ಮನುಷ್ಯರ ಹೊಟ್ಟೆಕಿಚ್ಚು

Featured Article

ಪ್ರೀತಿಯ ಬಂಧುಗಳೇ ನಮ್ಮ ಸುತ್ತ ಇರುವ ಜನರೆಲ್ಲ 

ಕೆಟ್ಟವರಲ್ಲ. ಹಾಗಂತ ಎಲ್ಲರೂ ಒಳ್ಳೆಯವರು ಅಲ್ಲ. ಇಲ್ಲಿ ಒಳ್ಳೆಯವರು ಕೆಟ್ಟವರು ಅನ್ನೊದನ್ನ ಬಿಡಿ. ಆದ್ರೆ ಮನುಷ್ಯನಲ್ಲಿರುವ ಒಂದು ಸಹಜ ದುರ್ಗುಣ ಅಂತ ಅಂದ್ರೆ ಅದು ಹೊಟ್ಟೆಕಿಚ್ಚು. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತೆ. ನಿಮ್ಮ ಜೊತೆಗೆ ಇರುವ ನಿಮ್ಮ ಸ್ನೇಹಿತರಿಂದ ಹಿಡ್ಕೊಂಡು ನಿಮ್ಮ ಸಂಬಂಧ ಹಂಚಿಕೊಂಡಿರೋರು ಸಹ ಕೆಲವೊಮ್ಮೆ ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡುವ ಸಂದರ್ಭ ಬರುತ್ತೆ.ಇಲ್ಲಿ ನಾನು ಒಂದು ಸೂಕ್ಷ್ಮ ವಿಚಾರ ಹೇಳಬೇಕು, ಅದು ಅರ್ಥ ಆಗ ಬೇಕು ಅಂದ್ರೆ ಈ ಚಿತ್ರ ಕಥನ ಉದಾಹರಣೆಗೆ ಕೇಳಿ ಕೊನೆಗೆ ವಿವರಿಸ್ತೀನಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಹಳ್ಳಿಯ ಮನೆಯೊಂದರಲ್ಲಿ ಒಂದು ನಾಯಿಯನ್ನು ಸಾಕಿ ಕೊಂಡಿದ್ದರು. ಕೊಟ್ಟಿಗೆಯಲ್ಲಿ ಕೆಲವು ಹಸುಗಳನ್ನು ಸಾಕಿದ್ದರು. ಹಸುಗಳೆಂದರೆ ಮನೆಯವರಿಗೆಲ್ಲಾ ಬಹಳ ಪ್ರೀತಿಯೇ. ಅವುಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಿದ್ದರು. ಸ್ನಾನ ಮಾಡಿಸಿ ಹುಲ್ಲು ಹಿಂಡಿ ಕೊಡುತ್ತಿದ್ದರು. ಕೊಟ್ಟಿಗೆಯನ್ನು ಬೇಸರವಿಲ್ಲದೆ ಸ್ವಚ್ಛಗೊಳಿಸುತ್ತಿದ್ದರು.

ಹಬ್ಬ ಹರಿದಿನಗಳಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸುತ್ತಿದ್ದರು. ಈ ನಾಯಿಗೆ ತಾವು ತಿಂದುಳಿದ ಆಹಾರವನ್ನು ಮನೆಯ ಹೊರಗಿನ ಕಲ್ಲಿನ ಮೇಲೆ ತಂದು ಹಾಕುತ್ತಿದ್ದರು. ಒಂದು ಗೋಣಿತಟ್ಟು ಹಾಕಿ ಅದರ ಮೇಲೆ ಬಿದ್ದು ಕೊಳ್ಳುವಂತೆ ಮಾಡಿದರು.ಆಗಾಗ ನಾಯಿಗೆ ಹೊಡೆಯುತ್ತಲೂ ಇದ್ದರು.

ದಿನಗಳು ಕಳೆದಂತೆ ನಾಯಿಗೆ ಹಸುಗಳತ್ತ ವಿಪರೀತ ಹೊಟ್ಟೆಕಿಚ್ಚಾಯಿತು. ಹಸುಗಳು ಹಾಲು ಕೊಡುತ್ತವೆ. ನಿಜ ನಾನೇನು ಕಡಿಮೆ ರಾತ್ರಿಯಿಡೀ ಎಚ್ಚರದಿಂದಿದ್ದು ಮನೆಯನ್ನು ಕಾವಲು ಕಾಯುತ್ತೇನೆ. ಕಳ್ಳರು ಬಂದು ಹಸುವನ್ನು ಕದ್ದೊಯ್ದಿರುವುದು ನನ್ನ ಭಯದಿಂದ ಅಲ್ಲವೇ? ಮನೆ ಸುರಕ್ಷಿತವಾಗಿದ್ದಾರೆ ತಾನೇ ಈ ಹಸು ಕೊಟ್ಟಿಗೆ ಹಾಲು ಮೊಸರುಗಳೆಲ್ಲ, ಆದರೆ ಈ ಹಸುಗಳಿಗೆ ನನಗೆ ಇಲ್ಲದ ಪ್ರೀತಿ, ಆರೈಕೆ, ಆಹಾರ, ಔಷಧೋಪಚಾರ ಎಲ್ಲವೂ ಸಿಗುತ್ತಿದೆ.

ನನಗೆ ಗಾಯವಾದರೆ ಕಾಯಿಲೆಗಳಾದರೆ ಕೇಳುವವರೇ ಇಲ್ಲ. ಮನುಷ್ಯರೇ ನನಗೆ ಅವಕಾಶ ಸಿಗಲಿ ಎಂದು ಈ ಹಸುಗಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಹಲ್ಲು ಕಡಿಯುತ್ತ ಇತ್ತು.ಒಂದು ಸಲ ಮನೆಯವರೆಲ್ಲ ಯಾವುದೋ ಸಮಾರಂಭಕ್ಕೆಂದು ಪಕ್ಕದ ಊರಿಗೆ ಹೋದರು. ನಾಯಿ ಮನೆಯ ಕಾವಲಿಗೆ ಇತ್ತು. ಆ ದಿನ ಅದನ್ನು ಕಟ್ಟಿರಲಿಲ್ಲ. ಇದೆ ಸಮಯ ಎಂದುಕೊಳ್ಳುತ್ತಾ ನಾಯಿ ಹೋಗಿ ಮೆತ್ತನೆಯ ಹುಲ್ಲಿ ನಲ್ಲಿ ಅಡಗಿಕೊಂಡಿತ್ತು.

ಅಲ್ಲಿಗೆ ಇನ್ನಷ್ಟು ಹಸುಗಳು ಬಂದವು ನಾಯಿ ಅವುಗಳನ್ನು ಕಚ್ಚಲು ಪ್ರಯತ್ನಿಸಿತು. ಅವು ತಮ್ಮ ಚೂಪಾದ ಕೊಂಬುಗಳಿಂದ ತಿವಿಯಲು ಮುಂದಾದವು. ತಾನು ಹಸುಗಳನ್ನು ಏನು ಮಾಡಲಾರೆ ಎಂದು ತಿಳಿಯುತ್ತಲೇ ನಾಯಿ ಹುಲ್ಲಿನ ಮೇಲೆ ಗಲೀಜು ಮಾಡಿ ಓಡಿ ಹೋಯಿತು. ಹಸುಗಳು ಜುಗುಪ್ಸೆ ಪಟ್ಟುಕೊಂಡು ಹುಲ್ಲನ್ನು ಮುಟ್ಟದೆ ಹೋದವು.ಬಂಧುಗಳೇ ಇದು ಉದಾಹರಣೆ ಅಷ್ಟೇ.

ನಮ್ಮ ಹಿರಿಯರು ಕಾಲ ಕಾಲದಿಂದ ಹೇಳ್ತಾನೆ ಬಂದಿದ್ದಾರೆ. ಸಜ್ಜನರ ಸಂಘ ಮಾಡಬೇಕು. ದುರ್ಜನರ ಸಂಗ ಯಾವತ್ತಿದ್ರು ಮಾರಕ ಅಂತ ಒಬ್ಬ ವ್ಯಕ್ತಿ ನಿಮ್ಮ ಜೊತೆ ಚೆನ್ನಾಗಿದ್ದು ಬೇರೆಯವರ ಮೇಲೆ ಹೊಟ್ಟೆಕಿಚ್ಚು ಪಡುತಿರೋ ದನ್ನ ಅಥವಾ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡಿರೋದನ್ನ ನೀವು ಗಮನಿಸಿದರೆ ಅವನು ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡೆದಿದ್ದಾನೆ. ಆದರೆ ಅದು ನಿಮ್ಮ ಬೆನ್ನ ಹಿಂದೆ ಅಂತ ಅರ್ಥ ಮಾಡ್ಕೋಬೇಕು ಅಂತ ಜನರಿಂದ ದೂರ ಇರಿ ಯಾಕಂದ್ರೆ ಈ ಸ್ವಾರ್ಥಿ ಗಳು ಕಪಟಿ ಗಳು ತಮಗೆ ಏನಾದರೂ ಸಿಗಲಿಲ್ಲ ಅಂದ್ರೆ ಬೇರೆಯವರಿಗೆ ಸಿಗದಂತೆ ಮಾಡೋಕೆ ಏನು ಬೇಕಾದ್ರೂ ಮಾಡ್ತಾರೆ.

ಇಂತ ಜನ ಯಾವತ್ತಿದ್ರು? ಗಲೀಜು ಮಾನಸಿಕ ರೋಗಿಗಳು ಅವರನ್ನು ದೂರ ಇಡಿ. ನೀವು ಕೇಳಬಹುದು ಇಂಥ ಜನರನ್ನ ಹೇಗೆ ದೂರ ಮಾಡೋದು ಅಂತ ಇದಕ್ಕೆ ಉತ್ತರ ನಾನು ಅವರ ಜೊತೆ ಜಗಳ ಆಡಿ ಬಿಟ್ಟು ಬಿಡಿ ಅಂತ ಹೇಳ್ತಿಲ್ಲ. ಅವರಿಂದ ಅಂತರ ಕಾಯ್ದುಕೊಳ್ಳಿ. ಈ ಅಂತರ ದೊಡ್ಡದಾಗಿ ಬೆಳೆಯುತ್ತೆ. ನೀವುಗಳೇ ದೂರ ಆಗ್ತೀರಾ ಮತ್ತೆ ಹೇಳ್ತಿದ್ದೀನಿ ಕೆಟ್ಟವರ ಸ್ನೇಹ ಸಂಬಂಧ ಯಾವತ್ತಿದ್ದರೂ ಮಾರಕ.

Leave a Reply

Your email address will not be published. Required fields are marked *