಲವನ್ನು ಉಂಟುಮಾಡುತ್ತದೆ.ಐದು ದೀಪಗಳು ಇದ್ದರೆ ಮೇಲೆ ತಿಳಿಸಿದ ಹಾಗೆ ಅದು ದೈವದ ಆರಾಧನೆಗೆ ಮಾತ್ರ ಉಪಯೋಗಿಸುವರು. ದೀಪಗಳಲ್ಲಿ ಬತ್ತಿಗಳ ಪಮಾಣ ಹೇಗಿರಬೇಕು ?ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತವಾಗಿದೆ.ಮೂರು ಬತ್ತಿ ತ್ರಿಶಕ್ತೀ ಸ್ವರೂಪವಾಗಿದೆ.ನಾಲ್ಕು ಬತ್ತಿಯು ಒಳ್ಳೆಯದಲ್ಲ.

ಐದು ಬತ್ತಿಗಳು ಪಂಚಭೂತಗಳ ಸಂಕೇತವಾಗಿದೆ.

ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಮೇಲಿನ ಯಾವುದನ್ನೂ ಬೇಕಾದರೂ ಹಾಕಬಹುದು.ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಟವಾಗಿದೆ.ದೀಪ ಸ್ತಂಭ, ದೀಪದ ಇಂಧನ ತೈಲವು ಮಲಿನ ಆಗಿರಬಾರದು. ಹಾತೆ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು.ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯನ್ನು ತೊಳೆದು ನಂತರವೇ 

ಮುಟ್ಟಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟಬಾರದು ಎಂದರ್ಥ.ಒಂದೇ ದೀಪ ಇಡುವುದಿದ್ದರೆ ದೇವರ ದೀಪವನ್ನು ದೇವರ ಎಡ ಭಾಗದಲ್ಲಿಡ ಬೇಕು.ಎರಡಿದ್ದರೆ ಎಡ ಬಲಗಳಲ್ಲಿ ಇಡಬಹುದು.ದೀಪದ ಮುಖ ಯಾವಾಗಲೂ ನಮ್ಮ ಕಡೆಗೆ ಅಂದರೆ ಪೂಜಿಸುವವರ ಕಡೆಗೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡಬಹುದು. ಇದು ಶಾಕ್ತವಾದ ದೀಪದ ಲಕ್ಷಣ.

ದೇವರ ಮನೆಯಲ್ಲಿ ಯಾವಾಗಲೂ ದೀಪವಿರಬೇಕು. ದೇವರನ್ನು ನಂದಾ ದೀಪದಲ್ಲೇ ನೋಡುವುದು ಶ್ರೇಷ್ಠವಾದುದು.ಯಾರ ಮನೆಯಲಿ ನಂದಾದೀಪ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ.ಸದಾ ದೇವರ ಮುಂದೆ ದೀಪ ಇರಬೇಕು ಮತ್ತು ಅದು ಆರದಂತೆ ನೋಡಿಕೊಳ್ಳಬೇಕು.ಸದಾ ದೇವರ ಮುಂದೆ ದೀಪ ಇರಬೇಕು ಮತ್ತು ಅದು ಆರದಂತೆ ನೋಡಿಕೊಳ್ಳಬೇಕು. ಅದೇ ನಂದಾದೀಪ. ಇದರಲ್ಲಿ ಲಕ್ಷ್ಮೀ ನಾರಾಯಣ ಸನ್ನಿಧಾನ ವಿರುತ್ತದೆ. ಮನೆಯಲ್ಲಿ ಲಕ್ಷ್ಮೀ ವಾಸ ವಿರುತ್ತದೆ.

Leave a Reply

Your email address will not be published. Required fields are marked *