ಮೂಲಕ ಮಹಿಳೆಯರ ಲಕ್ಷಣಗಳು.

Featured Article

ಮೂಕ ಮಹಿಳೆ ತನ್ನ ಗಂಡನನ್ನು ಗುಲಾಮನಾಗಿ ಮಾಡಿಕೊಂಡು ತಾನು ಗುಲಾಮನ ಹೆಂಡತಿಯಾಗಿ ಇರುತ್ತಾಳೆ. ಆದರೆ ಬುದ್ದಿವಂತ ಮಹಿಳೆ ಗಂಡನನ್ನು ರಾಜನಾಗಿ ನೋಡಿಕೊಂಡು ತಾನು ರಾಣಿಯಾಗಿ ಬಾಳುತ್ತಾಳೆ.ಮೂಕ ಮಹಿಳೆ ತನ್ನ ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ. ಬೇರೆ ಕಡೆ ಮನೆ ಮಾಡಿರೋಣ ಅಂತ ಹಠ ಹಿಡಿಯುತ್ತಾಳೆ. ಅವಳಿಗೆ ಕೂಡಿ ಬಾಳಲು ಅಷ್ಟು ಇಷ್ಟ ವಿರುವುದಿಲ್ಲ.

ಆದರೆ ಬುದ್ದಿವಂತ ಮಹಿಳೆ ಸಂಸಾರದಲ್ಲಿ ಎಷ್ಟೇ ಕಷ್ಟ ವಿರಲಿ. ಎಲ್ಲರನ್ನು ಎಲ್ಲ ವನ್ನು ಹೊಂದಿಕೊಂಡು ಪರಿಸ್ಥಿತಿ ದಿನ ಅರ್ಥಮಾಡಿಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ ಹೊಂದಿರುತ್ತಾಳೆ.ಮೂಲಕ ಮಹಿಳೆಯರು ತನ್ನ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿ ಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುತ್ತಾರೆ.

      ಬುದ್ಧಿವಂತ ಮಹಿಳೆ ಮಕ್ಕಳು ಏನೇ ತಪ್ಪು ಮಾಡಿದರು. ಅದನ್ನು ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿ ಮಾತು ಹೇಳುತ್ತಾಳೆ.ಭಾವನೆಗಳಿಲ್ಲದ ಹೆಣ್ಣಿನ ಮನಸ್ಸು ಬರಿದಾಗಿ ಹೋದ ಬಹು ದೊಡ್ಡ ತೋಟದಂತೆ ಬರಿ ಹೆಸರಿಗೆ ಮಾತ್ರ ದೊಡ್ಡದಾದ ತೋಟ. ಆದರೆ ಯಾವುದಕ್ಕೂ ಉಪಯೋಗವಿಲ್ಲ.ಮೂಕ ಮಹಿಳೆ ಕುಟುಂಬ ಮತ್ತು ಗಂಡನ ಸ್ನೇಹಿತರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾಳೆ.

      ಪತಿ ಮನೆಗೆ ಬಂದಾಗ ನಗುಮುಖದ ಬದಲು ಹುಲಿ ಮುಖದಿಂದ ಸ್ವಾಗತಿಸುತ್ತಾಳೆ.ಸಭ್ಯತೆ ಹೊಂದಿರುವ ಮಹಿಳೆ ಯಾವಾಗ ಲೂ ಪ್ರೀತಿಯಿಂದ ಮಾತನಾಡುತ್ತಾಳೆ.ಇತರ ಮುಂದೆ ಅಥವಾ ಮನೆಯಲ್ಲಿ ಗಂಡನಿಗೆ ಗೌರವ ನೀಡುತ್ತಾಳೆ.ಬುದ್ದಿವಂತೆ ಹೆಣ್ಣಿಗೆ ತಾಳ್ಮೆ ಇರುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ವಿರುತ್ತದೆ. ಆದರೆ ಸ್ವಾರ್ಥ ಮನೋಭಾವನೆ, ಊಟ, ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.

      ಹೆಂಡತಿ ತನ್ನ ಪತಿಯನ್ನು ರಾಜನಂತೆ ನಡೆಸಿಕೊಳ್ಳಬೇಕೆಂದು ಬಯಸಿದರೆ ಗಂಡ ಕೂಡ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು.ತಾಳಿಯನ್ನು ತೂಕ ವೆಂದು ಭಾವಿಸುವ ಯಾವುದೇ ಹೆಣ್ಣು ಸಂಸಾರ ನಡೆಸಲು ಅರ್ಹಳಲ್ಲ. ಹೆಣ್ಣು ತನ್ನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಅರ್ಹನಲ್ಲ.

      Leave a Reply

      Your email address will not be published. Required fields are marked *