ನಾಳೆ ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಾನ, ನೈವೇದ್ಯ, ಪೂಜಾ ಸಮಯ 

Featured Article

ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿನ್ನು ಎಂದು ಕೂಡ ಕರೀತೀವಿ. ಆ ದಿನದಂದು ಮಧ್ಯರಾತ್ರಿ ಸಮಯ ದಲ್ಲಿ ರೋಹಿಣಿ ನಕ್ಷತ್ರದ ಸಮಯ ದಲ್ಲಿ ಶ್ರೀಕೃಷ್ಣನ ಜನನವಾಯಿತು ಅನ್ನುವ ನಂಬಿಕೆ ಕೂಡ ಇದೆ.ಈ ಬಾರಿ ಸೆಪ್ಟೆಂಬರ್ ಆರನೇ ತಾರೀಖು ಮತ್ತು ಸೆಪ್ಟೆಂಬರ್ ಏಳನೇ ತಾರೀಖು ಬುಧವಾರ ಮತ್ತು ಗುರುವಾರ ಎರಡು ದಿನಗಳಲ್ಲೂ ಕೂಡ ಕೃಷ್ಣ ಜನ್ಮಾಷ್ಟಮಿ ಬಂದಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಅಷ್ಟಮಿಯ ತಿಥಿಯ ಪ್ರಾರಂಭವಾಗುವುದು ಸೆಪ್ಟೆಂಬರ್ ಆರ ನೇ ತಾರೀಖು ಬುಧವಾರ ಮಧ್ಯಾಹ್ನ 3:37 ಕ್ಕೆ ಪ್ರಾರಂಭವಾದ ರೆ ಸೆಪ್ಟೆಂಬರ್ ಐದನೇ ತಾರೀಕು ಗುರುವಾರ ಸಂಜೆ 4:14 ಕ್ಕೆ ಮುಕ್ತಾಯವಾಗುತ್ತೆ. ಎರಡು ದಿನಗಳಲ್ಲೂ ಕೂಡ ಅಷ್ಟೇ ಮಿತಿ ಇರುವುದರಿಂದ ಸೆಪ್ಟೆಂಬರ್ 6 ಬುಧವಾರ ಮತ್ತು ಸೆಪ್ಟೆಂಬರ್ 7 ಗುರುವಾರ ಎರಡು ದಿನಗಳಲ್ಲೂ ಕೂಡ ಗೋಕುಲಾಷ್ಟಮಿ ಕೃಷ್ಣ ಪೂಜೆಯನ್ನು ಮಾಡಬಹುದು.

ಈ ಕೃಷ್ಣ ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ನಾವು ಶ್ರೀ ಕೃಷ್ಣನಿಗೆ ತುಂಬಾನೇ ಪ್ರಿಯ ವಾಗುವಂತಹ ವಿಶೇಷವಾದ ವಿಶೇಷವಾದೊಂದು ನೈವೇದ್ಯವನ್ನು ಮಾಡಬೇಕು. ಈ ರೀತಿಯಾಗಿ ಪೂಜಿಸಿದರೆ ಸಾಕು, ನಮ್ಮ ಎಲ್ಲಾ ಅಷ್ಟ ದರಿದ್ರಗಳು ಕೂಡ ಕಳೆಯುತ್ತವೆ. ಹಾಗಾದರೆ ಕೃಷ್ಣ ಜನ್ಮಾಷ್ಟಮಿಯಂದು ನಾವು ಕೃಷ್ಣನಿಗೆ ಯಾವ ಒಂದು ವಿಶೇಷವಾದ ನೈವೇದ್ಯ ವನ್ನು ಮಾಡು ಯಾವ ಸಮಯ ದಲ್ಲಿ ಪೂಜೆ ಮಾಡಬೇಕು, ಹೇಗೆ ಪೂಜೆ ಮಾಡಬೇಕು ಅನ್ನೋದನ್ನ ಇವತ್ತಿನ ಮಾಹಿತಿಯಲ್ಲಿ ಸರಳವಾಗಿ ತಿಳಿಯೋಣ. 

ಕೃಷ್ಣ ಜನ್ಮಾಷ್ಟಮಿಯ ದಿನದಂದು ನೀವು ಮನೆಯಲ್ಲಿ ಕೃಷ್ಣನ ಪೂಜೆಯನ್ನು ಮಾಡುತ್ತೀರೋ ಆ ಜಾಗವನ್ನು ಮೊದಲಿಗೆ ಸ್ವಚ್ಛ ಮಾಡಿಕೊಂಡು ಆ ಜಾಗದಲ್ಲಿ ಒಂದು ಟೇಬಲ್ ಅಥವಾ ಒಂದು ಪೀಠವನ್ನು ಒಂದು ಮನೆಯನ್ನು ಹಾಕಿ ಅದರ ಮೇಲೆ ಒಂದು ಕೆಂಪು ಬಣ್ಣದ ವಸ್ತ್ರ ತಪ್ಪಿದರೆ ಹಳದಿ ಬಣ್ಣದ ವಸ್ತ್ರ ವನ್ನು ಟೇಬಲ್ ಮೇಲೆ ಹಾಕಿ ಅದರ ಮೇಲೆ ನೀವು ಒಂದು ತಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇಡಬೇಕು. ಕೃಷ್ಣನ ವಿಗ್ರಹ ಇಲ್ಲ ಅನ್ನುವವರು ಕೃಷ್ಣನ ಫೋಟೋವನ್ನು ಕೂಡ ಇಡಬಹುದು. ಜೊತೆಗೆ ನಿಮ್ಮ ಹತ್ರ ರಾಧೆ ಮತ್ತು ಕೃಷ್ಣ ಇಬ್ಬರ ವಿಗ್ರಹ ಇದ್ರೆ. ಎರಡನ್ನು ಕೂಡ ಇಟ್ಟು ಪೂಜೆಯನ್ನು ಆ ದಿನ ಮಾಡಬಹುದು.

ಒಂದು ತಟ್ಟೆಯಲ್ಲಿ ಕೃಷ್ಣನ ವಿಗ್ರಹವನ್ನು ಇಟ್ಟು ಆ ವಿಗ್ರಹಕ್ಕೆ ಮೊದಲಿಗೆ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು. ಪಂಚಾಮೃತದಿಂದ ಅಭಿಷೇಕವನ್ನು ಮಾಡಿದ ನಂತರ ಗಂಗಾಜಲದಿಂದ ತಪ್ಪಿದರೆ ಶುದ್ಧವಾದ ನೀರಿನಿಂದ ಕೃಷ್ಣನ ವಿಗ್ರಹವನ್ನು ವಿಗ್ರಹಕ್ಕೆ ಅಭಿಷೇಕವನ್ನು ಮಾಡಿ ಕೃಷ್ಣನ ವಿಗ್ರಹವನ್ನು ಒಂದು ಕಾಟನ್ ಬಟ್ಟೆಯಿಂದ ಒರೆಸಿ ಸ್ವಚ್ಛ ಮಾಡಿ ನಂತರ ಕೃಷ್ಣನಿಗೆ ಹೊಸದಾದ ಬಟ್ಟೆಯನ್ನ ತೊಡಬೇಕು

ಅಂದ್ರೆ ಕೃಷ್ಣನ ವಿಗ್ರಹಕ್ಕೆ ಒಂದು ಹೊಸದಾದ ಬಟ್ಟೆಯನ್ನು ತೊಡಿಸಿ ಅಲಂಕಾರ ವನ್ನು ಮಾಡಿ ಶ್ರೀಗಂಧ ಚಂದನ ಮತ್ತೆ ಅಕ್ಷತೆಯ ತಿಲಕವನ್ನಿ ಕೃಷ್ಣನ ವಿಗ್ರಹ ಇಡ ಬೇಕು ವಿಗ್ರಹ ಇಲ್ಲ ಅನ್ನುವ ವರು ಫೋಟೋವನ್ನಿಟ್ಟು ಕೂಡ ಪೂಜೆ ಯನ್ನು ಮಾಡಬಹುದು. ಫೋಟೋಗೆ ನೀವು ಶ್ರೀಗಂಧ, ಚಂದನ ಮತ್ತು ಅಕ್ಷತೆ ತಿಲಕವನ್ನು ಇಡಿ.

ಫೋಟೋಗೆ ನೀವು ಅಭಿಷೇಕವನ್ನ ಮಾಡುವ ಅವಶ್ಯಕತೆಯಿಲ್ಲ. ವಿಗ್ರಹ ಇದ್ದರೆ ಮಾತ್ರ ಅಭಿಷೇಕ ವನ್ನು ಮಾಡಬೇಕು. ಫೋಟೊಗೆ ತಿಲಕವನ್ನು ಇಟ್ಟು ಹೂವುಗಳಿಂದ ಅಲಂಕಾರವನ್ನು ಮಾಡಿ ನಂತರ ನೀವು ಎಲ್ಲಿ ಕೃಷ್ಣ ನನ್ನ ಇಟ್ಟಿರೋ ಅದರ ಕೆಳಭಾಗದಲ್ಲಿ ಕೃಷ್ಣನ ಹೆಜ್ಜೆಗುರುತುಗಳನ್ನು ಹಾಕಿ ಕೃಷ್ಣನ ಹೆಜ್ಜೆ ಗುರುತುಗಳ ರಂಗೋಲಿಯನ್ನು ಹಾಕಿ. ಏಕೆಂದರೆ ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನು ತಮ್ಮ ಮನೆಗೆ ಬರುವನು ಅನ್ನುವ ನಂಬಿಕೆ ಇದೆ. ಹಾಗಾಗಿ ಅವತ್ತಿನ ದಿನದಂದು ಕೃಷ್ಣನ ಹೆಜ್ಜೆಗುರುತುಗಳನ್ನು ಅಕ್ಕಿಗಳಿಂದ ಮನೆಯಲ್ಲಿ ಬರೀರಿ ತುಂಬಾ ಅಂದ್ರೆ ತುಂಬಾನೇ ಒಳ್ಳೆಯದು.

ನಂತರ ಬೆಣ್ಣೆ ಹಾಲು, ಮೊಸರು, ಕಲ್ಲು, ಸಕ್ಕರೆ, ಪಂಚ ಖಾದ್ಯಗಳು ಶ್ರೀ ಕೃಷ್ಣನಿಗೆ ತುಂಬಾನೇ ಪ್ರಿಯವಾದದು. ಅವುಗಳನ್ನೆಲ್ಲ ನೈವೇದ್ಯವಾಗಿ ಅರ್ಪಿಸಿ ಹಾಗೇನೇ ಒಂದು ವಿಶೇಷವಾದ ನೈವೇದ್ಯವನ್ನ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲೇಬೇಕು ಎಂದರೆ ಅವಲಕ್ಕಿ ಸಿಹಿ, ಅವಲಕ್ಕಿ, ಅವಲಕ್ಕಿ ಅಂದ್ರೆ ಕೃಷ್ಣನಿಗೆ ತುಂಬಾನೇ ಪ್ರೀತಿ. ನೀವು ಈ ಶ್ರೀಕೃಷ್ಣ ಮತ್ತೆ ಅವಲಕ್ಕಿಯ ಕತೆಯನ್ನ ಕೇಳಿರ್ತೀರಾ ಅಂತ ಅಂದ್ಕೊಂಡಿದ್ದೀನಿ.

ಹಾಗಾಗಿ ಒಂದು ಯಾವುದಾದರು ಒಂದು ಅವಲಕ್ಕಿಯಿಂದ ಸಿಹಿಯನ್ನು ಮಾಡಿ ಅದನ್ನು ಕೃಷ್ಣನಿಗೆ ನೈವೇದ್ಯ ವಾಗಿ ಅರ್ಪಿಸಿ ನಂತ್ರ ತುಳಸಿಯನ್ನು ಕೂಡ ಅವತ್ತಿನ ದಿವಸ ಶ್ರೀಕೃಷ್ಣನಿಗೆ ಅರ್ಪಿಸಿ.ನೂರಾ ಎಂಟು ತುಳಸಿ ದಳಗಳಿಂದ ಕೃಷ್ಣ ಅಷ್ಟೋತ್ತರವನ್ನು ಹೇಳಿಕೊಂಡು ಶ್ರೀಕೃಷ್ಣನಿಗೆ ಅವತ್ತಿನ ದಿವಸ ತಪ್ಪ ದೆ ಅರ್ಚನೆಯನ್ನು ಮಾಡಿ ದೀಪ ವನ್ನು ಹಚ್ಚಿ ದೂಪ ಮಾಡಿ ಮಂಗಳಾರತಿ ಯನ್ನು ಮಾಡಿ ಕೊನೆಯಲ್ಲಿ ಶ್ರೀಕೃಷ್ಣನಿಗೆ ಮರೆಯದೇ ಆರತಿಯನ್ನು ಮಾಡಿ.

ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೆಲವೊಬ್ಬರು ಮನೆಯಲ್ಲಿ ಒಂದು ಪುಟ್ಟದಾದ ತೊಟ್ಟಿಲನ್ನ ಸಿಂಗರಿಸಿ ಆ ತೊಟ್ಟಿಲ ಲ್ಲಿ ಒಂದು ಪುಟ್ಟದಾದ ಕೃಷ್ಣನ ವಿಗ್ರಹವನ್ನು ತೊಟ್ಟಿಲನ್ನು ತೂಗುತ್ತಾರೆ. ಈ ಸಂಪ್ರದಾಯ ಕೂಡ ಕೆಲವು ಕಡೆ ಇದೆ. ಇನ್ನು ಕೃಷ್ಣ ಜನ್ಮಾಷ್ಟಮಿ ದಿನದಂದು ಉಪವಾಸ ವ್ರತವನ್ನು ಕೂಡ ಮಾಡಬಹುದು. ಏಕಾದಶಿಯಂದು ನಾವು ಯಾವ ರೀತಿಯಾಗಿ ಉಪವಾಸ ವನ್ನು ಮಾಡ್ತೀ ವೋ ಅದೇ ರೀತಿಯಾಗಿ ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ವನ್ನು ಮಾಡಬೇಕು.

ಆ ದಿನ ಉಪವಾಸವನ್ನು ಮಾಡುವವರು ಯಾವುದೇ ತರಹದ ಧಾನ್ಯಗಳನ್ನ ಕಾಳು ಗಳನ್ನು ಅವತ್ತಿನ ದಿವಸ ತಿನ್ನಬಾರದು ಅನ್ನವನ್ನು ಸೇವನೆ ಮಾಡಬಾರದು. ಹಾಲು ಮತ್ತು ನೀರು ,ಹಣ್ಣುಗಳನ್ನು ಸೇವನೆ ಮಾಡಬಹುದು. ಇನ್ನು ಯಾವ ಸಮಯ ದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಪೂಜೆ ಯನ್ನು ಮಾಡಬೇಕು ಅನ್ನೋದಾದ್ರೆ ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದ ಸಮಯ ದಲ್ಲಿ ಮಧ್ಯರಾತ್ರಿ ಜನಿಸಿದನು ಅಂತ ಹೇಳ್ತಾರೆ .

ಈ ರೋಹಿಣಿ ನಕ್ಷತ್ರ ಬಂದಿರುವುದು ಸೆಪ್ಟೆಂಬರ್ ಆರನೇ ತಾರೀಖು ಬುಧವಾರ ಬೆಳಿಗ್ಗೆ 9:00 ಘಂಟೆ 20 ನಿಮಿಷ ಕ್ಕೆ ರೋಹಿಣಿ ನಕ್ಷತ್ರ ಪ್ರಾರಂಭವಾದರೆ ಸೆಪ್ಟೆಂಬರ್ ಎರಡನೇ ತಾರೀಖು ಗುರುವಾರ ಬೆಳಗ್ಗೆ 10:25 ಕ್ಕೆ ಮುಕ್ತಾಯವಾಗುತ್ತೆ. ಆರನೇ ತಾರೀಖು ನೀವು ಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮಾಡುವವರು ಸಂಜೆ ಸಮಯದಲ್ಲಿ ಕೃಷ್ಣನ ಪೂಜೆ ಯನ್ನು ಮಾಡಿ ಸೆಪ್ಟೆಂಬರ್ 2ನೇ ತಾರೀಕು ಗುರುವಾರದಂದು ನೀವು ಕೃಷ್ಣ ಜನ್ಮಾಷ್ಟಮಿ ಪೂಜೆ ಯನ್ನು ಮಾಡುವವರು ಬೆಳಗ್ಗೆ 10:25 ದವರೆಗೂ ಕೂಡ ರೋಹಿಣಿ ನಕ್ಷತ್ರದ ಸಮಯ ಇದೆ. ಆ ಆ ಸಮಯದೊಳಗೆ ನೀವು ಕೃಷ್ಣನ ಪೂಜೆಯನ್ನು ಮಾಡಿ ಮುಗಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

Leave a Reply

Your email address will not be published. Required fields are marked *