ಕೊಟ್ಟ ಸಾಲ ಮರಳಿ ಪಡೆಯಲು ಮಹಾ ಶಕ್ತಿಶಾಲಿ ತಂತ್ರ ಮಾಡಿ 20 ದಿನದಲ್ಲಿ ಕೊಟ್ಟ ಹಣ ಬಂದು ಕೈ ಸೇರುತ್ತೆ

Featured Article

ಎಷ್ಟೋ ಜನರಿಗೆ ಕೊಟ್ಟ ಸಾಲ ಮತ್ತೆ ಬರುವುದಿಲ್ಲ. ಕೆಲವರ ಜೀವನದಲ್ಲಿ ಹೇಗಿರುತ್ತೆ ಅಂದ್ರೆ ಕೊಟ್ಟವನು ಕೋಡಂಗಿ ಇಸ್ಕೊಂಡವನು ವೀರಭದ್ರ ಎನ್ನುವ ಗಾದೆ ಮಾತಿನ ಹಾಗೆ ಅವರ ಜೀವನದಲ್ಲಿ ಆಗಿ ಹೋಗಿರುತ್ತೆ. ಕೆಲವರಿಗೆ ಯಾಕಾದ್ರೂ ದುಡ್ಡು ಇವನಿಗೆ ಕೊಟ್ಟನೋ ಅನ್ನುವ ಭಾವನೆಯಲ್ಲಿ ಒದ್ದಾಡ್ತಿರ್ತಾರೆ. ಇನ್ನು ಕೆಲವರಿಗೆ ಸಮಯ ಸಂದರ್ಭದ ಪರಿಸ್ಥಿತಿಗೆ ಅನುಗುಣವಾಗಿ ಸ್ನೇಹಿತರಿಗೂ ಬಂಧುಗಳಿಗೂ ಕೊಟ್ಟು ಬಿಟ್ಟಿರುತ್ತಾರೆ.

ಅವರಿಂದ ಆ ದುಡ್ಡನ್ನು ಮರಳಿ ಪಡೆಯಲು ಆಗುತ್ತಿರುವುದಿಲ್ಲ. ಮತ್ತೆ ಕೇಳಲು ಆಗುತ್ತಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿ ಕೊಂಡಿರುತ್ತಾರೆ.ಈಗ ನಾವು ಹೇಳುವಂತಹ ಈ ತಂತ್ರವನ್ನು ಮಾಡಿದೆ.ಬುದ್ಧಿವಂತಿಕೆ ಯಿಂದ ನೀವು ನಿಮ್ಮ ದುಡ್ಡನ್ನು ಪಡೆದುಕೊಳ್ಳಬಹುದು. ಆ ತಂತ್ರ ಯಾವುದು ಅಂತ ತಿಳಿಸ್ತೀನಿ.

ಎಲ್ಲರಿಗೂ ತಿಳಿದಿರುವ ಹಾಗೆ ಹಣ ಕಾಸಿನ ಸಮಸ್ಯೆ ಎನ್ನುವುದು ಹೇಳಿಕೊಳ್ಳಲಾಗದ ಧರ್ಮ ಸಂಕಟವಾಗಿ ಪರಿಣಮಿಸ ಇರುತ್ತೆ. ಹೇಳಿಕೊಂಡರು. ಕಷ್ಟ ಹೇಳಿಕೊಳ್ಳಲಾಗದಿದ್ದರೂ ಕಷ್ಟ ಅನ್ನುವ ಹಾಗೆ ಹಣ ಕಾಸಿನ ಸಮಸ್ಯೆ ಎದುರಾಗಿರುತ್ತೆ.ಇನ್ನು ಕೆಲವರಿಗೆ ಕೊಟ್ಟ ದುಡ್ಡು ಎಷ್ಟೇ ಪ್ರಯತ್ನ ಪಟ್ಟರು, ಹೇಗೆ ಕೇಳಿದರೂ ಅವರು ಕೊಡುವುದಿಲ್ಲ.

ಅವರಿಗಾಗಿ ಈ ತಂತ್ರ ಮಾಡಿ ಅಂದ್ರೆ ಒಂದು ಬಿಳಿಯ ಹಾಳೆ ಮೇಲೆ ಯಾರಾದರೂ ಒಬ್ಬ ವ್ಯಕ್ತಿ ನಿಮಗೆ ದುಡ್ಡು ಕೊಡಬೇಕು ಅಂತ ಆದ್ರೆ ಆ ವ್ಯಕ್ತಿಯ ಹೆಸರಿನ ಕೆಳಗೆ ಅವನು ಕೊಡುವ ಮೊತ್ತವನ್ನು ಬರೆಯ ಬೇಕು ಅಂದ್ರೆ ಬಾಲಕೃಷ್ಣ ನನಗೆ 50,000 ಕೊಡಬೇಕು. ಹಾಗಂತ ಒಂದು ಬಿಳಿಯ ಹಾಳೆ ಮೇಲೆ ಬರೆದು ಅದರ ಮೇಲೆ ಒಣ ಮೆಣಸಿನಕಾಯಿ ಮತ್ತು ಲವಂಗವನ್ನು ಇಡಬೇಕು.

ಹಾಗೂ ಮೂರು ಅರಿಶಿನದ ಕೊಂಬನ್ನು ಅದರ ಮೇಲಿಟ್ಟು ಮಾಡಬೇಕು ಮತ್ತು ₹10 ನೋಟನ್ನು ತೆಗೆದುಕೊಳ್ಳ ಬೇಕು. ಅದನ್ನು ಸಹ ನೀವು ಅದರ ಜೊತೆಗೆ ಇಡಬೇಕು. ಮನೆ ದೇವರ ಮುಂದೆ ಇಟ್ಟು ಸಂಕಲ್ಪವನ್ನು ಮಾಡಿಕೊಳ್ಳಬೇಕು ಅಂದ್ರೆ ಇಷ್ಟು ದುಡ್ಡು ನಾನು ಅವನಿಗೆ ಸಾಲವಾಗಿ ಕೊಟ್ಟಿದ್ದೇನೆ. ಆದರೆ ಆ ದುಡ್ಡು ನಾನು ಎಷ್ಟೇ ಪ್ರಯತ್ನ ಮಾಡಿದರು. ಮತ್ತೆ ಮರಳಿ ಪಡೆಯಲು ಸಾಧ್ಯ ಆಗ್ತಾ ಇಲ್ಲ.

ಹೇಗಾದರೂ ಮಾಡಿ ಅದು ಹಿಂಪಡೆಯುವಂತೆ ಆಗ ಬೇಕು ಎಂದು ಭಕ್ತಿಯಿಂದ ಸಂಕಲ್ಪವನ್ನು ಮಾಡಿ ಅದೇ ₹10 ನೋಟ್ ಅನ್ನ ನಿಮ್ಮ ಜೇಬಿನಲ್ಲಿ ಇಟ್ಕೋಬೇಕು ಮತ್ತು ನಾವು ಹೇಳಿದ ಆ ವಸ್ತುಗಳನ್ನೆಲ್ಲ ಚೀಟಿ ಒಳಗೆ ಸುತ್ತಿ ಹಳದಿ ದಾರದಲ್ಲಿ ಕಟ್ಟಿ ಹರಿಯುವ ನದಿಯಲ್ಲಿ ಅದನ್ನು ವಿಸರ್ಜನೆ ಮಾಡಬೇಕು. ಹರಿಯುವ ನದಿ ಇಲ್ಲ ಅನ್ನೋದಾದ್ರೆ ಅದನ್ನೆಲ್ಲ ಸೇರಿಸಿ ಅರಳಿ ಮರದ ಬುಡದಲ್ಲಿ ಬೆಂಕಿ ಹಾಕಿ ಸುಟ್ಟು ಹಾಕಬೇಕು. ಅದಾದ ನಂತರ ಆ 10 ರೂಪಾಯಿಯಿಂದ ಯಾರಿಗಾದರೂ ದಾನ ಮಾಡಿದರೆ ನಿಮ್ಮ ದುಡ್ಡು ನಿಮಗೆ 20 ದಿನಗಳಲ್ಲಿ ಬಂದು ಕೈ ಸೇರುತ್ತೆ. 

https://youtu.be/9gRHnyuDJro?si=PMjreu_o9NOlNzxC

Leave a Reply

Your email address will not be published. Required fields are marked *